ಪ್ರತಿಯೊಬ್ಬರು ಮತ ಚಲಾಯಿಸಿ ರಿಷಬ್ ಶೆಟ್ಟಿ ಮನವಿ

ಬೆಂಗಳೂರು, ಮಾ. ೩೧-ರಾಜ್ಯ ವಿಧಾನಸಭೆ ಮೇ ೧೧ ರಂದು ಚುನಾವಣೆ ನಡೆಯುಲಿದ್ದು ಪ್ರತಿಯೊಬ್ಬರು ಮತ ಚಲಾಯಿಸುವಂತೆ ನಟ, ನಿರ್ದೇಶಕ ರಿಷಿಬ್ ಶೆಟ್ಟಿ ಮನವಿ ಮಾಡಿದ್ದಾರೆ.
ಇದೀಗ ನಟ ಕಂ ನಿರ್ದೇಶಕ ರಿಷಬ್ ಶೆಟ್ಟಿ ಪ್ರತಿಯೊಬ್ಬರು ತಪ್ಪದೆ ಮತ ಚಲಾಯಿಸಿ ಎಂದು ಮನವಿ ಮಾಡಿದ್ದಾರೆ.
ಎಲ್ಲರಿಗೂ ನಮಸ್ಕಾರ, ನಾನು ನಿಮ್ಮ ಪ್ರೀತಿಯ ರಿಷಬ್ ಶೆಟ್ಟಿ. ೨೦೨೩ ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಘೋಷಣೆ ಮಾಡಿದ್ದಾರೆ. ಮೇ ೧೦ನೇ ದಿನಾಂಕದಂದು ಎಲೆಕ್ಷನ್ ಘೋಷಣೆಯಾಗಿದೆ. ಪ್ರತಿಯೊಬ್ಬರು ತಪ್ಪದೇ ವೋಟ್ ಮಾಡಿ ಎಂದು ಅವರು ಕರೆಕೊಟ್ಟಿದ್ದಾರೆ.
ನಮ್ಮ ನಾಡಿನ ನೆಲ, ಜಲ ಸಂಪನ್ಮೂಲ ಅಭಿವೃದ್ಧಿಗಾಗಿ, ನಮ್ಮ ಉತ್ತಮ ಬದುಕಿಗಾಗಿ ಪ್ರತಿಯೊಬ್ಬರು ವೋಟ್ ಮಾಡಿ ಎಂದು ನಟ ರಿಷಬ್ ಶೆಟ್ಟಿ ಕರೆ ಕೊಟ್ಟಿದ್ದಾರೆ. ಉತ್ತಮ ಬದುಕಿಗಾಗಿ ಮತ ಹಾಕುವುದು ತುಂಬಾ ಮುಖ್ಯ. ಯಾರು ಮತ ಹಾಕುವುದನ್ನು ಮರೆಯಬೇಡಿ. ತಪ್ಪದೇ ವೋಟ್ ಹಾಕಿ ಎಂದು ರಿಷಿಬ್ ಶೆಟ್ಟಿ ತಿಳಿಸಿದ್ದಾರೆ.
ಕಾಂತಾರ ಸಿನಿಮಾದ ಮೂಲಕ ದೇಶ, ವಿದೇಶದಲ್ಲೂ ಖ್ಯಾತಿ ಘಳಿಸಿರುವ ನಟ ರಿಷಬ್ ಶೆಟ್ಟಿ ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಕಾಂತಾರ ೨ ಸಿನಿಮಾದ ಕೆಲಸ ಆರಂಭಿಸಿರುವ ರಿಷಬ್ ಶೆಟ್ಟಿ ಸದ್ಯದಲ್ಲೇ ಸಿನಿಮಾದ ಕುರಿತು ಮತ್ತಷ್ಟು ಮಾಹಿತಿ ನೀಡಲಿದ್ದಾರೆ.