
ಸಿರವಾರ,ಜ.೧೮- ಕೋವಿಡ್ ಮೂರನೆ ಅಲೆ ತಡೆಯಲು ಈಗಾಗಲೇ ೨ ಲಸಿಕೆ ಪಡೆದವರು, ಬೂಸ್ಟರ್ ಡೋಜ್ ಹಾಕಿಸಿಕೊಳಬೇಕು ಎಂದು ತಾಲೂಕು ವೈದ್ಯಾಧಿಕಾರಿ ಚಂದ್ರಶೇಖರ ಹಿರೇಮಠ ಹೇಳಿದರು.
ಪಟ್ಟಣದ ತಹಸೀಲ್ದಾರ ಕಛೇರಿಯಲ್ಲಿ ಇಂದು ಕೋವಿಡ್ ರೋಗದ ಬಗ್ಗೆ ಮಾತನಾಡಿ ಪ್ರತಿಯೊಬ್ಬರು ಮಾಸ್ಕ್ ಧರಿಸಿ, ಹೊರಾಂಗಣದಲ್ಲಿ ಸಭೆ ಸಮಾರಂಭಗಳು ಮಾಡಬೇಕು. ಸಾಮಾಜಿಕ ಅಂತರ ಕಾಪಾಡಬೇಕು. ಈಗಾಗಲೇ ಎರಡು ಲಸಿಕೆ ಪಡೆದವರು ಬೂಸ್ಟರ್ ಡೋಜ್ ಹಾಕಿಸಿಕೊಳ್ಳುವ ಮೂಲಕ ರೋಗ ಹರಡದಂತೆ ತಡೆಯುವಲ್ಲಿ ಸಹಾಯವಾಗುತ್ತದೆ.
ಮುಂಜಾಗ್ರತೆ ಕ್ರಮವಾಗಿ ಸಾರ್ವಜನಿಕರ ಅನುಕೂಲಕ್ಕಾಗಿ, ಸಿರವಾರ ಹಾಗೂ ಕವಿತಾಳ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಕ್ಸಿಜನ್ ಸೇರಿದಂತೆ ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸಲಾಗಿದೆ. ರೋಗ ಹರಡದಂತೆ ಪ್ರತಿಯೊಬ್ಬರು ಎಚ್ಚರಿಕೆ ವಹಿಸಬೇಕು, ಇಲಾಖೆಗೆ ಸಹಕರಿಸಬೇಕು ಮನವಿ ಮಾಡಿದರು. ತಹಸೀಲ್ದಾರ ವಿಜಯೇಂದ್ರಹುಲಿನಾಯಕ, ಕೃಷಿ ಅಧಿಕಾರಿ ಫವೀದ ಬೇಗಂ, ಡಾ.ಮಲ್ಲಿಕಾರ್ಜುನ, ಕಾರ್ಮಿಕ ಇಲಾಖೆಯ ಶರಣಬಸವ ಕಡ್ಲೆ, ಶಿರಸ್ತೆದಾರ ವಿಜಯಕುಮಾರ ಸುಗಂದಿ, ಫಕರುದ್ದಿನ್, ಸಿಆರ್ಪಿ ರವಿನಾಯಕ್, ಪ.ಪಂ ಹಂಪಯ್ಯಪಾಟೀಲ್, ಸಿಡಿಪಿಓ ಇಲಾಖೆ ಜಲಾಲ್, ಜೆಸ್ಕಾಂ ಎಇಇ ಬೆನ್ನಪ್ಪ ಕರಿಬಂಟನಾಳ, ತಾ.ಪಂ ಶಿವಲಿಂಗ, ಸುರೇಶ, ಮಹಿಬೂಬ ಪಾಷ ಸೇರಿದಂತೆ ಇನ್ನಿತರರು ಇದ್ದರು.