ಪ್ರತಿಯೊಬ್ಬರು ತಪ್ಪದೆ ಮತಚಲಾಯಿಸಿ ಗುರಿ ಹೆಚ್ಚಳಕ್ಕೆ ಸಲಹೆ

ಆಳಂದ:ಮೇ.9: ತೀವ್ರ ಕುತೂಹಲ ಕೆರಳಿಸಿರುವ ಇಲ್ಲಿನ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಮತದಾನಕ್ಕೆ ಕ್ಷಣಗಣನೆ ಶುರುವಾಗಿದ್ದು, ಮೇ 10ರಂದು (ಬುಧವಾರ) ಬೆಳಗಿನ 7:00ಗಂಟೆಯಿಂದ ಸಂಜೆ 6:00ಗಂಟೆಯ ವರೆಗೆ ಎಲ್ಲಾ 254 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ.
ಪಟ್ಟಣದ ಬಾಲಕರ ಸರ್ಕಾರಿ ಜ್ಯೂನಿಯರ್ ಕಾಲೇಜಿನಲ್ಲಿನ ಚುನಾವಣೆ ಪ್ರಕ್ರಿಯೆ ನಿಯಂತ್ರಣ ಸ್ಥಳದಿಂದ ಎಲ್ಲ ಮತಗಟ್ಟೆ ಕೇಂದ್ರಗಳಿಗೆ ಮಂಗಳವಾರ ಅಧಿಕಾರಿಗಳನ್ನು ಮತ್ತು ಸಿಬ್ಬಂದಿಗಳನ್ನು ಮತಯಂತ್ರದೊಂದಿಗೆ ಆಯಾ ಮತದಾನ ಕೇಂದ್ರಕ್ಕೆ ಕರ್ತವ್ಯ ನಿರ್ವಹಿಸಲು ಬೀಳ್ಕೊಡಲಾಯಿತು.
ಬೇಸಿಗೆ ವಿಪರೀತ ಬಿಸಿಲನ ಮಧ್ಯ ಬಸವಳಿದು ಹೋಗಿದ್ದ ಸಿಬ್ಬಂದಿಗಳಿಗೆ ಮಂಗಳವಾರ ಮಧ್ಯಾಹ್ನದ ವೇಳೆ ಅಕಾಲಿಕ ಮಳೆ ಸುರಿದ ಹಿನ್ನೆಲೆಯಲ್ಲಿ ವಾತಾವರಣದಲ್ಲಿ ತಂಪೇರಿ ನೆಮ್ಮದಿ ತರಿಸಿದ ಘಟನೆ ನಡೆದಿದೆ. ಮಳೆಯಿಂದಾಗಿ ಕೆಲಕಾಲ ಅಡೆ, ತಡೆಯಾಗಿತ್ತಾದರು ಬಳಿಕ ಪರಿಸ್ಥಿತಿ ಅಧಿಕಾರಿಗಳು ಸರಿಪಿಡಿಸಿ ಮತಗಟ್ಟೆಗಳಿಗೆ ಸಿಬ್ಬಂದಿಗಳನ್ನು ಕಳುಹಿಸಿಕೊಟ್ಟರು.
ಕ್ಷೇತ್ರದ 254 ಮತಗಟ್ಟೆಯಲ್ಲಿ ಮೂಲಸೌಲಭ್ಯ ಕಲ್ಪಿಸಿ ಮತದಾನಕ್ಕೆ ಚುನಾವಣೆ ಆಯೋಗ ಸಿದ್ಧತೆ ಮಾಡಿಕೊಂಡಿದೆ. ಒಟ್ಟು ಕ್ಷೇತ್ರದ 241478 ಮತದಾರರಲ್ಲಿ ಪುರುಷ 125970 ಹಾಗೂ ಮಹಿಳಾ 115474 ಮತ್ತು ಇತರೆ 34 ಮತದಾರರು ಸೇರಿ 241478 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ ಎಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ.
ಸೆಕ್ಟರ್ ಆಫಿಸರ್ 20, ಮಾಸ್ಟರ್ ಟ್ರೇನರ್ 11, ವೀಕ್ಷಕರು 60, ರೂಟ್ ಆಪಿಸ್‍ರ 84, ಹೀಗೆ ಅಲ್ಲದೆ, ಮತಗಟ್ಟೆ ಸಿಬ್ಬಂದಿ, ಅಧಿಕಾರಿ ಸೇರಿ ಒಟ್ಟು ಭ್ರದತ್ರಾ ಸಿಬ್ಬಂದಿ ಹೊರತು ಪಡಿಸಿ 1016 ಮಂದಿ ಚುನಾವಣೆಗೆ ನಿಯೋಜಿಸಲಾಗಿದೆ.
ಭದ್ರತೆಗೆ 750 ಮಂದಿ: ಸ್ಥಳೀಯ 46- ವಿಧಾನಸಭಾ ಸಾರ್ವತ್ರಿಕ ಚುನಾವಣೆ ಮತದಾನಕ್ಕೆ ಪಟ್ಟಣ ಸೇರಿ ಗ್ರಾಮೀಣ ಭಾಗದಲ್ಲಿನ ಒಟ್ಟು 254 ಮತಗಟ್ಟೆಗಳ ಪೈಕಿ 67 ಸೂಕ್ಷ್ಮ ಮತ್ತು ಅತಿ ಸೂಕ್ಮಮತಗಟ್ಟೆ ಎಂದು ಪೊಲೀಸ್ ಇಲಾಖೆ ಪರಿಗಣಿಸಿದೆ. ಪಟ್ಟಣ ಸೇರಿ ಗ್ರಾಮೀಣ ಮತದಾನ ಕೇಂದ್ರಗಳಲ್ಲಿ ಬೀಗಿ ಭದ್ರತೆಗಾಗಿ ಒಟ್ಟು 750 ಜನ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಡಿವೈಎಸ್‍ಪಿ ಗೋಪಿ ಬಿ.ಆರ್. ಅವರು ತಿಳಿಸಿದ್ದಾರೆ.
