ಪ್ರತಿಯೊಬ್ಬರು ಕಡ್ಡಾಯ ಮತದಾನ ಮಾಡಲು ಕರೆ


ಸಂಜೆವಾಣಿ ವಾರ್ತೆ
ಯಲಬುರ್ಗಾ. ಏ.18-  ವಿಧಾನಸಭಾ ಕ್ಷೇತ್ರ-63 ವ್ಯಾಪ್ತಿಯಲ್ಲಿ ಮೇ-10 ರಂದು ಜರುಗುವ ಸಾರ್ವತ್ರಿಕ ಚುನಾವಣೆಯಲ್ಲಿ  ಸಾರ್ವಜನಿಕರು ಕಡ್ಡಾಯವಾಗಿ ಮತದಾನ ಮಾಡಲು ಕುಕನೂರು ಪಟ್ಟಣದ ಸಾರ್ವಜನಿಕ ಸ್ಥಳಗಳಲ್ಲಿ ಸರ್ಕಾರಿ ನೌಕರರು ಬೈಕ್ ರ್ಯಾಲಿ ಮೂಲಕ ಜಾಗೃತಿ ಮೂಡಿಸಲಾಯಿತು.
ಕುಕನೂರು ಪಟ್ಟಣದಲ್ಲಿ  ಸರ್ಕಾರಿ ನೌಕರರ ಸಂಘ ಕುಕನೂರು, ಆರ್.ಡಿ.ಪಿ.ಆರ್ ನೌಕರರ ಸಂಘ ಕುಕನೂರು, ಮತ್ತು ನರೇಗಾ ಸಿಬ್ಬಂದಿಗಳು, ವಿ.ಆರ್.ಡ್ಬ್ಲೂ
ಗ್ರಾಮ ಪಂಚಾಯತಿ ಸಿಬ್ಬಂದಿಗಳು ಮತ್ತು ಪಟ್ಟಣ ಪಂಚಾಯತಿ ಸಿಬ್ಬಂದಿಗಳಿಂದ ಮೇ-10ನೇ ತಾರೀಕಿನಂದು ಜರುಗುವ ಸಾರ್ವತ್ರಿಕ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕುಕನೂರು ಪಟ್ಟಣದ ಪ್ರಮುಖ ರಾಜಭೀದಿಗಳು ಹಾಗೂ ವೃತ್ತಗಳಲ್ಲಿ ಪಥ ಸಂಚಲನವನ್ನು ಆಯೋಜಿಸಲಾಗಿತ್ತು.
ಪಟ್ಟಣದ SFS ಶಾಲೆಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಮಣ್ಣ ದೊಡ್ಮನಿ , ಕುಕನೂರು ತಹಶೀಲ್ದಾರರಾದ ನೀಲಪ್ರಭ ಬಬಲದ್, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳಾದ ಪ್ರಕಾಶ್ ಬಾಗಳೆ ಹಸಿರು ನಿಶಾನೆ ತೋರಿಸುವುದರ ಮೂಲಕ  ಬೈಕ್ ರ್ಯಾಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಕಾರ್ಯನಿರ್ವಾಹಕ ಅಧಿಕಾರಿಗಳು ಕುಕನೂರು ತಾಲೂಕಿನಾಧ್ಯಂತ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಕಡ್ಡಾಯವಾಗಿ ಮತದಾನ ಮಾಡಲು ಪ್ರತಿದಿನ ವಿಶೇಷ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ, ಅದರಂತೆ ಕುಕನೂರ ಪಟ್ಟಣ ಮತ್ತು ಸುತ್ತಮುತ್ತಲಿನ ನಾಗರೀಕರಿಗೆ ಮತದಾನದ ಕುರಿತು ಜಾಗೃತಿ ಮೂಡಿಸಲು ಬೈಕ್ ರ್ಯಾಲಿ ಕಾರ್ಯಕ್ರಮ ಆಯೋಜಿಸಿದ್ದು, ಸಾರ್ವಜನಿಕರು ಸಂವಿಧಾನಾತ್ಮಕವಾಗಿ ದೊರೆತ ಮತದಾನದ ಹಕ್ಕನ್ನು ಚಲಾಯಿಸಿ ಓಳ್ಳೆಯ ನಾಯಕರನ್ನು ಆಯ್ಕೆಮಾಡಲು ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ ಎಂದರು.
