
ಹರಿಹರ ಮೇ 26; ನಗರದ ಸರ್ಕಾರಿ ಡಿಪ್ಲಮೋ ಕಾಲೇಜಿನ ಸಭಾಂಗಣದಲ್ಲಿ ಸ್ಕಿಜೋಪ್ರೀನಿಯ ದಿನಾಚರಣೆಯನ್ನು ಆಚರಿಸಲಾಯಿತು.ಈ ಕಾರ್ಯಕ್ರಮದ ಉದ್ಘಾಟನೆಯನ್ನು ನ್ಯಾಯಾಧೀಶರಾದ ಮಹದೇವ್ ಕಾನಟ್ಟಿ ನೆರವೇರಿಸಿದರು. ನಂತರ ಮಾತನಾಡಿ ಪ್ರತಿಯೊಬ್ಬರಿಗೂ ಮಾನಸಿಕ ಆರೋಗ್ಯ ಮುಖ್ಯವಾಗಿದೆ. ಜೊತೆಗೆ ಮಾನಸಿಕ ಕಾಯಿಲೆಗಳಿಗೆ ಚಿಕಿತ್ಸೆ ಇದ್ದು. ಸಮುದಾಯದಲ್ಲಿರುವ ಜನಸಾಮಾನ್ಯರ ಸಂಪೂರ್ಣ ಬೆಂಬಲ ಅವಶ್ಯಕ. ಮಾನಸಿಕ ರೋಗಿಗಳು ಕೂಡ ನಮ್ಮಂತೆಯೇ ಮನುಷ್ಯರು. ಅವರನ್ನು ಮುಖ್ಯ ವಾಹಿನಿಗೆ ತರಬೇಕು. ಜಿಲ್ಲಾ ಕುಷ್ಟರೋಗ ನಿವಾರಣ ಹಾಗೂ ಮಾನಸಿಕ ಆರೋಗ್ಯ ಅಧಿಕಾರಿ ಡಾ ಮುರುಳಿಧರ್ ಮಾತನಾಡಿ ಈ ರೋಗವು ದೀರ್ಘಕಾಲದ, ತೀವ್ರವಾದ ಮಾನಸಿಕ ಅಸ್ವಸ್ಥತೆಯಾಗಿದ್ದು ಇದು ವ್ಯಕ್ತಿಯು ಯೋಚಿಸುವ, ವರ್ತಿಸುವ, ಭಾವನೆಗಳನ್ನು ವ್ಯಕ್ತಪಡಿಸುವ, ವಾಸ್ತವವನ್ನು ಗ್ರಹಿಸುವ ಮತ್ತು ಇತರರೊಂದಿಗೆ ಸಂಬಂಧ ಹೊಂದುವ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಸ್ಕಿಜೋಫ್ರೇನಿಯಾವು ಇತರ ಪ್ರಮುಖ ಮಾನಸಿಕ ಕಾಯಿಲೆಗಳಂತೆ ಸಾಮಾನ್ಯವಲ್ಲದಿದ್ದರೂ ಸ್ಕಿಜೋಫ್ರೇನಿಯಾ ಹೊಂದಿರುವ ಜನರು ಸಾಮಾನ್ಯವಾಗಿ ಸಮಾಜದ ಕೆಲಸದಲ್ಲಿ, ಶಾಲೆಯಲ್ಲಿ ಮತ್ತು ಸಂಬಂಧಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಸಮಸ್ಯೆಗಳನ್ನು ಹೊಂದಿರುತ್ತಾರೆ.ಅವರು ಭಯಭೀತರಾಗಬಹುದು ಆದುದರಿಂದ ವಿದ್ಯಾರ್ಥಿಗಳೇ ಮಾನಸಿಕವಾಗಿ ಸದೃಢರಾಗಿ ಕ್ರಿಯಾಶೀಲರಾಗಿ ಎಂದು ಹೇಳಿದರು.ಸ್ಕಿಜೋಫ್ರೇನಿಯಾ ಹೊಂದಿರುವ ಜನರು ಸಾಮಾನ್ಯವಾಗಿ ಸರಿ ತಪ್ಪು ಯೋಚನೆ ಮಾಡುವುದಕ್ಕೆ ಬರುವುದಿಲ್ಲ. ಆದುದರಿಂದ ಮನೋ ರೋಗಿಗಳು ಯಾವುದಾದರೂ ಮನೆಯಲ್ಲಿ ಕಂಡುಬಂದರೆ ಅವರಿಗೆ ಸರಿಯಾದ ವೇಳೆಗೆ ಮಾತ್ರೆಯನ್ನು ನೀಡಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ಡಿಪ್ಲೋಮೋ ಕಾಲೇಜಿನ ಪ್ರಾಂಶುಪಾಲಕ ಶ್ರೀನಿವಾಸ್ ಮಾತನಾಡಿ ವಿದ್ಯಾರ್ಥಿಗಳೇ ಈ ಕಾಯಿಲೆಗಳಿಂದ ಹೊರಬರಬೇಕಾದರೆ ಧ್ಯಾನ ಹಾಗೂ ಯೋಗವು ಮುಖ್ಯವಾಗಿದೆ ಈ ಕಾರ್ಯಕ್ರಮವನ್ನು ಕೇಳಿದ ನೀವೆಲ್ಲರೂ ಮಾನಸಿಕ ರೋಗಿಗಳು ಕಂಡುಬಂದರೆ ಅವರಿಗೆ ಚಿಕಿತ್ಸೆಯನ್ನು ನೀಡಿಸಿ ಎಂದು ಹೇಳಿದರು.ಈ ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳು ಡಾ ಚಂದ್ರ ಮೋಹನ್. ಡಾ ಸಂದೀಪ್. ವಿಜಯಕುಮಾರ್ ಮನೋಶಾಸ್ತ್ರಜ್ಞರು ಸಂತೋಷ್ ಮನೋ ವೈದ್ಯಕೀಯ ಸಮಾಜ ಕಾರ್ಯಕರ್ತರು. ಪದ್ಮ ಸಮುದಾಯ ಶೃಶ್ರುಷಕಾಧಿಕಾರಿ. ಜಿಲ್ಲಾ ಮೇಲ್ವಿಚಾರಣೆ ಅಧಿಕಾರಿಯದ ಎಂ. ವಿ. ಹೊರಕೇರಿ. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಯಾದ ಉಮ್ಮಣ್ಣ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಯಾದ ನಾಗರಾಜ್. ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಯಾದ ದಾದಾಪೀರ್. ಉಪನ್ಯಾಸಕ ಜಕಣಾಚಾರಿ ಸೇರಿದಂತೆ ಕಾಲೇಜ್ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.