ಪ್ರತಿಯೊಬ್ಬರು ಆರೋಗ್ಯಕ್ಕೆ ಮಹತ್ವ ನೀಡಬೇಕು:ಡಾ.ಜ್ಯೋತಿ

ಸೈದಾಪುರ:ಜು.17:ಕೋವಿಡ ಇಗಾಗಲೇ ಸಾಕಷ್ಟು ತೊಂದರೆಯನ್ನುಂಟು ಮಾಡುದ್ದೂ ಇದರಿಂದ ಜಾಗೂರಕರಾಗಿರಲೂ ಪ್ರತಿಯೊಬ್ಬರು ಆರೋಗ್ಯಕ್ಕೆ ಮಹತ್ವ ನೀಡಬೇಕು ಎಂದು ವೈದ್ಯಾಧಿಕಾರಿ ಡಾ.ಜ್ಯೋತಿ ಕಟ್ಟಿಮನಿ ಅಭಿಪ್ರಾಯಪಟ್ಟರು.

ಪಟ್ಟಣದ ಸರಕಾರಿ ಸಮೂದಾಯ ಆರೋಗ್ಯಕ್ಕೆ ಕೇಂದ್ರದಲ್ಲಿ ಹಮ್ಮಿಕೊಂಡ ಬೂಸ್ಟರ ಡೋಜ ಲಸಿಕೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರಕಾರ ಸಾರ್ವಜನಿಕರ ಆರೋಗ್ಯ ಕಾಪಾಡಲು ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಈ ದಿಸೆಯಲ್ಲಿ ಕೋವಿಡ ಲಸಿಕೆ ಉತ್ತಮ ಆರೋಗ್ಯ ಕಂಡು ಕೊಳ್ಳಲು ಸಾಧ್ಯವಾಗುತ್ತಿದೆ ಎಂದು ಹೇಳಿದರು.

ಲಸಿಕೆ ಪಡೆದು ಪ್ರಜ್ಞಾ ಕೈಗಾರಿಕಾ ತರಬೇತಿ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಅಲ್ಲಿಪೂರ ಮಾತನಾಡಿ, ಸರಕಾರ ಕೋವಿಡ ನಿಯಂತ್ರಣಕ್ಕಾಗಿ ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಉಚಿತ ಲಸಿಕೆ ನೀಡುತ್ತಿದೆ. ಇದರ ಸರಿಯಾದ ಸದುಪಯೋಗ ನಮ್ಮದಾಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಡಾ.ಗಿರಿಜಾ.ಪಿ.ವಾರದ, ಡಾ.ಅಶ್ವಿನಿ, ಡಾ.ಪಾಹ್ಮೀದಾ ಸುಲ್ತಾನ, ಜಮೀರ, ವಿದ್ಯಾ ವರ್ಧಕ ಪ್ರೌಢ ಶಾಲಾ ಶಿಕ್ಷಕ ಗೂಳಪ್ಪ.ಎಸ್. ಮಲ್ಹಾರ, ಮಾಜಿ ಗ್ರಾ.ಪಂ.ಸದಸ್ಯ ಮಾಹಾದೇವಪ್ಪ ದದ್ದಲ, ಪರ್ವತರೆಡ್ಡಿಗೌಡ ದದ್ದಲ, ಭೀಮಣ್ಣ ಮಡಿವಾಳ, ಮರೆಪ್ಪ ಕಟ್ಟಿಮನಿ, ಭೀಮಣ್ಣ ವಡವಟ್, ಶಂಕರಗೌಡ, ಆರೋಗ್ಯ ಇಲಾಖೆಯ ಶಿವಶಂಕರ, ಮೈಪಾಲ, ದೇವು ವಡವಟ ಸೇರಿದಂತೆ ಇತರರಿದ್ದರು.

ಸರಕಾರ ಉಚಿತ ಬೂಸ್ಟರ ಡೋಜ ಕೋವಿಡ ಲಸಿಕೆ ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಇದರ ಸದುಪಯೋಗ ನಮ್ಮದಾಗಬೇಕು. ಸಾರ್ವಜನಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರು ಇದಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಶಿಕ್ಷಕನಾಗಿ ನಾನು ಈ ಜವಬ್ದಾರಿಯೊಂದಿಗೆ ಲಸಿಕೆ ಪಡೆಯುತ್ತಿದ್ದೇನೆ. ಇದು ಆರೋಗ್ಯದ ಸುರಕ್ಷ ಕ್ರಮವಾಗಿದೆ.

                    ಗೂಳಪ್ಪ.ಎಸ್.ಮಲ್ಹಾರ ಪ್ರೌಢ ಶಾಲಾ ಶಿಕ್ಷಕ ಸೈದಾಪುರ