ಪ್ರತಿಯೊಬ್ಬರು ತಪ್ಪದೆ ಮತ ಚಲಾಯಿಸಬೇಕು: ಎಸ್.ವಿ ರವಿ

ಜಗಳೂರು.ಮೇ.೧; ಪ್ರತಿಯೋಬ್ಬರು ತಮ್ಮ ಅಮೂಲ್ಯವಾದ ಮತವನ್ನು ತಪ್ಪದೆ ಚಾಲಾಯಿಸಿ ಪ್ರಜಾ ಪ್ರಭುತ್ವದ ಘನತೆಯನ್ನು ಎತ್ತಿ ಹಿಡಿಯ ಬೇಕು ಎಂದು ಚುನಾವಣಾಧಿಕಾರಿ ಎಸ್.ವಿ.ರವಿ ಹೇಳಿದರು. ಪಟ್ಟಣದ ಹಳೆ ಪಟ್ಟಣ ಪಂಚಾಯಿತಿ ಮುoಭಾಗದಲ್ಲಿ ತಾಲೂಕು ಚುನಾವಣಾ ಶಾಖೆವತಿಯಿಂದ ಹಮ್ಮಿಕೊಳ್ಳಲಾಗಿದ್ದ ನಮ್ಮ ನಡೆ ಮತಗಟ್ಟೆ ಕಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಂತರ ಮಾತನಾಡಿದ ಅವರು ಸಂವಿಧಾನವು ಪ್ರತಿಯೊಬ್ಬರಿಗೂ ಮತ ಚಾಲಾಯಿಸುವಂತ ಹಕ್ಕನ್ನು ನೀಡಿದ್ದರು ಪ್ರತಿಯೋಬ್ಬರು ತಪ್ಪದೆ ಮತ ಚಲಾಯಿಸಿ ಪ್ರಜಾ ಪ್ರಭುತ್ವದ ಘನತೆಯನ್ನು ಎತ್ತಿ ಹಿಡಿಯಬೇಕು ಎಂದರು.ತಹಶೀಲ್ದಾರ್ ಜಿ.ಸಂತೋಷ್ ಕುಮಾರ್ ಮಾತನಾಡಿ ಪ್ರತಿಯೊಂದು ಮತಗಟ್ಟೆ ಸಮೀಪ ಮತದಾರ ಜಾಗೃತಿ ಕುರಿತು ದ್ವಜಾರೋಹಣ ಮಾಡಿ ಮತಗಟ್ಟೆ ವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸುವಂತ ಕೆಲಸ ಮಾಡಲಾಗುತ್ತಿದೆ ಹಾಗಾಗಿ ಪ್ರತಿಯೊಂದು ಮತಗಟ್ಟೆ ಕೇಂದ್ರವನ್ನು ಹಸಿರು ತಳಿರು ತೊರಣಗಳಿಂದ ಸಿಂಗಾರಗೊಳಿಸಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.ಈ ಸಂಧರ್ಭದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೋಕ್ಯಾನಾಯ್ಕ. ತಾಲೂಕು ಆರೋಗ್ಯಧಿಕಾರಿ ಜಿ.ಓ.ನಾಗರಾಜ್, ಪ ಪಂ ಆರೋಗ್ಯ ನೀರಿಕ್ಷಕ ಕೀಫಾಯತ್. ಕಂದಾಯ ಅಧಿಕಾರಿ ಮೋಹಿದೀನ್. ಇಂಜಿನಿಯರ್ ಶ್ರುತಿ.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕರು ಹಾಜರಿದ್ದರು.