
ಕಲಬುರಗಿ,ಮಾ.15: ಜಾನಪದ ಸಂಸ್ಕøತಿಯು ಅನುಭಾವದಿಂದ ಕೂಡಿದ್ದಾಗಿದ್ದು, ಅದು ದೇಶದ ಜನರ ಜೀವನ ಪದ್ಧತಿ, ಸಂಸ್ಕಾರ, ಆಚಾರ-ವಿಚಾರ, ಬದುಕುವ ಕಲೆ ಸೇರಿದಂತೆ ಅನೇಕ ಅಂಶಗಳನ್ನು ಒಳಗೊಂಡಿದೆ. ಮಗು ಜನಿಸಿದ ನಂತರ ತೊಟ್ಟಿಲು ಆಚರಣೆಯೊಂದಿಗೆ ಆರಂಭವಾಗಿ ಅನೇಕ ಪದ್ಧತಿಗಳು, ಆಚರಣೆಗಳನ್ನು ಮಾಡಲಾಗುತ್ತದೆ. ಪಾಶ್ಚಿಮಾತ್ಯ ಸಂಸ್ಕøತಿಗೆ ಮಾರುಹೋಗದೆ, ನಮ್ಮ ದೇಶದ ಮೂಲ ಸಂಸ್ಕøತಿಯಾದ ಜಾನಪದವನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕಾಗಿದೆ ಎಂದು ಕನ್ನಡ ಜಾನಪದ ಪರಿಷತ್ ಜಿಲ್ಲಾ ಕಾರ್ಯದರ್ಶಿ ಎಚ್.ಬಿ.ಪಾಟೀಲ ಹೇಳಿದರು.
ಬಸವೇಶ್ವರ ಸಮಾಜ ಸೇವಾ ಬಳಗ ಮತ್ತು ‘ಕನ್ನಡ ಜಾನಪದ ಪರಿಷತ್’ನ ಜಿಲ್ಲಾ ಘಟಕದ ವತಿಯಿಂದ ಮಂಗಳವಾರ ಏರ್ಪಡಿಲಾಗಿದ್ದ ‘ಜೋಗುಳ ಝೇಂಕಾರ ಕಾರ್ಯಕ್ರಮ’ದಲ್ಲಿ ಅವರು ಮಾತನಾಡುತ್ತಿದ್ದರು.
ಕ.ರಾ.ಪ್ರಾ.ಶಾ.ಶಿ.ಸಂಘದ ಜಿಲ್ಲಾ ಉಪಾಧ್ಯಕ್ಷ ನೀಲಕಂಠಯ್ಯ ಹಿರೇಮಠ ಮಾತನಾಡಿ, ವಿದೇಶಿ ಸಂಸ್ಕøತಿ ನಮಗೆ ಮಾರಕವಾಗಿದೆ. ಜಾನಪದ ಸಂಸ್ಕøತಿಯಲ್ಲಿ ಒಳ್ಳೆಯ ಸಂಬಂಧ, ಗೌರವÀಗಳಿಗೆ ಆದ್ಯತೆ ನೀಡಲಾಗುತ್ತದೆ. ಗ್ರಾಮೀಣ ಸೊಗಡನ್ನು ಬಿಂಬಿಸುವ ಹಬ್ಬಗಳು, ಆಚರಣೆಗಳು ನಿರಂತರವಾಗಿ ಜರುಗಬೇಕು. ಈ ನಿಟ್ಟಿನಲ್ಲಿ ಕನ್ನಡ ಜಾನಪದ ಪರಿಷತ್ ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜಾನಪದ ಸಂಸ್ಕøತಿಯನ್ನು ಉಳಿಸಿ, ಬೆಳೆಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ನರಸಪ್ಪ ಬಿರಾದಾರ ದೇಗಾಂವ, ಶಿವಾನಂದ ಆರ್.ಹಿರೇಮಠ, ಶಿವಯೋಗಪ್ಪ ಬಿರಾದಾರ, ಅಣ್ಣಾರಾಯ ಎಚ್.ಮಂಗಾಣೆ, ಗುರುಲಿಂಗಯ್ಯ ಹಿರೇಮಠ, ಶೋಭಾ ಎಸ್.ಹಿರೇಮಠ, ಶಂಕ್ರೆಮ್ಮ ಎನ್.ಹಿರೇಮಠ, ಕಾವೇರಿ, ಶ್ರೀದೇವಿ, ಶ್ರೀಕಾಂತ, ಸುಪ್ರೀಯಾ, ನಯನಾ, ಶಿಲ್ಪಾರಾಣಿ, ಶ್ರೇಷ್ಠಾ, ಸಿಗುರೇಶ್, ಶ್ರಾವ್ಯ ಎಸ್.ಹಂಚಿನಾಳ ಸೇರಿದಂತೆ ಮತ್ತಿತರರಿದ್ದರು.