ಪ್ರತಿಯೊಬ್ಬರಿಗೆ 55 ಲೀಟರ್ ಶುದ್ಧ ಕುಡಿಯುವ ನೀರು ಸಿಗಬೇಕು: ಸಂಯೋಜಕ ಸಿದ್ದಲಿಂಗರೆಡ್ಡಿ

ಗುರುಮಠಕಲ್:ಜೂ.11: ಒಂದು ದಿನ ಅಥವಾ ನಾಲ್ಕು ದಿನವಾದರೂ ಊಟ ವಿಲ್ಲದೆ ಬದುಕಬಹುದು ಆದರೆ ಕುಡಿಯಲಿಕ್ಕೆ ನೀರು ಉಸಿರಾಡಲು ಗಾಳಿ ಇಲ್ಲದಿದ್ದರೆ ನಾವು ಯಾರು ಕೂಡ ಬದುಕಲಿಕ್ಕೆ ಸಾಧ್ಯವಿಲ್ಲ. ಅದಕ್ಕೆ ನೀರನ್ನು ಬಹಳ ಹಿತವಾಗಿ ಮಿತವಾಗಿ ಬಳಸಬೇಕು ಹಿರಿಯರು ಹೇಳುತ್ತಾರೆ ನಾವು ನೀರನ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಕೋಳಿ ಕೂಗುವುದರೊಳಗೆ ಅಂತರ ಜಲಮಟ್ಟ ಪಾತಾಳಕ್ಕೆ ಹೋಗುತ್ತದೆ ಎಂದು. ಗುರುಮಠಕಲ ತಾಲೂಕ ಚಂಡರಿಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಲ್ಲಿ ಬರುವ ಮಡೆಪಲ್ಲಿ ಗ್ರಾಮದಲ್ಲಿ ಜಲಜೀವನ ಮಿಷನ್ ಮತ್ತು ಸ್ವಚ ಭಾರತ ಮಿಷನ್ ಯೋಜನೆಯಡಿಯಲ್ಲಿ ಕಲಿಕ ಟಾಟಟ್ರಸ್ಟ ವತಿಯಿಂದ ಹಮ್ಮಿಕೊಂಡಿದ್ದ ಹಾಗೂ ಜೀವನ ಬೆಳಕು ಕಲಾತಂಡದವರಿಂದ ಹಮ್ಮಿಕೊಂಡಿದ್ದ ಜಲಜೀವನ ಕುರಿತು ಮಾತನಾಡಿದ ಕಲಿಕ ಟಾಟಟ್ರಸ್ಟ ಯಾದಗಿರಿ ಗುರುಮಠಕಲ ವಲಯ ಸಂಯೋಜಕ ಸಿದ್ದಲಿಂಗರೆಡ್ಡಿ ಯವರು ಮಾತನಾಡಿ ಇದಕ್ಕಿಂತ ಮೊದಲು ತಮ್ಮ ಗ್ರಾಮಕ್ಕೆ ಬಂದು ಜಲಜೀವನದ ಬಗ್ಗೆ ಸಾಕಷ್ಟು ವಿಷಯಗಳನ್ನು ತಮ್ಮ ಮುಂದೆ ಹಂಚಿಕೊಂಡಿದ್ದಿವಿ ಈಗ ಜೀವನ ಬೆಳಕು ಕಲಾತಂಡದವರಿಂದ ಇನ್ನಷ್ಟು ಮಾಹಿತಿ ತಮಗೆ ತಿಳಿಯಲು ಜಿಲ್ಲಾ ಪಂಚಾಯತ. ತಾಲೂಕ ಪಂಚಾಯತ. ಗ್ರಾಮ ಪಂಚಾಯತ ಸಹಕಾರ ದೊಂದಿಗೆ ಪ್ರತಿಮನೆಗೆ ಗಂಗಾ.