ಪ್ರತಿಯೊಬ್ಬರೂ ಕಡ್ಡಾಯವಾಗಿ ಮತ ಚಲಾಯಿಸಿ

ಮಳವಳ್ಳಿ: ಏ.26:- ಕರ್ನಾಟಕ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ 2023 ರ ಮತದಾರರ ವ್ಯವಸ್ಥಿತ ಶಿಕ್ಷಣ ಮತ್ತು ಭಾಗವಹಿಸುವಿಕೆ (ಸ್ವೀಪ್ ) ಕಾರ್ಯಕ್ರಮದ ಅಡಿಯಲ್ಲಿ ಮಳವಳ್ಳಿ ತಾಲ್ಲೂಕಿನ ನೆಲಮಾಕನಹಳ್ಳಿ, ಕಂದೇಗಾಲ, ಅಗಸನಪುರ, ಹುಸ್ಕೂರು, ಯತ್ತಂಬಾಡಿ ಮತ್ತು ಹಲಗೂರು ಗ್ರಾಮ ಪಂಚಾಯತಿ ವರೆಗಿನ ಬೈಕ್ ಜಾಥ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತಿಯ ಸಹಾಯಕ ಕಾರ್ಯದರ್ಶಿಗಳಾದ (ಆಡಳಿತ) ಡಿ.ಎನ್.ರವೀಂದ್ರ ರವರು ಮತ್ತು ಸಹಾಯಕ ಕಾರ್ಯದರ್ಶಿಗಳಾದ ಮೋಹನ್ ಕುಮಾರ್ (ಅಭಿವೃದ್ಧಿ) ರವರ ಅಧ್ಯಕ್ಷತೆಯಲ್ಲಿ ಬೈಕ್ ಜಾಥಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ತಾಲ್ಲೂಕು ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ರಾಮಲಿಂಗಯ್ಯರವರು
ಮದ್ದೂರು ಮತ್ತು ಕೊಳ್ಳೇಗಾಲ ಮಾರ್ಗದ ಸಿಗ್ನಲ್ ನಲ್ಲಿ ಮತದಾನ ಪ್ರತಿಜ್ಞೆ ವಿಧಿ ಬೋದಿಸಿ ನಂತರ ತಾಲ್ಲೂಕಿನ ನೆಲಮಾಕನಹಳ್ಳಿ, ಕಂದೇಗಾಲ,ಅಗಸನಪುರ, ಹುಸ್ಕೂರು, ಯತ್ತಂಬಾಡಿ ಮತ್ತು ಹಲಗೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಬೈಕ್ ರ?ಯಾಲಿ ಮೂಲಕ ಮತದಾನದ ಜಾಗೃತಿಯನ್ನು ಮೂಡಿಸಲಾಯಿತು.
ಪ್ರಜಾಪ್ರಭುತ್ವದಲ್ಲಿ ಮತದಾರನೇ ನಿಜವಾದ ಪ್ರಭು ಪ್ರಜಾಪ್ರಭುತ್ವ ಜೀವಂತವಾಗಿ ಉಳಿಯಬೇಕೆಂದರೆ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದರು.
ಮತದಾನ ನಮಗೆ ಸಂವಿಧಾನಾತ್ಮಕ
ವಾಗಿ ದೊರೆತಿರುವ ಹಕ್ಕು ಮೇ 10 ರಂದು ಕರ್ನಾಟಕ ವಿಧಾನ ಸಭೆಗೆ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು.ಧರ್ಮ,ಜನಾಂಗ, ಜಾತಿ, ಮತ, ಭಾಷೆ ಅಥವಾ ಯಾವುದೇ ಪ್ರೇರೇಪಣೆಗಳ ದಾಕ್ಷಿಣ್ಯಗಳಿಗೆ ಪ್ರಭಾವಿತರಾಗದೇ ವಿವೇಚನೆಯಿಂದ ಮತ ಚಲಾಯಿಸಿ ಎಂದರು. ಆ ಮುಖಾಂತರ ಪ್ರಜಾಪ್ರಭುತ್ವವನ್ನು ಗೆಲ್ಲಿಸೋಣ ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮ ಉದ್ಧೇಶಿಸಿ ಮಾತನಾಡಿದ ಪಿಡಿಒ ರುದ್ರಯ್ಯ ರವರು 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಹಾಗೂ ವಿಶೇಷ ಚೇತನರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮತದಾನದ ಪ್ರಮಾಣವನ್ನು ಹೆಚ್ಚಿಸಲು ಮತದಾನ ಜಾಗೃತಿ ಜಾಥಾದಂತಹ ಅನೇಕ ಕಾರ್ಯಕ್ರಮಗಳನ್ನು ಸ್ವೀಪ್ ಸಮಿತಿಯಿಂದ ಹಮ್ಮಿಕೊಳ್ಳಲಾಗುತ್ತಿದೆ.ಎಲ್ಲರೂ ಕಡ್ಡಾಯವಾಗಿ ನಿರ್ಭೀತಿಯಿಂದ ಮತ ಚಲಾಯಿಸಿ ಎಂದರು.
ಇದೇ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರಾದ ದೀಪು ರವರು, ತಾಲ್ಲೂಕು ಪಂಚಾಯತ್ ವ್ಯವಸ್ಥಾಪಕರಾದ ಮುನೇಂದ್ರ ಕುಮಾರ್ ರವರು, ಸಹಾಯಕ ನಿರ್ದೇಶಕರು ಆಡಳಿತ ಪಾರ್ಥಸಾರಥಿ ರವರು, ತಾಲ್ಲೂಕು ಪಿಡಿಒ ಸಂಘದ ಅಧ್ಯಕ್ಷ ಕೇಶವಮೂರ್ತಿ,ತಾಲ್ಲೂಕು ಐಇಸಿ ಸಂಯೋಜಕ ಸುನಿಲ್ ಕುಮಾರ್.ಹೆಚ್,ತಾಲ್ಲೂಕಿನ ಎಲ್ಲಾ ಪಿಡಿಒ, ಬಿಲ್ ಕಲೆಕ್ಟರ್ ಗಳು ಹಾಗೂ ತಾಲ್ಲೂಕು ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.