ಪ್ರತಿಯೊಬ್ಬರು ಲಸಿಕೆ ಹಾಕಿಸಿಕೊಳ್ಳಲು ಮನವಿ

ಮೈಸೂರು. ಮೇ.01: ಚಿಕ್ಕ ಮಕ್ಕಳು ಮತ್ತು ವೃದ್ಧರು ಎಚ್ಚರಿಕೆಯಿಂದ ಆರೋಗ್ಯದ ಕಡೆ ಗಮನ ನೀಡಬೇಕು ಎಂದು ನಗರ ಪಾಲಿಕೆ ಸದಸ್ಯ ಲಕ್ಷ್ಮೀಕಿರಣ್ ಮಾದೇಗೌಡ ತಿಳಿಸಿದರು.
ಅವರು ಇಂದು ಬೆಳಿಗ್ಗೆ ಮೈಸೂರು ಮಹಾನಗರ ಪಾಲಿಕೆಯ ವಾರ್ಡ್ ನಂಬರ್ 46ರ ವಾರ್ಡ್ ನ 300ಹಿರಿಯ ನಾಗರಿಕರಿಗೆ ದಟ್ಟಗಳ್ಳಿ ನೇತಾಜಿ ಸರ್ಕಲ್‍ನಲ್ಲಿ ಉಚಿತವಾಗಿ ಕೋವಿಂದ್ ಲಸಿಕೆ ನೀಡುವ ಮೂಲಕ ವಾರ್ಡ್ ನ ನಾಗರಿಕರಿಗೆ ಜಾಗೃತಿ ಮೂಡಿಸಲಾಯಿತು.
ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ನಗರ ಪಾಲಿಕಾ ಸದಸ್ಯರಾದ ಲಕ್ಷ್ಮೀ ಕಿರಣ್‍ಗೌಡ ಲಾಕ್ ಡೌನ್ ಇರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಓಡಾಡಲು ತೊಂದರೆ ಹಾಗೂ ಲಸಿಕೆಯ ಕೊರತೆ ಇರೋದರಿಂದ ನಾಗರಿಕರಿಗೆ ಉಪಯೋಗ ವಾಗಲಿ ಎಂಬ ದೃಷ್ಟಿಯಿಂದ ಲಸಿಕೆ ಅಭಿಯಾನಕ್ಕೆ ಸಾರ್ವಜನಿಕರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಈ ಮೂಲಕ ನಾವು ಸಾರ್ವಜನಿಕರಲಿ ಮನವಿ ಮಾಡ್ಕೋತೀನಿ ಮಹಾಮಾರಿ ಕೂರೂನಾ ಎರಡನೇ ಅಲೆ ತುಂಬ ಕಂಟಕವಾಗಿದೆ ಹಾಗಾಗಿ ಪ್ರತಿಯೊಬ್ಬರು ಲಸಿಕೆ ಹಾಕಿಸಿಕೊಳ್ಳಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ ಎಂದರು.
ಕೊರೋನಾ ಜನರಲ್ಲಿ ಜಾಗೃತಿ ಬರಲಿ
ಕೂರೂನಾ ನಿಗ್ರಹಕ್ಕೆ ಸರ್ಕಾರಕ್ಕಿಂತ ಹೆಚ್ಚಿನ ಜವಾಬ್ದಾರಿ ಸಾರ್ವಜನಿಕರ ಮೇಲಿದೆ .ಕೂರೂನಾ ಎರಡನೇ ಅಲೆ ತುಂಬಾ ಅಪಾಯಕರವಾದದ್ದು ಪ್ರಾಣಕ್ಕೆ ಅಪಾಯ ತರುವ ರೀತಿಯಲ್ಲಿದೆ.ಹಾಗಾಗಿ ಸಾರ್ವಜನಿಕರು ಕೂರೂನಾಬಗೆ ಊಹಾಪೆÇೀಹಗಳಿಗೆ ಕಿವಿಗೊಡದೆ ಜಾಗೃತಿ ನಿಯಮಗಳನ್ನು ಪಾಲಿಸಬೇಕು .ಅನಗತ್ಯವಾಗಿ ಹೊರಗಡೆ ಊಟ ಮಾಡುವುದಾಗಲಿ ಗುಂಪುಗಳಾಗಿ ಸಾರ್ವಜನಿಕ ಸ್ಥಳಗಳಲ್ಲಿ ಸೇರುವುದಾಗಲಿ ಮಾಡಬಾರದು .ಚಿಕ್ಕ ಮಕ್ಕಳು ಮತ್ತು ವೃದ್ಧರು ಎಚ್ಚರಿಕೆಯಿಂದ ಆರೋಗ್ಯದ ಕಡೆ ಗಮನ ನೀಡಬೇಕು. ಸರ್ಕಾರದಿಂದ ಮಾತ್ರ ಕೊರೂನಾ ನಿಯಂತ್ರಿಸಲು ಸಾಧ್ಯವಿಲ್ಲ .ಸಾರ್ವಜನಿಕರು ನಿಯಮಗಳನ್ನು ಪಾಲನೆ ಮಾಡುವುದರ ಮೂಲಕ ಅಧಿಕಾರಿಗಳಿಗೆ ಸರ್ಕಾರಕ್ಕ ಕೂರೂನಾ ನಿಯಂತ್ರಣದಲ್ಲಿ ಸಹಕರಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಕಿರಣ್ ಮಾದೇಗೌಡ, ವೈದ್ಯರಾದ ಡಾ.ಪರಶಿವಮೂರ್ತಿ, ಮೈಸೂರು ಮಹಾನಗರ ಪಾಲಿಕೆ ಆರೋಗ್ಯ ನಿರೀಕ್ಷಕ ಪ್ರಕಾಶ್, ನಗರಪಾಲಿಕೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ನಾಜೀಯಾ ಬಾನು, ಬಿ ಬಿ ಕುಲ್ಸೊಮ್, ಅನ್ನಪೂರ್ಣ,
ಕವಿತಾ, ಹರ್ಷವರ್ಧನ್, ಅಮನ್ ಉಲ್ಲಾ, ಪ್ರಕಾಶ್ ಹಾಗೂ ಇನ್ನಿತರರು ಹಾಜರಿದ್ದರು.