ನಂತರ ಕುಕನೂರು ತಹಶೀಲ್ದಾರರಾದ ನೀಲಪ್ರಭ ಬಬಲದ್  ರವರು ಮಾತನಾಡಿ ಈ ಭಾರಿಯ ಚುನಾವಣೆಯಲ್ಲಿ ವಿಶೇಷ ಚೇತನರು ಮತ್ತು ಹಿರಿಯ ನಾಗರೀಕರಿಗೆ ಅಂಚೇ ಮತದಾನದ ವ್ಯವಸ್ಥೆ ಕಲ್ಪಿಸಲಾಗಿದೆ ಅದನ್ನು ಬಳಸಿಕೊಂಡು ಪ್ರತಿಶತ 100% ಮತದಾನ ಮಾಡಲು ಕರೆ ನೀಡಿದರು.
ಜಾಗೃತಿ ಜಾಥಾ ಕಾರ್ಯಕ್ರಮವು ಪಟ್ಟಣದ ಎಸ್.ಎಫ್.ಎಸ್ ಶಾಲೆಯಿಂದ ಪ್ರಾರಂಭವಾದ ಬೈಕ್ ರ್ಯಾಲಿ ಕಾರ್ಯಕ್ರಮವು ಪಟ್ಟಣ ಪಂಚಾಯತಿ, ತಾಲೂಕ ಪಂಚಾಯತಿ, ಲಕ್ಷ್ಮೀಗುಡಿ, ಡಾ. ಬಿ.ಆರ್ ಅಂಬೇಡ್ಕರ್ ವೃತ್ತ, ಕೋಳಿಪೇಟೆ, ಮಹಾಮಾಯೇ ತೇರಿನ ಗಡ್ಡಿ, ಹಳೆ ಬಜಾರ ದಲ್ಲಿ ಸಾಗಿ ಶಿರೂರು ವೀರಭದ್ರಪ್ಪ ವೃತ್ತದಲ್ಲಿ   ಸಮಾರೋಪಗೊಂಡಿತು.
ಈ ಸಂದರ್ಭದಲ್ಲಿ ಕುಕನೂರು ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಪ್ರಕಾಶ್ ಬಾಗ್ಲಿ, ಕ್ಷೇತ್ರ ಶಿಕ್ಷಣಾಧೀಕಾರಿಗಳಾದ ಪದ್ಮನಾಭ್ ಕರ್ಣಂ, ಶಿಕ್ಷಕರ ಸಂಘದ ಅಧ್ಯಕ್ಷರಾದ ಮಹೇಶ್ ಸಬರದ್, ಪಿಡಿಓ ಸಂಘದ ಅಧ್ಯಕ್ಷರಾದ ಶೇಕಸಾಬ್ ಪಿ.ಎಸ್, ಪೋಲೀಸ್ ಇಲಾಖೆಯ ಎ.ಎಸ್.ಐ ಶರಣಪ್ಪ ಗೂಳರಡ್ಡಿ, ಕಂದಾಯ ಇಲಾಖೆಯ ಅಧಿಕಾರಿಗಳು, ಮನನ ಮತ್ತು ಸಿಬ್ಬಂದಿಗಳು, ಪಿಡಿಓ ರವರು, ಶಿಕ್ಷಕರು, ಬಿಲ್ ಕಲೆಕ್ಟರ್, ಕಂಪ್ಯೂಟರ್ ಅಪರೇಟರ್, TAE, BFT, VRW, ಸೇರಿದಂತೆ ಪಟ್ಟಣ ಪಂಚಾಯತಿ ಸಿಬ್ಬಂದಿಗಳು ತಾಲೂಕ ಪಂಚಾಯತಿ ಸಿಬ್ವಂದಿಗಳು ಪಾಲ್ಗೋಂಡಿದ್ದರು.