ಪ್ರತಿಯೊಬ್ಬರೂ ಡೆಂಗ್ಯೂ ಜ್ವರದ ಬಗ್ಗೆ ಎಚ್ಚರಿಕೆ ವಹಿಸಿ- ಡಾ.ಗೋಪಾಲ್ ರಾವ್


ಸಂಜೆವಾಣಿ ವಾರ್ತೆ
ಸಂಡೂರು:ಅ:18:  ಪ್ರಚಾರ ವಾಹನದ ಮೂಲಕ ಡೆಂಗೀ ನಿಯಂತ್ರಣ ಕುರಿತು ಜಾಗೃತಿ ಮೂಡಿಸುತ್ತಿದ್ದು ಪ್ರತಿಯೊಬ್ಬರೂ ಸಹ ಡೆಂಗ್ಯೂ ಜ್ವರದ ಬಗ್ಗೆ ಎಚ್ಚರಿಕೆ ವಹಿಸಿ ಎಲ್ಲಿಯೂ ನೀರು ಸಂಗ್ರಹ, ತೆರೆದ ನೀರಿನಲ್ಲಿ, ಶುದ್ದ ನೀರಿನಲ್ಲಿ ಸೊಳ್ಳೆ ಉತ್ಪತ್ತಿಯಾಗಿ ಡೆಂಗ್ಯೂ ಹರಡುತ್ತಿದ್ದು ಕಡ್ಡಾಯವಾಗಿ ಸೊಳ್ಳೆ ಪರದೆ ಬಳಸಿ ಎಂದು ಡಾ.ಗೋಪಾಲ್ ರಾವ್ ಕರೆನಿಡಿದರು.
ಅವರು ತಾಲೂಕಿನ ತೋರಣಗಲ್ಲು ಸಮುದಾಯ ಅರೋಗ್ಯ ಕೇಂದ್ರದ ಆವರಣದಲ್ಲಿ ಡೆಂಗೀ ನಿಯಂತ್ರಣ ಕುರಿತು “ಡೆಂಗೀ ರಥ” ಮೂಲಕ ಪ್ರಚಾರ ವಾಹನಕ್ಕೆ ಚಾಲನೆ ನೀಡಿ ಮಾತನಾಡಿ ಸಾರ್ವಜನಿಕರು ಡೆಂಗ್ಯೂ ನಿಯಂತ್ರಣದಕ್ಕೆ ಸಹಕರಿ ಅತಿ ಅಗತ್ಯವಾಗಿದೆ ಎಂದರು.
 ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರ ವ್ಯಾಪ್ತಿಯ ಕುರೇಕುಪ್ಪ, ವಡ್ಡು, ಬಸಾಪುರ, ತಾಳೂರು, ತೋರಣಗಲ್ಲು ಗ್ರಾಮ ಮತ್ತು ರೈಲ್ವೆ ನಿಲ್ದಾಣ ಪ್ರದೇಶಗಳಲ್ಲಿ ಡೆಂಗೀ ನಿಯಂತ್ರಣ ಸಾಧಿಸಲು ಪ್ರತಿ ವಾರ್ಡಿನಲ್ಲಿಯೂ ಡೆಂಗೀ ರಥ ವಾಹನದ ಮೂಲಕ ಪ್ರಚಾರ ಕೈಗೊಳ್ಳಲಾಗಿದೆ, ಡೆಂಗೀ ತಡೆಯಲು ಡೆಂಗೀ ಹರಡುವ ಸೊಳ್ಳೆಗಳ ನಿಯಂತ್ರಣವೇ ಪರಹಾರ, ಸೊಳ್ಳೆಗಳು ಮನೆಯ ಪ್ರಾಂಗಣದಲ್ಲಿ ಉತ್ಪತ್ತಿವಾಗುವುದು ಗೊತ್ತಿದ್ದು ಸಾರ್ವಜನಿಕ ನಿರ್ಲಕ್ಷ್ಯ ಮಾಡುವರು,ಹೇಗಾದರೂ ಮಾಡಿ ಸೊಳ್ಳೆಗಳು ಇಲ್ಲದಂತೆ ಮಾಡಬೇಕು, ನೀರು ಸಂಗ್ರಹಿಸುವ ತೊಟ್ಟಿ,ಬ್ಯಾರಲ್,ಗಡಿಗೆ,ಟಬ್‍ಗಳನ್ನು ಚೆನ್ನಾಗಿ ತೊಳೆದು,ಒಣಗಿಸಿ ನೀರು ಶೇಖರಣೆ ಮಾಡಿ ಮುಚ್ಚಳದಿಂದ ಮುಚ್ಚಬೇಕು,ಟೈರು,ಬಾಟಲ್,ತೆಂಗಿಕಾಯಿ ಚಿಪ್ಪು ಇತರೆ ತ್ಯಾಜ್ಯ ವಸ್ತುಗಳನ್ನು ವಿಲೇವಾರಿ ಮಾಡಬೇಕು,ಲಕ್ಷಣಗಳು ಕಂಡರೆ ಆಸ್ಪತ್ರೆಗೆ ಬಂದು ಪರೀಕ್ಷೆ ಮಾಡಿಸಿ ಕೊಳ್ಳ ಬೇಕು,ಸ್ವಯಂ ರಕ್ಷಣಾ ವಿಧಾನಗಳನ್ನು ಅನುಸರಿಸ ಬೇಕು ಎಂಬ ಮಾಹಿತಿಯನ್ನು ವಾಹನದ ಬಿತ್ತಿ ಚಿತ್ರ ಮತ್ತು ಧ್ವನಿವರ್ಧಕದ ಮೂಲಕ ಪ್ರಚಾರ ಮಾಡಲಾಗುತ್ತದೆ, “ಡೆಂಗೀ ಬಗ್ಗೆ ಅರಿಯೋಣ,ಡೆಂಗೀ ನಿಯಂತ್ರಣ ಸಾಧಿಸೋಣ” ಎಂಬ ಘೋಷಣೆಯಂತೆ ಡೆಂಗೀ ನಿಯಂತ್ರಿಸೋಣ ಎಂದು ತಿಳಿಸಿದರು,
 ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಶಕೀಲ್ ಅಹಮದ್, ನಿಜಾಮುದ್ದೀನ್,ಸಾಗರ್,ಪ್ರಶಾಂತ್ ಕುಮಾರ್,ಮಂಜುನಾಥ್, ವೆಂಕಟೇಶ್,ಆಶಾ ಕಾರ್ಯಕರ್ತೆ ಬಸಮ್ಮ,ದೇವಮ್ಮ,ಅನಸೂಯಾ, ಹನುಮಂತಮ್ಮ,ಹುಲಿಗೆಮ್ಮ,ಆಶಾ,ವಿಜಯಶಾಂತಿ,ಪದ್ಮಾ, ಇತರರು ಹಾಜರಿದ್ದರು

One attachment • Scanned by Gmail