ಪ್ರತಿಯೊಬ್ಬರಲ್ಲಿ ದೇಶಪ್ರೇಮ ಜಾಗೃತಗೊಳ್ಳಲಿ

ಗದಗ,ಆ15 : ದೇಶ ಪ್ರೇಮಿಗಳ ಹಾಗೂ ಹಿರಿಯರ ಹೋರಾಟ, ತ್ಯಾಗ ಬಲಿದಾನಗಳಿಂದಾಗಿ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ. ಇದರ ಮಹತ್ವವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು’ ಎಂದು ವಿದ್ಯಾರ್ಥಿನಿಯರ ನಿಲಯದ ಮೇಲ್ವಿಚಾರಕಿ ಬೇಟ್ಟಮ್ಮಾ ಶಂಕರಶೆಟ್ಟಿ ಹೇಳಿದರು.
ಶಹರದ ಹಾತಲಗೇರಿ ರಸ್ತೆಯಲ್ಲಿರುವ ಡಿ. ದೇವರಾಜ ಅರಸ್ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಯರ ಹಾಸ್ಟೆಲ್ ನಲ್ಲಿ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು.
ಪ್ರಸುತ್ತ ದಿನಮಾನಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಚರಿತ್ರೆ ಅರಿತುಕೊಳ್ಳಲು ಇಂದಿನ ಯುವಕ, ಯುವತಿಯರು ಆಸಕ್ತಿ ತೋರಿಸುತ್ತಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಸುಲಭವಾಗಿ ದೊರಕಿಲ್ಲ. ಅನೇಕ ಜನರು ಹೋರಾಟದ ಮೂಲಕ ಪ್ರಾಣ ತ್ಯಾಗ ಮಾಡಿ ಸ್ವಾತಂತ್ರ್ಯ ದೊರಕಿಸಿಕೊಟ್ಟ ಕಾರಣ ನಾವೆಲ್ಲ ಇಂದು ಸುಖವಾಗಿರಲು ಸಾಧ್ಯವಾಗಿದೆ. ಪ್ರತಿಯೊಬ್ಬರೂ ತಮ್ಮ ಕುಟುಂಬದ ಜತೆಗೆ ದೇಶಕ್ಕಾಗಿ ಒಂದಿಷ್ಟು ಸಮಯ ನೀಡಿದರೆ ಭಾರತ ಇನ್ನಷ್ಟು ಉಜ್ವಲವಾಗಿ ಬೆಳಗಲಿದೆ. ಪ್ರತಿಯೊಬ್ಬರಲ್ಲಿ ದೇಶ ಪ್ರೇಮ ಜಾಗೃತಗೊಳ್ಳಬೇಕು’ ಎಂದರು.
ಕಾನೂನು ವಿದ್ಯಾರ್ಥಿನಿ ಶೀರಿನಬಾನು ಅಣ್ಣಿಗೇರಿ ಮಾತನಾಡಿ, ಗಾಂಧೀಜಿಯವರು ಸೇರಿದಂತೆ ಅನೇಕ ಮಹನಿಯರು ಸ್ವಾತಂತ್ರ್ಯಕ್ಕಾಗಿ ಹೋರಾಡಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ. ಇಂತಹ ಸಂದರ್ಭದಲ್ಲಿ ಹೋರಾಟಗಾರರನ್ನು ನೆನೆಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಹಾಸ್ಟೆಲ್ ಸಿಬ್ಬಂದಿಗಳಾದ ರಾಧಾ,ಶೃತಿ, ಸಲ್ಮಾ, ಯಶೋಧಾ, ಸರೋಜಾ, ವಿದ್ಯಾರ್ಥಿನಿಯರಾದ ವಾಣಿ , ಪೂಜಾ, ಅಕ್ಷತಾ, ಸಪ್ನಾ ಸೇರಿದಂತೆ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.