ಪ್ರತಿಯೊಬ್ಬರು ವಸಡಿನ ಬಗ್ಗೆ ಕಾಳಜಿ ವಹಿಸಬೇಕು : ಡಾ. ಸುರೇಂದ್ರ ಬಾಬು

ರಾಯಚೂರು,ಮಾ.೧೧- ಬಾಯಿಯ ಆರೋಗ್ಯ ಮತ್ತು ದಂತಗಳು ಸಹ ನಮ್ಮ ಆರೋಗ್ಯಕ್ಕೆ ಅವಶ್ಯಕವಾಗಿದ್ದು, ಪ್ರತಿಯೊಬ್ಬರು ಹಲ್ಲುಗಳನ್ನು ಉಜ್ಜುವ ವಿಧಾನ, ಹಾಗೂ ವಸಡಿನ ಬಗ್ಗೆ ಕಾಳಜಿ ವಹಿಸಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸುರೇಂದ್ರ ಬಾಬು ಅವರು ಹೇಳಿದರು.
ಅವರು ಮಾ.೧೦ರ(ಶುಕ್ರವಾರ) ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಬಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಓರಲ್ ಹೆಲ್ತ ಕಾರ್ಯಕ್ರಮದಡಿಯಲ್ಲಿ ಬಾಯಿಯ ಆರೋಗ್ಯ ಹಾಗೂ ದಂತ ಭಾಗ್ಯ ಯೋಜನೆ ಕುರಿತು ರಾಯಚೂರು ತಾಲೂಕಿನ ಆಶಾ ಕಾರ್ಯಕರ್ತೆಯರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಬಾಯಿಯ ಆರೋಗ್ಯ ಮತ್ತು ದಂತಗಳು ಸಹ ನಮ್ಮ ಆರೋಗ್ಯಕ್ಕೆ ಅವಶ್ಯಕವಾಗಿದ್ದು, ಪ್ರತಿಯೊಬ್ಬರು ಹಲ್ಲುಗಳನ್ನು ಉಜ್ಜುವ ವಿಧಾನ, ಹಾಗೂ ವಸಡಿನ ಬಗ್ಗೆ ಕಾಳಜಿ ವಹಿಸಬೇಕು ಎಂದರು.
ಇದೇ ವೇಳೆ ಡಾ. ನಾಗವೇಣಿ ಹೆಚ್ ಉಪನ್ಯಾಸ ನೀಡಿ ದಂತಕ್ಷಯವಾಗದಂತೆ ಹಾಗೂ ಒಂದು ವೇಳೆ ಹಲ್ಲಿಗೆ ಸಂಬಂಧಿಸಿದ ತೊಂದರೆ/ಸಮಸ್ಯೆಗಳನ್ನು ನೀವು ನಿಮ್ಮಕ್ಷೇತ್ರದಲ್ಲಿ ಗುರುತಿಸಿ ಅಂತಹವರನ್ನು ದಂತ ವೈದ್ಯಧಿಕಾರಿಗಳು ಹತ್ತಿರ ತಪಾಸಣೆ ಮಾಡಿಸಿ ಪ್ರಾರಂಭದ ಹಂತದಲ್ಲೇ ಚಿಕಿತ್ಸೆಗೆ ಒಳಪಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಲಲಿತಾ ನಲವಾಡೆ, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ಗಣೇಶ, ತಾಲೂಕ ಆರೋಗ್ಯ ಅಧಿಕಾರಿ ಡಾ. ಶಾಕೀರ, ನೊಡೆಲ್ ಅಧಿಕಾರಿ (ದಂತಭಾಗ್ಯ ಕಾರ್ಯಕ್ರಮ) ಡಾ.ಶೀತಲ್ ಬಿ,ಎಸ್, ಜಿಲ್ಲೆಯ ಎಲ್ಲಾ ದಂತ ವೈದ್ಯಾಧಿಕಾರಿಗಳು, ಅಮರೇಶ ಗಡ್ಡಿ, ಮತ್ತು ಆಶಾ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಲಕ್ಷ್ಮಿ ಮುಂಡಾಸ್ ಐ,ಇ,ಸಿ, ವಿಭಾಗ ಡಾ. ಶೋಭಾ ನಾಯಕ್ ಪ್ರಾಸ್ತಾವಿಕ ಮಾತನಾಡಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ನಾಗರಾಜ ನಿರೂಪಿಸಿದರು.