
ಸಂಜೆವಾಣಿ ವಾರ್ತೆಸಂಡೂರು:ಅ: 19: ವಿದ್ಯಾರ್ಥಿಗಳು ಅಧುನಿಕ ವಿಜ್ಞಾನ ಯುಗದಲ್ಲಿದ್ದರೂ ಸಹ ಮೂಢನಂಬಿಕೆಗಳಿಗೆ ಬಲಿಯಾಗುತ್ತಿರುವುದು ಅತಂಕದ ಸಂಗತಿ, ಅದಕ್ಕಾಗಿ ಪ್ರತಿಯೊಬ್ಬರಿಗೂ ಸಹ ವೈಜ್ಞಾನಿಕ ಮನೋಭಾವ ಮತ್ತು ನಮ್ಮ ಕರ್ತವ್ಯಗಳನ್ನು ತಿಳಿಸುವಂತಹ ಮಹತ್ತರ ಕಾರ್ಯವನ್ನು ಯು.ಭೂಪತಿ ಸ್ಮಾರಕ ಟ್ರಸ್ಟ್ ಇಂದು ಡಾ.ಎನ್.ಗಾಯಿತ್ರಿಯವರ ಕಲಿ-ಕಲಿಸು ಬೆಂಗಳೂರು ಇವರ ಸಹಯೋಗದಲ್ಲಿ ನಡೆಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಡಾ. ವಸುಂಧರಾ ಭೂಪತಿ ತಿಳಿಸಿದರು.ಅವರು ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಯು.ಭೂಪತಿ ಸ್ಮಾರಕ ಟ್ರಸ್ಟ್ ಸಹಯೋಗದಲ್ಲಿ ಕಲಿ-ಕಲಿಸು, ಬೆಂಗಳೂರು, ಸರ್ಕಾರಿ ಪ್ರಥಮದರ್ಜೆ ಕಾಲೇಜು ಸಂಡೂರು ವತಿಯಿಂದ ವೈಜ್ಞಾನಿಕ ಮನೋಭಾವ ಮತ್ತು ನಮ್ಮ ಕರ್ತವ್ಯ ಎನ್ನುವ ವಿಷಯಕುರಿತು ವಿಶೇಷ ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿ 2017ರಲ್ಲಿ ಭೂಪತಿಯವರು ನಮ್ಮನ್ನು ಅಗಲಿದ್ದಾರೆ, ಅದರೆ ಅವರು ಮೂಢನಂಬಿಕೆ ಮತ್ತು ಕಂದಾಚಾರಗಳ ವಿರುದ್ದ ಹೆಚ್.ನರಸಿಂಹಯ್ಯನವರ ತತ್ವದಂತೆ ಇಂದು ಅವುಗಳ ವಿರುದ್ಧ ನಿರಂತರ ಹೋರಾಟವನ್ನು ಮಾಡಿದವರು ಅದಕ್ಕಾಗಿ ಭೂಪತಿಯವರ ಹೆಸರಿನಲ್ಲಿ ಟ್ರಸ್ಟ್ ನಿರಂತರವಾಗಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ, ಇಂದು ನಂಬಿಕೆ ಮತ್ತು ಮೂಢನಂಬಿಕೆ ಅತಿಯಾಗುತ್ತಿದೆ, ಟಿ.ವಿ. ಮುಂದೆ ಕುಳಿತರೆ ಸಾಕು ಮೂಢನಂಬಿಕೆಯ ಹೆಸರಿನಲ್ಲಿ ಜನರಿಗೆ ತಪ್ಪುದಾರಿಗೆ ತಳ್ಳುವಂತಹದ್ದಾಗಿದೆ, ಹುಟ್ಟಿದ ಮಗುವೂ ಸಹ ಕೆಟ್ಟ ನಕ್ಷತ್ರದಲ್ಲಿ ಹುಟ್ಟಿದೆ ಎಂದು ಹತ್ಯೆಮಾಡುವ ಹಂತಕ್ಕೆ ನಾವು ಮೌಢ್ಯಕ್ಕೆ ಒಳಗಾಗಿದ್ದೇವೆ ಅದ್ದರಿಂದ ಅದರಿಂದ ಹೊರಬರಬೇಕಾದರೆ ಯುವಕರಿಗೆ, ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಮನೋಭಾವದ ಜಾಗೃತಿ ಉಂಟುಮಾಡಲು ಈ ಯೋಜನೆ ಎಂದರು.