ಪ್ರತಿಯೊಬ್ಬರು ಸಸಿ ಬೆಳೆಸಿರಿ: ಗದ್ದಿಗೌಡರ

(ಸಂಜೆವಾಣಿ ವಾರ್ತೆ)
ಬಾದಾಮಿ,ಜು7: ಇಂದು ಸಸ್ಯ ಸಂಪತ್ತು ಕಡಿಮೆಯಾಗುತ್ತಿದ್ದು, ಎಲ್ಲರೂ ಒಂದೊಂದು ಸಸಿ ನೆಡಬೇಕು ಎಂದು ಬಾಗಲಕೋಟ ಲೋಕಸಭಾ ಸದಸ್ಯ ಪಿ.ಸಿ.ಗದ್ದಿಗೌಡರ ಹೇಳಿದರು.
ಅವರು ಸಾಮಾಜಿಕ ಮತ್ತು ಪ್ರಾದೇಶಿಕ ಅರಣ್ಯ ಇಲಾಖೆಯ ವತಿಯಿಂದ ಪಟ್ಟಣದ ಹೊರವಲಯದ ಸಮಾಜ ಕಲ್ಯಾಣ ಇಲಾಖೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಕೋಟಿ ವೃಕ್ಷ ಆಂದೋಲನ ವನಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಸಸಿ ನೆಟ್ಟು ಮಾತನಾಡಿದರು. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ರಾಜಮಹ್ಮದ ಬಾಗವಾನ, ಸದಸ್ಯ ಮಂಜುನಾಥ ಹೊಸಮನಿ, ನಿಸರ್ಗ ಬಳಗದ ಅಧ್ಯಕ್ಷ ಎಸ್.ಎಚ್.ವಾಸನದ, ಸದಸ್ಯರಾದ ಎಸ್.ಎಸ್.ಕಿತ್ತಲಿ, ವಿನೋದ ಭರಮಗೌಡರ, ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ವಿರೇಶ, ಸಾಮಾಜಿಕ ವಲಯ ಅರಣ್ಯಾಧಿಕಾರಿ ಎಸ್.ಬಿ.ಪೂಜಾರ, ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಅನಿಲ ಕಿಣಗಿ, ಮಾರುತಿ ಹೊಂಬರ ಸೇರಿದಂತೆ ಸಿಬ್ಬಂದಿಗಳು ಹಾಜರಿದ್ದರು. ಇದೇ ಸಮಯದಲ್ಲಿ ಸುಮಾರು 50 ಸಸಿಗಳನ್ನು ನೆಡಲಾಯಿತು.