ಪ್ರತಿಯೊಬ್ಬರೂ ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು : ಸಿಪಿಐ ರವೀಂದ್ರ ನಾಯ್ಕೋಡಿ

ಅಥಣಿ :ಜೂ.21: ಶಿಕ್ಷಣ ಅಂದರೆ ಕೇವಲ ಹೆಚ್ಚು ಅಂಕಗಳಿಸುವುದಲ್ಲ. ಉತ್ತಮ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರಗಳನ್ನು ಮಕ್ಕಳಿಗೆ ಇಂದು ಕಲಿಸುವುದು ಅಗತ್ಯವಾಗಿದೆ. ಮಕ್ಕಳಿಗೆ ಅತಿಯಾದ ಪ್ರೀತಿಯನ್ನು ತೋರಿಸಿ ಅವರ ಕೈಗಳಿಗೆ ಮೊಬೈಲ್ ಮತ್ತು ಬೈಕುಗಳನ್ನು ಕೊಡುವುದರಿಂದ ಅನೇಕ ಮಕ್ಕಳು ದಾರಿ ತಪ್ಪುತ್ತಿದ್ದಾರೆ. ಪಾಲಕರು ಈ ವಿಷಯದಲ್ಲಿ ಎಚ್ಚರಿಕೆ ವಹಿಸುವುದು ಅಗತ್ಯ, ಎಂದು ಅಥಣಿ ಸಿಪಿಐ ರವೀಂದ್ರ ನಾಯ್ಕೋಡಿ ಹೇಳಿದರು,
ಅವರು ಮಂಗಳವಾರ ಇಲ್ಲಿನ ಕೆಎಲ್ ಇ ಸಂಸ್ಥೆಯ ಸಿ. ಬಿ. ರಣಮೋಡೆ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಜೀವನದಲ್ಲಿ ನಿರಂತರ ಯಶಸ್ವು ಕಾಣಲು ಪ್ರಯತ್ನ ಅಗತ್ಯ. ವಿದ್ಯಾರ್ಥಿಗಳು ಪಠ್ಯಪುಸ್ತಕದ ವಿದ್ಯಾಭ್ಯಾಸದ ಜೊತೆಗೆ ಪತ್ರಿಕೆಗಳನ್ನು, ಇನ್ನಿತರ ಸಾಧಕರ ಮತ್ತು ಮಹಾತ್ಮರ ಚರಿತ್ರೆಯ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ತಂದೆ ತಾಯಿಗೆ ಒಳ್ಳೆಯ ಮಗನಾಗಿ, ಮಗಳಾಗಿ, ಶಾಲೆಯಲ್ಲಿ ಆದರ್ಶ ವಿದ್ಯಾರ್ಥಿಗಳಾಗಿ, ಸಮಾಜದಲ್ಲಿ ಒಳ್ಳೆಯ ಪ್ರಜೆಗಳಾಗಿ ಸಾಧನೆ ಮಾಡಬೇಕು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವಿದ್ಯಾರ್ಥಿ ಜೀವನದಲ್ಲಿಯೇ ಗುರಿ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು. ಆ ಗುರಿ ಸಾಧನೆಗಾಗಿ ಸತತ ಪ್ರಯತ್ನ ಮಾಡಬೇಕು. ಸಮಾಜದಲ್ಲಿ ಒಬ್ಬ ಆದರ್ಶ ವ್ಯಕ್ತಿಯಾಗಿ ಹೊರ ಹೊಮ್ಮಬೇಕು, ಇಂದಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ನೈತಿಕ ಶಿಕ್ಷಣದ ಕೊರತೆ ಎದ್ದು ಕಾಣುತ್ತಿದೆ. ಅನೇಕ ಕುಟುಂಬಗಳಲ್ಲಿ ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣಕ್ಕಾಗಿ ಮಾತ್ರ ಪ್ರಯತ್ನ ಪಡುತ್ತಾರೆ. ಇಂದಿನ ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳು ತಪ್ಪು ಮಾಡಿದಾಗ ಅವರನ್ನು ಸರಿದಾರಿಗೆ ತರಲು ಶಿಕ್ಷಕರು ಆಸಕ್ತಿ ವಹಿಸದೆ ಇರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇಂದಿನ ಅನೇಕ ಶಿಕ್ಷಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಗುರು ಶಿಷ್ಯರಲ್ಲಿ ಇರಬೇಕಾದ ಗೌರವ ಕಡಿಮೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು ವಿದ್ಯಾರ್ಥಿಗಳಲ್ಲಿ ನೈತಿಕ ಶಿಕ್ಷಣವನ್ನು ನೀಡುವುದು ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳು ಆಸಕ್ತಿ ವಹಿಸಬೇಕೆಂದು ಕರೆ ನೀಡಿದರು.
ಅಥಣಿ ಪೆÇಲೀಸ ಠಾಣೆಯ ಪಿಎ??? ಶಿವಶಂಕರ ಮುಕರಿ ಮಾತನಾಡಿ ವಿದ್ಯಾರ್ಥಿಗಳು ಓದುವ ವಯಸ್ಸಿನಲ್ಲಿ ಚೆನ್ನಾಗಿ ಓದಿ ತಮ್ಮ ಬದುಕಿನಲ್ಲಿ ಯಶಸ್ವಿ ಹೊಂದಬೇಕು. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಮತ್ತು ಪಾಲಕರು ಮೊಬೈಲ್ ಚಟಕ್ಕೆ ಅತಿಯಾಗಿ ಅಂಟಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳು ಮೊಬೈಲ್ ಗಳನ್ನು ತಮ್ಮ ಕಲಿಕೆಯ ಮಾಹಿತಿಗಾಗಿ ಮಾತ್ರ ಬಳಸಿಕೊಳ್ಳಬೇಕು. ತಮಗೆ ಬೇಡವಾದ ಮತ್ತು ಸಮಾಜಕ್ಕೆ ದುಷ್ಪರಿಣಾಮವಾಗುವ ಸಂದೇಶಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಏಕೆಂದರೆ ವಿದ್ಯಾರ್ಥಿ ಜೀವನದಲ್ಲಿ ಅಪರಾಧ ಚಟುವಟಿಕೆಗಳು ನಡೆದರೆ ಪೆÇಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿ ಮುಂದಿನ ತಮ್ಮ ಶೈಕ್ಷಣಿಕ ಜೀವನಕ್ಕೆ ಮತ್ತು ಸರ್ಕಾರಿ ನೌಕರಿಗಳು ಬಂದ ಸಂದರ್ಭದಲ್ಲಿ ಇಲಾಖೆಯಿಂದ ಒಳ್ಳೆಯ ನಡತೆಯ ಪ್ರಮಾಣ ಪತ್ರ ದೊರೆಕದೇ ತೊಂದರೆ ಆಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಒಳ್ಳೆಯ ಕನಸುಗಳನ್ನು ಹೊಂದಿ ಅವುಗಳನ್ನು ನನಸು ಮಾಡಿಕೊಳ್ಳಲು ಸತತ ಅಧ್ಯಯನ ಮಾಡಬೇಕು. 18 ವಯಸ್ಸು ಆಗುವವರಿಗೆ ಯಾವ ವಿದ್ಯಾರ್ಥಿಗಳು ಬೈಕುಗಳನ್ನು ಓಡಿಸಬಾರದು. ಒಂದು ವೇಳೆ ವಿದ್ಯಾರ್ಥಿಗಳು ಬೈಕು ಓಡಿಸುವುದು ಕಂಡು ಬಂದರೆ ದಂಡ ವಿಧಿಸಿ ನಿಮ್ಮ ತಂದೆ ತಾಯಿಯ ವಿರುದ್ಧ ಪ್ರಕರಣ ದಾಖಲಾಗುತ್ತವೆ ಎಂದು ಎಚ್ಚರಿಕೆ ನೀಡಿದರು.
ಕೆಎ??? ಸಂಸ್ಥೆಯ ಸಿ. ಬಿ ರಣಮೋಡೆ ಶಾಲೆಯ ಪ್ರಾಚಾರ್ಯ ಕೃತಿಕಾ ಘೋಶ್ ಮತ್ತು ಹಿರಿಯ ಪತ್ರಕರ್ತ ಸಿ. ಎ ಇಟ್ನಾಳಮಠ ಮಾತನಾಡಿದರು. ಈ ಸಂದರ್ಭದಲ್ಲಿ ಕೆಎ??? ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರಾದ ಶಂಭು ಮಮದಾಪುರ, ಅನಿಲ ಮೆಣಸಿ ಉಪಸ್ಥಿತರಿದ್ದರು.ಕಾನಿಪ ಸಂಘದ ಅಧ್ಯಕ್ಷ ಅಣ್ಣಾಸಾಬ ತೆಲಸಂಗ ಸ್ವಾಗತಿಸಿ ವಂದಿಸಿದರು.


