ಪ್ರತಿಯೊಬ್ಬರ ಮನಸ್ಸಿನಲ್ಲಿ ಕನ್ನಡಾಭಿಮಾನ ಇರಬೇಕು

ನ್ಯಾಮತಿ.ಮೇ.೮; ಕನ್ನಡ ನಾಡಿನಲ್ಲಿ ವಾಸವಿರುವ ಪ್ರತಿಯೊಬ್ಬರ ಮನಸ್ಸಿನಲ್ಲಿ ಕನ್ನಡದ ಬಗ್ಗೆ ತುಡಿತ ಇರಬೇಕು ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ವಂದನ ತಿಳಿಸಿದರುಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತು ಕಚೇರಿಯಲ್ಲಿ  ಕನ್ನಡ ಸಾಹಿತ್ಯ ಪರಿಷತ್ತಿನ 109ನೇ ಸಂಸ್ಥಾಪನೆ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು ಕನ್ನಡ ನಾಡು ನುಡಿ ಹಿತಚಿಂತಕ ಆರುಂಡಿ ಕೋಟೆ ಕರೆಗೌಡ ನಾಗರಾಜಪ್ಪ ಕನ್ನಡ  ಅಸ್ಮಿತೆ- ಕನ್ನಡ ಸಾಹಿತ್ಯ ಪರಿಷತ್ತು ಕುರಿತು ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ನಡೆದು ಬಂದ ದಾರಿಯನ್ನು ಹಾಗೂ ಪ್ರಸ್ತುತ ಜನ ಸಾಮಾನ್ಯರ ಪರಿಷತ್ತು ಆಗಿರುವ ಬಗ್ಗೆ ಕುರಿತು ಮಾತನಾಡಿದರು ತಾಲೂಕು ಕದಳಿ ಮಹಿಳಾ ವೇದಿಕೆ ಅಧ್ಯಕ್ಷ ಅಂಬಿಕಾ ಬಿದರಗೆಡ್ಡೆ ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂವಿ ಶಿವಯೋಗಿ ನಿಕಟ ಪೂರ್ವ ಅಧ್ಯಕ್ಷ ಜಿ ನಿಜಲಿಂಗಪ್ಪ ಸದಸ್ಯರಾದ ಜಿಕೆ ಭೋಜರಾಜ್ ಸೈಶಾದ್ ಅಪ್ಸರ ಭಾಷಾ  ರೇವಣಸಿದ್ದಪ್ಪ ಮಾತನಾಡಿದರು ಆರುಂಡಿ ಕೆ ಮಂಜಪ್ಪ ಬೆಳಗುತ್ತಿ ಸಿ ಕೆ ಬೋಜರಾಜ್ ಕವಿರಾಜ್ ರೇವಣಸಿದ್ದಪ್ಪ ಭಾಗ್ಯಲಕ್ಷ್ಮಿ ನಾಗಮೂರ್ತಿ ಕನ್ನಡ ನಾಡು ನುಡಿ ಗಾಯನ ನಡೆಸಿಕೊಟ್ಟರು.ಕಸಾಪ  ಅಧ್ಯಕ್ಷ ಡಿ ಎಂ ಹಾಲಾರಾಧ್ಯ ಅಧ್ಯಕ್ಷತೆ ವಹಿಸಿದ್ದರು. ಅಜೀವ ಸದಸ್ಯರು ವಾಲ್ಮೀಕಿ ಮತ್ತು ಮುಸ್ಲಿಂ ಸಮುದಾಯದ ಮುಖಂಡರು ಕನ್ನಡ ಅಭಿಮಾನಿಗಳು ಉಪಸ್ಥಿತರಿದ್ದರು. ಕೋಶಧ್ಯಕ್ಷ ಕೆ ಎಂ ಬಸವರಾಜಪ್ಪ ವಾಸ್ತವಿಕ ಮಾತನಾಡಿದರು. ಗೌರವ ಕಾರ್ಯದರ್ಶಿ ಎಸ್‌ಜಿ ಬಸವರಾಜಪ್ಪ ಸ್ವಾಗತಿಸಿದರು ಭಾಗ್ಯಲಕ್ಷ್ಮಿ ನಿರೂಪಿಸಿದರು ಬೆಳಗತ್ತಿ ಹೋಬಳಿ ಕಸಪ್ಪ ಅಧ್ಯಕ್ಷ ಎಂಜಿ ಕವಿರಾಜ್ ವಂದಿಸಿದರು.