ಮೈಸೂರು: ಜೂ.08:- ಬುದ್ಧ, ಬಸವ ಮತ್ತು ಅಂಬೇಡ್ಕರ್ ಪ್ರತಿ ಮನೆಯ ಬೆಳಕಾಗಿದ್ದಾರೆ. ಸಂವಿಧಾನವನ್ನು ಪ್ರತಿಯೊಬ್ಬರೂ ಓದುವ ಕೆಲಸ ಆಗಬೇಕು ಎಂದು ಎಂದು ನಿವೃತ್ತ ಪ್ರಾಧ್ಯಾಪಕ ಪೆÇ್ರ.ಬಿ.ಪಿ.ಮಹೇಶಚಂದ್ರಗುರು ಹೇಳಿದರು.
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಮೈಸೂರಿನ ವಿಶ್ವ ವಿದ್ಯಾನಿಲಯದ ಇಎಂಎಂಆರ್‍ಸಿ ಸಭಾಂಗಣದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರತಿ ಮನೆಗೂ ಬುದ್ಧ, ಬಸವ ಹಾಗೂ ಅಂಬೇಡ್ಕರ್ ಜ್ಞಾನದ ಬೆಳಕನ್ನು ನೀಡಿದ್ದಾರೆ. ಅದನ್ನು ವಿಶ್ವ ವಿದ್ಯಾನಿಲಯಗಳಲ್ಲಿ ಕಲಿತ ವಿದ್ಯಾರ್ಥಿಗಳು ಇತರರಿಗೂ ಸಿಗುವಂತೆ ಮಾಡಬೇಕು. ಆ ಮೂಲಕ ಪ್ರತಿಯೊಬ್ಬರು ಸಂವಿಧಾನದ ಹಕ್ಕಾದ ಸಮಾನತೆಯ ಹಕ್ಕನ್ನು ಪಡೆಯುವಂತೆ ಮಾಡಬೇಕೆಂದು ಹೇಳಿದರು.
ಕಾರ್ಯಕ್ರಮವನ್ನು ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಪೆÇ್ರ.ಕೆ.ಎಂ.ಮಹದೇವನ್ ಉದ್ಘಾಟಿಸಿದರು. ವಿದ್ಯಾವರ್ಧಕ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಕೆ.ಎಲ್.ಚಂದ್ರಶೇಖರ್, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪೆÇ್ರ.ಎಂ.ಎಸ್.ಸಪ್ನಾ ಇನ್ನಿತರರು ಇದ್ದರು.