ಪ್ರತಿಯೊಬ್ಬರ ಗ್ರಂಥ ಸಂವಿಧಾನವಾಗಿದೆ : ಶಾಸಕಿ ಎಂ.ಪಿ.ಲತಾ

ಸಂಜೆವಾಣಿವಾರ್ತೆ 

ಹರಪನಹಳ್ಳಿ.ಫೆ.20; ಸಂವಿಧಾನ ಜಾರಿಗೆ ತರಲು ಅನೇಕ ಮಹಾನೀಯರು ಹಗಲಿರುಳು ಶ್ರಮಿಸಿದ್ದಾರೆ. ನಮ್ಮ ದೇಶದ ಸಂವಿಧಾನದಲ್ಲಿರುವ ಅಂಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಲು ಮುಂದಾಗಬೇಕು ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ತಿಳಿಸಿದರು.ತಾಲೂಕಿನ ಹಲುವಾಗಲು ಗ್ರಾಮದ್ಲಿ ಕರ್ನಾಟಕ ಸರ್ಕಾರದ ಜಿಲ್ಲಾಪಂಚಾಯಿತಿ, ಗ್ರಾಮ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ 75ನೇ ಸಂವಿಧಾನ ದಿನಾಚರಣೆ ಹಾಗೂ ಸಂವಿಧಾನ ಜಾಗೃತೆ, ಸ್ಥಬ್ದ ಚಿತ್ರ ಅನಾವರಣಕ್ಕೆ ಚಾಲನೆ ನೀಡಿ ಮಾತನಾಡಿದರು.ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳು ಕೊಡಲಾಗಿದೆ ಅವುಗಳನ್ನು ಬಳಸಿಕೊಳ್ಳಬೇಕು ಅದೇ ರೀತಿಯಾಗಿ ಸಂವಿಧಾನದಲ್ಲಿರುವ ಕರ್ತವ್ಯಗಳನ್ನು ಸಹ ಮರೆಯದಂತೆ ಜಾಗೃತರಾಗಿರಬೇಕು ಸಿದ್ದರೀರಬೇಕು ಎಂದರು.ಗ್ರಾಪಂ ಅಧ್ಯಕ್ಷೆ ಭೋವಿ ಸರಿತಾ ರಮೇಶ್‌ರವರು ಸಂವಿಧಾನದ ಜಾಥ ಮೇರವಣಿಗೆಗೆ ಚಾಲನೆ ನೀಡಿದರು. ಮೇರವಣಿಗೆಯು ಮಾರುತಿ ಪಬ್ಲಿಕ್ ಶಾಲೆಯಿಂದ ಆರಂಭವಾಗಿ, ಗ್ರಾಮದ ಮುಖ್ಯ ರಸ್ತೆಯಲ್ಲಿ ಬೈಕ್ ರ‍್ಯಾಲಿ, ಕುಂಭಮೇಳ, ಕಳಸ ಮೇಳ, ಹಲಗೆವಾದ್ಯ, ಲಂಬಾಣಿ ನೃತ್ಯ, ಡೊಳ್ಳುಕುಣಿತ ಸೇರಿದಂತೆ ವಿವಿಧ ಕಲಾತಂಡಗಳಿAದ ಜಾಥಕ್ಕೆ ಮೆರಗು ನೀಡಲಾಯಿತು. ಎಸ್.ನಿಜಲಿಂಗಪ್ಪ ರಂಗ ಮಂದಿರದಲ್ಲಿ ಕಾರ್ಯಕ್ರಮವನ್ನು ಜರುಗಿತು. ನಂತರ ಸಂಜೆ ಮೇಣದಭತ್ತಿಯನ್ನು ಪ್ರದರ್ಶಿಸಲಾಯಿತು.ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದ ಜನರನ್ನು ರಂಜಿಸಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಂ.ನಾಗರಾಜ, ಸದಸ್ಯರಾದ ಕೆ.ಹೇಮಾ, ಭೋವಿ ಅಶ್ವಿನಿ, ಡಿ.ಹೂವಕ್ಕ, ಎ.ಶೈಲಾ, ಕೆ.ಕೊಟ್ರಮ್ಮ, ಡಿ.ಸುಮಲತಾ, ಎಂ.ಧ್ಯಾಮಪ್ಪ, ಕೆ.ಮಂಜಪ್ಪ, ಕೂಸಂಬಿ ಮಂಜಪ್ಪ, ಕೆ.ಪ್ರಭು, ಎನ್.ರಾಹುಲ್, ಹೀರನಾಯ್ಕ, ರಾಜನಾಯ್ಕ, ಯರಬಾಳು ದ್ರಾಕ್ಷಿಯಿಣಮ್ಮ, ವೈ.ರುದ್ರಪ್ಪ, ಪಿ.ಸುರೇಶ್, ಬಿ.ಶಿವಪ್ಪ, ಎ.ಪಾರ್ವತಿ, ಸಮಾಜ ಕಲ್ಯಾಣಾಧಿಕಾರಿ ರೇಣುಕಾದೇವಿ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಎ.ಎಂ.ಶAಭುಲಿAಗಯ್ಯ, ಶಾಲೆಯ ಮುಖ್ಯಸ್ಥರು, ಸೇರಿದಂತೆ ಗ್ರಾಮಸ್ಥರು ಇದ್ದರು.