ಈ ಸಂದರ್ಭದಲ್ಲಿ ಸಂವಿಧಾನದ ಪೀಠಿಕೆಯನ್ನು ಓದುವ ಮೂಲಕ ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲರು ಉದ್ಘಾಟಿಸಿ ಮಾತನಾಡಿ ಯು.ಭೂಪತಿ ಸ್ಮಾರಕ ಟ್ರಸ್ಟ್‍ನವರು ಇಂತಹ ವೈಜ್ಞಾನಿಕ ಮನೋಭಾವ ಮತ್ತು ಕರ್ತವ್ಯಗಳನ್ನು ತಿಳಿಸುತ್ತಿರುವುದು ಬಹು ಮುಖ್ಯ, ಕಾರಣ ನಾವು ನಮ್ಮ ಕರ್ತವ್ಯಗಳನ್ನು ಮರೆಯುತ್ತಿದ್ದು ಅವುಗಳನ್ನು ನೆನಪಿಸುವ ಮತ್ತು ಮೌಢ್ಯತೆಯನ್ನು ಹೊಡೆದೊಡಿಸುವ ಕಾರ್ಯಕ್ರಮ ಬಹು ಉತ್ತಮ ಎಂದರು.ಮುಖ್ಯ ಉಪನ್ಯಾಸಕರಾಗಿ ಬೆಂಗಳೂರಿನ ಕಲಿ-ಕಲಿಸು ಸಂಸ್ಥೆಯ ಎನ್.ಗಾಯತ್ರಿಯವರು ಮಾತನಾಡಿ ಹಕ್ಕುಗಳ ಜೊತೆ ಕರ್ತವ್ಯ ಬಹುಮುಖ್ಯವಾ, ಅಗಸ್ಟ್ 20 ರಂದು ವೈಜ್ಞಾನಿಕ ಮನೋಭಾವದ ದಿನವನ್ನಾಗಿ ಆಚರಿಸುತ್ತೇವೆ, ಇಂದು ಕುರುಡುನಂಬಿಕೆಗಳನ್ನು ಸ್ವಾಮಿಗಳು, ಬಾಬಾಗಳು, ಬೂದಿಬಾಬಗಳು ಜನರನ್ನು ಶೋಷಣೆ ಮಾಡುತ್ತಿದ್ದಾರೆ ಅದ್ದರಿಂದ ವೈಜ್ಞಾನಿಕ ಭಾವನೆ ಬಹು ಮುಖ್ಯವಾಗಿದ್ದು ಪ್ರಶ್ನಿಸುವ ಮೂಲಕ ಆಚರಿಸಿ ಎಂದರು.ಕಾರ್ಯಕ್ರಮದಲ್ಲಿ ಮತ್ತೋಬ್ಬ ಉಪನ್ಯಾಸಕರಾದ ಹೆಚ್.ವಿ. ನಟರಾಜ ಅವರು ವೈಜ್ಞಾನಿಕ ಆಚರಣೆ ನಮ್ಮ ಕರ್ತವ್ಯವಾಗಬೇಕು, ಇದು ವಿಜ್ಞಾನದ ತಲಹದಿ, ಅಪರೂಪಕ್ಕೆ ಬರುವ ಗ್ರಹಣಗಳನ್ನು ನೋಡಲಿಕ್ಕೆ ಬಿಡದಂತಹ ಸ್ಥಿತಿ ಉಂಟಾಗಿದೆ, ಪ್ರಗತಿಯ ಹಾದಿಯಲ್ಲಿ ಸಾಗುತ್ತಿರುವ ನಾವು ಮೂಢನಂಬಿಕೆಗಳಿಗೆ ಬಲಿಯಾಗುತ್ತಿದ್ದೇವೆ, ಅದರಲ್ಲೂ ಭೌತಶಾಸ್ತ್ರ ಉಪನ್ಯಾಸಕರೂ ಸಹ ಒಳಗಾಗುತ್ತಿರುವುದು ಶೋಚನೀಯ ಎಂದರು.ಕಾರ್ಯಕ್ರಮವನ್ನು ಉಪನ್ಯಾಸಕರಾದ ಡಾ. ಈ.ಜಿ. ರೇಖಾ ನಿರೂಪಿಸಿದರು, ಡಾ. ತಿಪ್ಪೇರುದ್ರಪ್ಪ ಸ್ವಾಗತಿಸಿದರು,ಬಸವರಾಜ ಬಣಕಾರ ವಂದಿಸಿದರು, ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಸಭೆಯಲ್ಲಿ ವಿದ್ಯಾರ್ಥಿಗಳು, ಸಿ.ಡಿ.ಸಿ. ಸಮಿತಿ ಸದಸ್ಯರಾದ ಜಿ.ವೀರೇಶ್, ಕಾಲೇಜಿನ ಎಲ್ಲಾ ಉಪನ್ಯಾಸಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.