ದಾವಣಗೆರೆ.ಜು.2; ಸ್ನಾತಕ ಪದವಿ ನಂತರ ವಿದ್ಯಾರ್ಥಿಗಳು ಓದುವುದನ್ನು ನಿಲ್ಲಿಸದೆ ಅವಕಾಶವಿದ್ದರೆ ಉನ್ನತ ಶಿಕ್ಷಣ ಪಡೆಯುವಂಥರಾಗಬೇಕು ಪ್ರತಿಯೊಬ್ಬರಿಗೂ ಉನ್ನತ ಶಿಕ್ಷಣ ಕಡ್ಡಾಯವಾದಾಗ ವ್ಯಕ್ತಿಯ ಅಭಿವೃದ್ಧಿ ಹಾಗೂ ದೇಶದ ಅಭಿವೃದ್ಧಿಯಾಗಲು ಸಾಧ್ಯ ಎಂದು ಸರ್ಕಾರಿ ಕಾಲೇಜಿನ ಪ್ಲೇಸ್ಮೆಂಟ್ ಅಧಿಕಾರಿ ವೆಂಕಟೇಶ್ ಬಾಬುರವರು ಹೇಳಿದರು. ಕಾಲೇಜಿನ ಪ್ಲೇಸ್ಮೆಂಟ್ ಸೆಲ್ ವತಿಯಿಂದ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಪದವಿ ನಂತರ ಮುಂದೇನು? ಕಾರ್ಯಕ್ರಮದಲ್ಲಿ ಮಾತನಾಡಿದರು.ಪದವಿ ನಂತರ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಮೂರು ಅವಕಾಶವಿರುತ್ತೇವೆ ಮೊದಲನೇದಾಗಿ ಉನ್ನತ ಶಿಕ್ಷಣ ಎರಡನೇದಾಗಿ ಕೆಲಸ ಮೂರನೇದಾಗಿ ಸ್ವತಂತ್ರ ವ್ಯವಹಾರ ಆರಂಭಿಸುವುದು. ಪದವಿ ಪಡೆದ ವಿದ್ಯಾರ್ಥಿಗಳು ತಮ್ಮ ಕುಟುಂಬದ ಪರಿಸರಕ್ಕೆ ಹೊಂದಿಕೊಳ್ಳುವಂತೆ ನಿರ್ಧಾರವನ್ನು ಕೈಗೊಳ್ಳಬೇಕು ಅನಿವಾರ್ಯವಿದ್ದರೆ ಕೆಲಸಕ್ಕೆ ಹೋಗಿ ಇಲ್ಲದಿದ್ದರೆ ಉನ್ನತ ಶಿಕ್ಷಣ ಪಡೆಯುವ ನಿಟ್ಟಿನಲ್ಲಿ ಯೋಚಿಸಿ ಉತ್ತಮ ಕಾಲೇಜುಗಳಲ್ಲಿ ಉನ್ನತ ಶಿಕ್ಷಣವನ್ನು ಪಡೆದರೆ ಮುಂದೆ ಉತ್ತಮ ಕೆಲಸ ಹೊಂದಿ ಉತ್ತಮವಾದ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.ಕೆಲಸವೆಂದು ಯೋಚಿಸಿದಾಗ ಪ್ರತಿಯೊಬ್ಬರಿಗೂ ಸರ್ಕಾರಿ ಕೆಲಸದ ಮೇಲೆ ವ್ಯಾಮೋಹ ಹೆಚ್ಚು ಆದರೆ ಎಲ್ಲರಿಗೂ ಸರ್ಕಾರಿ ಕೆಲಸ ಸಿಗುವುದು ತುಂಬಾ ಕಷ್ಟ ಅದು ಸಾಧ್ಯವೂ ಆಗುವುದಿಲ್ಲ ಹಾಗಾಗಿ ಸರ್ಕಾರಿ ಕೆಲಸಕ್ಕೆ ಪ್ರಯತ್ನಿಸುವವರು ನಿಷ್ಠೆಯಿಂದ ಕಷ್ಟಪಟ್ಟು ಅದನ್ನು ಪಡೆಯುವಲ್ಲಿ ಪ್ರಯತ್ನಿಸಬೇಕು ಇಲ್ಲದೆ ಹೋದರೆ ಅದೇ ಜೀವನವಲ್ಲ ಎಂಬುದನ್ನು ಅರಿತು ಇತರೆ ಖಾಸಗಿ ವಲಯದಲ್ಲಿ ಉತ್ತಮವಾದ ಕೆಲಸ ಸಂಬಳ ಎರಡೂ ದೊರೆಯುತ್ತದೆ ಅದಕ್ಕಾಗಿ ಒಂದಿಷ್ಟು ಕೌಶಲ್ಯಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ವಿದ್ಯಾರ್ಥಿಗಳು ತಮ್ಮ ಹವ್ಯಾಸಗಳನ್ನು ವ್ಯವಹಾರಗಳನ್ನಾಗಿ ಮಾಡಿಕೊಂಡರೆ ಸ್ವಂತ ಉದ್ದಿಮೆ ಆರಂಭಿಸಿ ನಾಲ್ಕಾರು ಜನಗಳಿಗೆ ಕೆಲಸ ಕೊಡುವಂತಹ ಉದ್ಯಮೆದಾರರಾಗುವ ಅವಕಾಶಗಳು ಇದೆ ಎಂದು ವಿದ್ಯಾರ್ಥಿಗಳನ್ನು ಕುರಿತು ಪದವಿ ನಂತರದ ಅವಕಾಶಗಳನ್ನು ಬಿಚ್ಚಿಟ್ಟರು.ಸಾಮಾಜಿಕವಾಗಿ ಗುರುತಿಸಿಕೊಳ್ಳಲು ಉತ್ತಮವಾದ ಶಿಕ್ಷಣದ ಅವಶ್ಯಕತೆ ಇದೆ ಶಿಕ್ಷಣದಿಂದ ಶಿಸ್ತು ವಿನಯ ಸಂಸ್ಕೃತಿ ಹಾಗೂ ಸಾಮಾಜಿಕ ಜವಾಬ್ದಾರಿ ಬರುತ್ತದೆ ಹಾಗಾಗಿ ಪ್ರತಿಯೊಬ್ಬರೂ ಗಮನ ಹರಿಸಬೇಕೆಂದು ಹೇಳಿದರು.ಕಾರ್ಯಕ್ರಮದಲ್ಲಿ ರಾಜ್ ಮೋಹನ್ ಎನ್ ಆರ್ ಸದಸ್ಯರಾದ ನರೇಶ್ ಯು ಸಿ ಮತ್ತು ಇತರರು ಭಾಗವಹಿಸಿದ್ದರು.