ಶಾಲಾ ವಿದ್ಯಾರ್ಥಿಗಳೊಂದಿಗೆ ಸಿಪಿಐ ರವೀಂದ್ರ ನಾಯ್ಕೋಡಿ ಸಂವಾದ :

ರಸ್ತೆ ಸುರಕ್ಷತಾ ನಿಯಮಗಳು, ವಿದ್ಯಾರ್ಥಿಗಳಿಂದ ಆಗುವ ಅಪರಾಧ ಚಟುವಟಿಕೆಗಳು ಮತ್ತು ಅದಕ್ಕೆ ಸಂಬಂಧಿಸಿದ ದಂಡ ಮತ್ತು ಕಾಯಿದೆಗಳ ಬಗ್ಗೆ ಅರಿವು ಮೂಡಿಸಿದರು. ಇದಲ್ಲದೆ ಸಂವಾದ ಕಾರ್ಯಕ್ರಮದಲ್ಲಿ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದ ಅಥಣಿ ಸಿಪಿಐ ರವೀಂದ್ರ ನಾಯ್ಕೋಡಿ ಪೆÇಲೀಸ್ ಇಲಾಖೆ ಮತ್ತು ಕಾನೂನು ಸುವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದರು. ಬಾಲಾಪರಾಧಗಳ ಹೇಗೆ ನಡೆಯುತ್ತವೆ, ಅವುಗಳಿಗೆ ಸಂಬಂಧಿಸಿದ ಕಾಯಿದೆ ಕುರಿತು ಮಾಹಿತಿ ನೀಡಿ ವಿದ್ಯಾರ್ಥಿಗಳಿಗೆ ಅನೇಕ ಸಲಹೆಗಳನ್ನು ನೀಡಿದರು.