ಪ್ರತಿಮನೆಗೆ ನಳ ಈ ಕಾರ್ಯಕ್ರಮದ ಯೋಜನೆ ಆದರೆ ಪ್ರತಿಯೊಂದು ನಳಕ್ಕೂ ಮೀಟರ್ ಕೂಡಿಸಿದ್ದಾರೆ ಯಾಕೆಂದರೆ ನಳದ ಮೂಖಾಂತ ಬರುವ ನೀರು ಹೆಚ್ಚಾಗಿ ಪೆÇೀಲಾಗದಂತೆ ಬರುವಂತಹ ನೀರನ್ನು ಸಂಪೂರ್ಣವಾಗಿ ಜವಾಬ್ದಾರಿಯುತವಾಗಿ ಬಳಸಿಕೊಂಡು ಎಲ್ಲಾರಿಗೂ ಹಿತವಾಗಿ ಮಿತವಾಗಿ ಸಿಗುವ ಒಂದು ಉದ್ದೇಶವೇ ಈ ಯೋಜನೆಯ ಮುಖ್ಯ ಉದ್ದೇಶ. ಪ್ರತಿ ಮನೆಗು ಯಾರಿಗೂ ಬೇದ ಭಾವವಿಲ್ಲದೆ ಪ್ರತಿ ಮನೆಗೆ ನಳ ಜೊತೆಗೆ ಮೀಟರ್ ಕೂಡ ಕೂಡಿಸಿದ್ದಾರೆ ಇದರ ಉದ್ದೇಶ ಪ್ರತಿ ಒಬ್ಬರಿಗೆ 55 ಲೀಟರ್ ಶುದ್ಧ ಕುಡಿಯುವ ನೀರು ಸಿಗಬೇಕು ಅನ್ನುವ ಉದ್ದೇಶದಿಂದ ಆದಕಾರಣ ದಯವಿಟ್ಟು ಇದನ್ನು ಬಳಸಿಕೊಳ್ಳಿರಿ ಮುಂದಿನ ದಿನಗಳಲ್ಲಿ ನಿವೆಲ್ಲಾರು ಯಾವರೀತಿ ಯಾಗಿ ನೀರನ್ನು ಪೆÇಳಾಗದಂತೆ ಉಳಿಸಿದರೆ ಮುಂದಿನ ಪೀಳಿಗೆಗೆ ನಾವು ನೀರನ್ನು ಕೊಡೋಕೆ ಸಾಧ್ಯ ಈ ಗ್ರಾಮ ನಿಮ್ಮದು. ಈ ನಳ ನಿಮ್ಮದು.ಆದರೆ ಮನುಷ್ಯನಿಗೆ ನೀರು ಎಷ್ಟು ಮುಖ್ಯವೋ ಗಾಳಿಯು ಅಷ್ಟೇ ಮುಖ್ಯ ಆದ್ದರಿಂದ ನೀರನ್ನು ಹೆಚ್ಚು ಪೆÇಳಾಗದಂತೆ ಮಿತವಾಗಿ ಬಳಸಿ ಎಂದು ತಿಳಿಸಿದರು. ಗ್ರಾಮದ ಆಂಜನೇಯ ದೇವಾಲಯ ಆವರಣದಲ್ಲಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ಜೀವನ ಬೆಳಕು ಕಲಾತಂಡದ ನಾಯಕರು ರಾಜಶೇಖರಯ್ಯ ಹಿರೇಮಠ. ಶಂಕುತಲ ರೋಡಿ. ಸಹ ಕಲಾವಿದರು ಬಸವರಾಜ ಭಾಸಲಪೂರ. ಬಸ್ಸಯ್ಯಮಠಪತಿ. ಕೊಟ್ರೇಶ್ ಹೂವಿನ ಹಡಗಲಿ. ಸಾವಂತ್ರವ್ವ ಹೊಸೂರು.ರಾಮಚಂದ್ರ ಪೂಜಾರ. ಹಾಗೂ ಗ್ರಾಮದ ಹಿರಿಯರು ಮುಖಂಡರು ಮಾತೆಯರು ಮುದ್ದು ಮಕ್ಕಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.