ಪ್ರತಿಯೊಬ್ಬರಿಗೆ ಉದ್ಯೋಗಾವಕಾಶ ದೊರೆಯಬೇಕು: ಮೇಲಗಿರಿ


ಶಿಗ್ಗಾವಿ,ಎ.17: ಕ್ಷೇತ್ರ ಪ್ರತಿಯೊಂದು ರಂಗದಲ್ಲಿ ಅಭಿವೃದ್ದಿಹೊಂದಿ ಪ್ರತಿಯೊಬ್ಬ ಯುವಕ-ಯುವತಿಯರಿಗೆ ಉದ್ಯೋಗಾವಕಾಶ ದೊರೆಯಬೇಕು ಪ್ರತಿಯೊಂದು ಕುಟುಂಬ ಆರ್ಥಿಕವಾಗಿ ಸಭಲವಾಗಬೇಕು ಆ ದೃಷ್ಟಿಯಿಂದ ಜನನಾಯಕರು ಕಾರ್ಯಮಾಡಬೇಕು ಆ ಕೆಲಸವನ್ನು ಕ್ಷೇತ್ರದ ಶಾಸಕರು ಗೃಹ ಮತ್ತು ಕಾನೂನು, ಸಂಸದೀಯ ಸಚಿವ ಬಸವರಾಜ ಬೊಮ್ಮಾಯಿ ಮಾಡುತ್ತಿದ್ದಾರೆ ಎಂದು ಪ್ರಭಂಜನ ಅಪೇರಲ್ಸ್ ಕಂಪನಿ ಮಾಲಿಕ ರಾಘವೇಂದ್ರ ಮೇಲಗಿರಿ ಹೇಳಿದರು.
ಪಟ್ಟಣದ ಸವಣೂರ ರಸ್ತೆ ಸಚಿವರ ನಿವಾಸದಲ್ಲಿ ನೂತನವಾಗಿ ತಾಲೂಕಿನ ಮೋಟಳ್ಳಿ ಬಳಿ ಸಿದ್ದ ಉಡುಪುಗಳ ತಯಾರಿಕಾ ಪ್ರಭಂಜನ ಅಪೇರಲ್ಸ್ ಕಂಪನಿ ಆಯೋಜಿಸಿದ ಉದ್ಯೋಗಮೇಳದಲ್ಲಿ ಮಾತನಾಡಿದ ಅವರು, ಸಚಿವರ ದೂರದೃಷ್ಟಿಯಿಂದ ಖುರ್ಸಾಪೂರ ಕಲ್ಯಾಣ ಗ್ರಾಮದ ನಡುವೆ ಸುಮಾರು 60 ಎಕರೆ ಪ್ರದೇಶದಲ್ಲಿ ಜವಳಿಪಾರ್ಕ ನಿರ್ಮಾಣವಾಗಲಿದೆ, ಸುಮಾರು 18 ಸಾವಿರ ಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಯೋಜನೆ ಇದಾಗಿದ್ದು ಕ್ಷೇತ್ರದ ನಿರುದ್ಯೋಗ ಸಮಸ್ಯ ನೀಗಿಸಲಿದೆ ಎಂದರು.
ತಾಲೂಕ ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಮಾತನಾಡಿ, ಶಿಗ್ಗಾಂವ-ಸವಣೂರ ಕ್ಷೇತ್ರದ ಕ್ಷೇತ್ರದ ಪ್ರತಿಯೊಬ್ಬ ಯುವಕ-ಯುವತಿಯರಿಗೆ ಉದ್ಯೋಗ ಅವಕಾಸ ನೀಡುವ ಯೋಜನೆಯನ್ನು ಈಗಾಗಲೆ ಕ್ಷೇತ್ರದ ಶಾಸಕರು ರಾಜ್ಯ ಗೃಹ ಮತ್ತು ಕಾನೂನು ಸಂಸದೀಯ ಸಚಿವ ಬೊಮ್ಮಾಯಿಯವರ ಮಾಡುತ್ತಿದ್ದು ಖುರ್ಸಾಪೂರ ಕಲ್ಯಾಣ ಗ್ರಾಮದ ನಡುವೆ ಸುಮಾರು 60 ಎಕರೆ ಪ್ರದೇಶದಲ್ಲಿ ಜವಳಿಪಾರ್ಕ ನಿರ್ಮಾಣವಾಗಲಿದೆ, ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭೂಮಿಪೂಜೆ ನೆರವೇರಿಸಲಿದ್ದಾರೆ ಎಂದು ತಾಲೂಕ ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಹೇಳಿದರು.
ಕಾರ್ಯಕ್ರಮದ ಉದ್ಘಟಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಭರತ ಬೊಮ್ಮಾಯಿ, ಕ್ಷೇತ್ರದಲ್ಲಿ ಯುವಕರ-ಯುವತಿಯರ ನಿರುದ್ಯೋಗ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಪ್ರಭಂಜನ ಅಪೇರಲ್ಸ್ ಕಂಪನಿ ಮಾಲಿಕ ರಾಘವೇಂದ್ರ ಮೇಲಗಿರಿಯವರ ಪಾತ್ರ ತುಂಬಾ ಪ್ರಮುಖವಾಗಿದೆ ಎಂದರು.
ಗಂಗಾದರ ಬಾಣದ, ಬಂಕಾಪುರ ನಿವಾಸಿ ಅಮೇರಿಕಾ ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಮುರಗೇಶ ಚನ್ನೂರ, ಶಿಗ್ಗಾಂವ ಪುರಸಭೆ ಅಧ್ಯಕ್ಷ ಶ್ರೀಕಾಂತ ಬುಳ್ಳಕ್ಕನವರ, ಮಾಜಿ ಜಿಪಂ ಸದಸ್ಯರಾದ ಶೊಭಾ ನಿಸ್ಸಿಮಗೌಡ್ರ, ಮಾತನಾಡಿದರು.
ದೇವಣ್ಣ ಚಾಕಲಬ್ಬಿ, ಪುರಸಭೆ ಉಪಾಧ್ಯಕ್ಷ ಮಂಜುನಾಥ ಬ್ಯಾಹಟ್ಟಿ, ಸದಸ್ಯರಾದ ರಮೇಶ ವನಹಳ್ಳಿ, ದಯಾನಂದ ಅಕ್ಕಿ, ಬಿಜೆಪಿ ಮುಖಂಡರಾದ ಡಾ.ಮಲ್ಲೇಶಪ್ಪ ಹರಿಜನ, ಶರೀಫ ನಧಾಪ, ನರಹರಿ ಕಟ್ಟಿ, ತಾಪಂ ಉಪಾಧ್ಯಕ್ಷರಾದ ವಿಜಯಲಕ್ಷ್ಮಿ ಮುಂದನಮನಿ, ಸದಸ್ಯ ವಿಶ್ವನಾಥ ಹರವಿ, ಪ್ರಭಂಜನ ಅಪೇರಲ್ಸ್ ಕಂಪನಿಗೆ ಸಿದ್ದ ಉಡುಪು ತಯಾರಿಕೆಗೆ ಮೋಟಳ್ಳಿಯಲ್ಲಿ ಜಾಗೆ ಒದಗಿಸಿದ ಚನ್ನವೀರಯ್ಯ ಹಿರೇಮಠ, ಉದ್ಯೋಗಾವಕಾಶಕ್ಕಾಗಿ ಸಾವಿರಾರು ಯುವಕ ಯುವತಿಯರು, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು