ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳಿ : ಸಿಡಿಪಿಒ ಹಿರೇಮಠ

ಔರಾದ್ :ಜೂ.8: ಕೊರೋನ ತಡೆಗಟ್ಟಲು ಪ್ರತಿಯೊಬ್ಬರು ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡೆಯುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು ಎಂದು
ಸಿಡಿಪಿಒ ಶಂಬುಲಿಂಗ ಹಿರೇಮಠ ಹೇಳಿದರು.

ತಾಲೂಕಿನ ಕೊಳ್ಳೂರ ಗ್ರಾಮದಲ್ಲಿ ಸೋಮವಾರ ಆರೋಗ್ಯ ಇಲಾಖೆ ಹಾಗೂ ಸಹಬಾಳ್ವೆ ಸಂಸ್ಥೆ ಕೊಳ್ಳೂರ ಸಹಯೋಗದಲ್ಲಿ ನಡೆದ ಕೋವಿಡ್ ಚುಚ್ಚುಮದ್ದು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಅನಿತಾ ಮಾತನಾಡಿ, ಪ್ರತಿಯೊಬ್ಬರ ಜೀವ ಅತ್ಯಂತ ಅಮುಲ್ಯ ವಾಗಿದ್ದು ಲಸಿಕೆ ಪಡೆಯುವ ಮೂಲಕ ಸುರಕ್ಷಿತವಾಗಿರೋಣ ಎಂದು ನುಡಿದರು.

ಈ ಸಂದರ್ಭದಲ್ಲಿ 70 ಜನರಿಗೆ ಕೋವಿಡ್ ಚುಚ್ಚುಮದ್ದು ನೀಡಲಾಯಿತು.

ಈ ಸಂದರ್ಭದಲ್ಲಿ ಗ್ರಾಮದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ, ಸಹಬಾಳ್ವೆ ಸಂಸ್ಥೆಯ ಅಧ್ಯಕ್ಷ ವಿಶ್ವನಾಥ ಸ್ವಾಮಿ, ಗ್ರಾಪಂ ಸದಸ್ಯ ದತ್ತಾತ್ರಿ ರ‍್ಯಾಕಲೆ, ಎಕಲಾರ ಸಮುದಾಯ ಆರೋಗ್ಯ ಅಧಿಕಾರಿ ಡ್ಯಾನಿಯಲ್, ಸಂತೋಷ್, ಸೂರ್ಯಕಾಂತ ರ‍್ಯಾಕಲೆ, ರಿಯಾಜಪಾಶ ಕೊಳ್ಳೂರ, ಅಶೋಕ ಚಂದಾ, ನಾಗನಾಥ ನರವಾ, ಮಹೇಶ್ ಧಬಡೆ ಸೇರಿದಂತೆ ಅಂಗವಾಗಿ ಕಾರ್ಯಕರ್ತರು, ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಸೇರಿದಂತೆ ಗ್ರಾಮಸ್ಥರು ಇದ್ದರು.