280 ಪೊಲೀಸ್ ಸಿಬ್ಬಂದಿಗಳು ಹಾಗೂ 100 ಗೃಹ ರಕ್ಷದಳ ಸಿಬ್ಬಂದಿ ಸಿಎಂಎಫ್ 320 ಸೇರಿ ಒಟ್ಟು 750 ಸಿಬ್ಬಂದಿಗಳು ಮತ್ತು ಮೇಲ್ವಸ್ತುವಾರಿ ಓರ್ವ ಡಿವೈಎಸ್‍ಪಿ ಗೋಪಿ ಬಿ.ಆರ್. ಸಿಪಿಐ ಭಾಸು ಚವ್ಹಾಣ, ಮಹಾದೇವ ಪಂಚಮುಖಿ, ವಿಜಯಕುಮಾರ ನೋಡಿಕೊಳ್ಳಲಿದ್ದಾರೆ. ಕ್ಷೇತ್ರದ ಅತಿ ಸೂಕ್ಷ್ಮ ಮತಗಟ್ಟೆ ಕಡಗಂಚಿ, ಸರಸಂಬಾ, ಖಜೂರಿ, ತಡಕಲ್ ಹೀಗೆ 8 ಮತಗಟ್ಟೆಗೆ 8 ಮಂದಿ ಸಬ್ ಇನ್ಸಪೆಕ್ಟೇರ್ ಹಾಗೂ ಸಿಆರ್‍ಪಿಎಫ್ ಸಿಬ್ಬಂದಿ ಸ್ಥಳದಲ್ಲಿದ್ದು ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಹೇಳಿದರು.
ಕಡ್ಡಾಯ ಮತದಾನಕ್ಕೆ ಮನವಿ:
ಸಖಿ, ವಿಶೇಷಚೇತನ, ಮಾದರಿ ಹಾಗೂ ಸಾಂಪ್ರದಾಯಿಕ ಮತಗಟ್ಟೆಗಳು ಸ್ಥಾಪಿಸಲಾಗಿದೆ ಎಂದು ಸ್ವಿಪ್ ಸಮಿತಿ ಅಧ್ಯಕ್ಷರು ಹಾಗೂ ತಾಪಂ ಇಒ ಚಂದ್ರಮೌಳಿ ಅವರು ತಿಳಿಸಿದರು.
5 ಸಖಿ ಗುಲಾಬಿ ಮತಗಟ್ಟೆಗಳು ಪಟ್ಟಣದ ಹತ್ತ್ಯಾನಗಲ್ಲಿ, ಬಾಳನಗೇರಿ, ಸಿಪಿಐಎಸ್ ಶಾಲೆ, ಜಮಗಾ ಜೆ. ಮತ್ತು ಸಂಟನೂರ ಗ್ರಾದಮಲ್ಲಿ ಸಖಿಮಗಟ್ಟೆ ಸ್ಥಾಪಿಸಲಾಗಿದೆ. ಇಲ್ಲಿ ಸಂಪೂರ್ಣವಾಗಿ ಮಹಿಳೆಯರೆ ಮತಗಟ್ಟೆ ನಿರ್ವಹಿಸುತ್ತಾರೆ. ಅಲ್ಲದೆ, ಕಗಡಂಚಿಯಲ್ಲಿ 1 ವಿಶೇμÉೀಚೇತನರ ಮತಗಟ್ಟೆ ಮತ್ತು ಮೋಘಾ ಕೆ. ಗ್ರಾಮದಲ್ಲಿ 1 ಸಾಂಪ್ರದಾಯಿಕ ಪಾರಂಪರೆಯ ಮತಗಟ್ಟೆಗಳನ್ನು ರೂಪಿಸಲಾಗಿದೆ. ಮತಗಟ್ಟೆಗೆ ತೊಗರಿ ಕಣಜ ಚಿತ್ರಣಗಳನ್ನು ಬಿಡಿಸಲಾಗಿದೆ. ಮಟಕಿ ಗ್ರಾಮದಲ್ಲಿ ಯುವಮತದಾರ ಮತಗಟ್ಟೆಯನ್ನಾಗಿ ಸ್ಥಾಪಿಸಲಾಗಿದೆ. ಒಟ್ಟಾರೆ ಕ್ಷೇತ್ರದ ಜನತೆ ಕಡ್ಡಾಯವಾಗಿ ಶೇ.100 ರಷ್ಟು ಮತದಾನ ಕೈಗೊಂಡು ಹೆಚ್ಚುಮತದಾನ ಗುರಿ ಸಾಧನೆಗೆ ಕೈಜೋಡಿಸಬೇಕು ಎಂದು ಚಂದ್ರಮೌಳಿ ಅವರು ಮತದಾರರಲ್ಲಿ ಮನವಿ ಮಾಡಿದ್ದಾರೆ.