ಪ್ರತಿಯೊಬ್ಬರೂ ಸಹ ಉತ್ತಮ ಪ್ರತಿನಿಧಿಯನ್ನು ಆಯ್ಕೆಮಾಡಿ- ಈ.ತುಕರಾಂ

ಸಂಡೂರು:ಅ:29: ಸಂಡೂರು ತಾಲೂಕಿನ ಪ್ರತಿಯೊಬ್ಬ ಪ್ರಜೆಗಳೂ ಸಹ ಪ್ರಜ್ಞಾವಂತರಿದ್ದು ಯಾವುದೇ ರೀತಿಯ ಗೊಂದಲಕ್ಕೆ ಅವಕಾಶವಾಗದಂತೆ ಮತದಾನ ನಡೆಯಬೇಕು ಅದಕ್ಕೆ ತಾಲೂಕು ಅಡಳಿತ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಶಾಸಕ ಈ.ತುಕರಾಂ ತಿಳಿಸಿದರು.
ಅವರು ಇಂದು ಪಟ್ಟಣದ ತಾಲೂಕು ಕಛೇರಿಯ ಅವರಣದಲ್ಲಿ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಅಂಗವಾಗಿ ನಡೆಯುತ್ತಿದ್ದ ಮತದಾನದ ಸಂದರ್ಭದಲ್ಲಿ ಮತಗಟ್ಟೆಯ ಸುತ್ತಲಿನ ಅವರಣ ಹಾಗೂ ವ್ಯವಸ್ಥೆಯನ್ನು ಪರಿಶೀಲನೆ ಮಾಡಿ ಮಾತನಾಡಿ ಇದು ಪ್ರಜ್ಞಾವಂತರ ಹಾಗೂ ದೇಶಕಟ್ಟುವ ಶಿಕ್ಷಕರು ಆಯ್ಕೆಮಾಡುವಂತಹ ಪ್ರಜ್ಞಾವಂತರ ವೇದಿಕೆಯಾದ ವಿಧಾನ ಪರಿಷತ್ತಿನ ಚುನಾವಣೆಯಾಗಿದ್ದು ಪ್ರತಿಯೊಬ್ಬರೂ ಸಹ ಅವಶ್ಯವಾಗಿ ಮತದಾನ ಮಾಡಬೇಕು, ಡಾ. ಬಿ.ಅರ್. ಅಂಬೇಡ್ಕರ್ ಅವರು ನೀಡಿದ ಸಂವಿಧಾನ ಬದ್ಧವಾದ ಮತದಾನ ಹಕ್ಕನ್ನು ಚಲಾಯಿಸುವ ಮೂಲಕ ಪ್ರಜ್ಞಾವಂತರನ್ನು ನಿಜವಾದ ಜನಸೇವೆ ಮಾಡುವವರನ್ನು ಆಯ್ಕೆಮಾಡಬೇಕು, ಶಿಕ್ಷಕರು ದೇಶಕಟ್ಟುವವರು ಅವರು ಉತ್ತಮರನ್ನೇ ಆಯ್ಕೆಮಾಡುತ್ತಾರೆ ಎನ್ನುವ ವಿಶ್ವಾಸ ವಿದೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೇಸ್, ಬಿಜೆಪಿ ಪಕ್ಷದ ಕಾರ್ಯಕರ್ತರು ಅಕ್ಕ-ಪಕ್ಕದಲ್ಲಿಯೇ ಟೆಂಟ್‍ಗಳನ್ನು ಹಾಕಿಕೊಂಡು ಕುಳಿತ್ತಿದ್ದರು, ಶಾಸಕರು, ಕಾಂಗ್ರೇಸ್ ಹಾಗೂ ಬಿಜೆಪಿ ಕಾರ್ಯಕರ್ತರ ಹತ್ತಿರವೂ ಸಹ ಹೋಗಿ ಇಬ್ಬರಲ್ಲಿಯೂ ಬಹು ಸಂತೋಷದಿಂದ ಮಾತುಕತೆ ನಡೆಸಿದ್ದು ವಿಶೇಷವಾಗಿತ್ತು.