ಪ್ರತಿಯೊಬ್ಬರಲ್ಲೂ ಕ್ರೀಡಾ ಮನೋಭಾವನೆ ಇದ್ದರೆ ಮಾತ್ರ ಗೆಲುವು ಸಾಧ್ಯ

ಹುಣಸಗಿ :ಮಾ.7: ವಿಜಯನಗರ ಜಿಲ್ಲೆಯಲ್ಲಿ ನಡೆದ ವಿಜಯನಗರ ಕಬ್ಬಡ್ಡಿ ವೈಭವದಲ್ಲಿ ಮೂರು ದಿನಗಳ ಕಾಲ ನಡೆದ ನಡೆದ ಕಬಡ್ಡಿ ವೈಭವದಲ್ಲಿ ಹುಣಸಗಿಯ ಸಹನಾ ಕಬಡ್ಡಿ ಟೀಮ್ ಹುಣಸಗಿ ಪ್ರಥಮ ಸ್ಥಾನ ಪಡೆದಿದೆ. ಈ ಸಂದರ್ಭದಲ್ಲಿ ಮಾತನಾಡಿದ ಸಹನಾ ಗ್ರೂಪ್ ಅಧ್ಯಕ್ಷರಾದ ವಿರೇಶ್ ಬಿ ಚಿಂಚೋಳಿ ನಮ್ಮ ಹುಣಸಗಿ ತಾಲೂಕು ಸೇರಿದಂತೆ ನಮ್ಮೂರಿಗೆ ಬೇರೆ ಜಿಲ್ಲೆಯಲ್ಲಿ ನಡೆದ ಸ್ಪೋಟ್ಸ್ರ್ನಲ್ಲಿ ಜಯಶಾಲಿಯಾಗಿ ಪ್ರಶಸ್ತಿ ತಂದು ಕೀರ್ತಿ ಹೆಚ್ಚಿಸಿದ್ದಾರೆ ಅಂದರು. ಈ ಸಂದರ್ಭದಲ್ಲಿ ಪ್ರಶಸ್ತಿ ವಿಜೇತದಲ್ಲಿ ಪಾಲ್ಗೊಂಡ ಎಲ್ಲರಿಗೂ ಶಾಲು ಹೊದಿಸಿ ಸನ್ಮಾನಿಸಲಾಯಿತು, ಬಸವರಾಜ ಗುತ್ತೇದಾರ, ಅಖ್ತರ, ಭೀಮಣ್ಣ, ಸೇರಿದೆಂತೆ ಸಹನಾ ಗ್ರೂಪ್ ಕೋಚ್ ಮತ್ತು ಸದಸ್ಯರು ಇದ್ದರು.