ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಇರಬೇಕಾಗಿರುವುದು ಅವಶ್ಯ:ಡಾ.ಸರಸ್ವತಿ ವೈದ್ಯನಾಥನ್

ವಿಜಯಪುರ :ನ.25: “ಪ್ರತಿಯೊಬ್ಬರಿಗೂ ಕಾನೂನು ಅರಿವು ಅವಶ್ಯ, ಕಾನೂನು ಇಲ್ಲದ ಸಮಾಜವೇ ಇಲ್ಲ. ತಮ್ಮ ತಮ್ಮ ಹಕ್ಕುಗಳು ಅವರ ಸಂಬಂಧಿತ ಕಾನೂನುಗಳೇನು ಎಂಬುದನ್ನು ತಿಳಿವಿರಬೇಕು. ಬೇರೆ ಬೇರೆ ರಾಜ್ಯ ಮತ್ತು ಪ್ರದೇಶಗಳಲ್ಲಿ ನಿಯಮಗಳು ಬೇರೆಯಾಗಿದ್ದರೂ ಕಾನೂನು ಮಾತ್ರ ಒಂದೇಯಾಗಿರುತ್ತದೆ” ಎಂದು ಬೆಂಗಳೂರಿನ ದಯಾನಂದಸಾಗರ ವಿಶ್ವವಿದ್ಯಾಲಯದ ಕಾನೂನು ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಸರಸ್ವತಿ ವೈದ್ಯನಾಥನ್ ಹೇಳಿದರು.
ನಗರದ ಎ.ಎಸ್.ಪಾಟೀಲ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬೆಂಗಳೂರಿನ ದಯಾನಂದಸಾಗರ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡ ಉತ್ತಮ ಭವಿಷ್ಯಕ್ಕೆ ಕಾನೂನಿನ ಅವಶ್ಯಕತೆ ಎಂಬ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿ ಅವರು “ತಾಂತ್ರಿಕತೆಯಲ್ಲಿ ಕಾನೂನುಗಳ ಬಳಕೆಯಾಗುತ್ತದೆ. ಸಮಾಜದ ಸ್ವಾಸ್ಥ್ಯ ಮತ್ತು ವ್ಯಕ್ತಿಯ ರಕ್ಷಣೆಯಲ್ಲಿ ಕಾನೂನಿನ ಪಾತ್ರ ಮುಖ್ಯವಾಗಿದೆ” ಎಂದರು.
ದಯಾನಂದ ವಿಶ್ವವಿದ್ಯಾಲಯದ ಸಂಯೋಜಕಿ ಪಲ್ಲವಿ ಮಾತನಾಡಿ “ಯಾವದೇ ವ್ಯತ್ತಿಯನ್ನು ಆಯ್ದಕೊಂಡರೂ ಅದನ್ನು ಶ್ರದ್ಧೆಯಿಂದ ಮಾಡಬೇಕು. ಕಲಿಕೆಯು ನಿರಂತರವಾಗಿರಲಿ, ನಿಮ್ಮ ಭವಿಷ್ಯವನ್ನು ನೀವೆ ನಿರ್ಧರಿಸಬೇಕು. ಇನ್ನೊಬ್ಬರಿಗೆ ಮಾದರಿಯಾಗಬೇಕು” ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರೊ.ಎಸ್.ಜಿ.ರೊಡಗಿ ಮಾತನಾಡಿ “ಇಂದಿನ ದಿನಮಾನಗಳಲ್ಲಿ ಕಾನೂನಿನ ಜ್ಞಾನ ಅತ್ಯವಶ್ಯ ಕಾರ್ಮಿಕ ಕಾನೂನು, ಗ್ರಾಹಕ ಕಾನೂನು, ಅಪರಾಧ ಕಾನೂನು ಹೀಗೆ ಬೇರೆ ಬೇರೆ ಕಾನೂನುಗಳ ಬಗ್ಗೆ ತಿಳುವಳಿಕೆ ಇರಬೇಕು” ಎಂದರು.
ಎಂ.ಎಚ್.ಬಗಲಿ, ಪ್ರೊ.ಪಿ.ಎಸ್.ತೋಳನೂರ, ಪ್ರೊ.ಚಿದಾನಂದ ಬ್ಯಾಹಟ್ಟಿ, ಪ್ರೊ.ಎ.ಎಂ.ತುಪ್ಪದ, ಪ್ರೊ.ಎಸ್.ಎಸ್.ತುಂಗಳ, ಪ್ರೊ.ಕೆ.ಆಯ್.ಹಿರೇಮೇಠ, ಡಾ.ಮಹಾನಂದ ಪಾಟೀಲ, ಡಾ.ಭಕ್ತಿ ಮಹಿಂದ್ರಕರ, ಅಧೀಕ್ಷಕ ಎಸ್.ಪಿ.ಕನ್ನೂರ, ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕುಮಾರಿ ರಶ್ಮಿ ಕುಮಟಗಿ ಪ್ರಾರ್ಥಿಸಿದರು, ಆಯ್.ಕ್ಯೂ.ಎ.ಸಿ ಸಂಯೋಜಕಿ ಡಾ.ಭಾರತಿ ಮಠ ಸ್ವಾಗತಿಸಿದರು. ಪ್ರೊ.ಐಶ್ವರ್ಯ ಮಿರಜಕರ ನಿರೂಪಿಸಿದರು. ಪ್ರೊ.ವಿಜಯಕುಮಾರ ವಂದಿಸಿದರು.