ಪ್ರತಿಯೊಬ್ಬರಲ್ಲಿ ಕನ್ನಡತನ ಪ್ರವೃತ್ತಿ ಮೈಗೂಡಲಿ

ಕಲಬುರಗಿ :ನ.1: ಕನ್ನಡ ಭಾಷೆ, ಸಾಹಿತ್ಯಕ್ಕೆ ಸಾವಿರಾರು ವರ್ಷಗಳ ಭವ್ಯವಾದ ಇತಿಹಾಸವಿದೆ. ಕೇವಲ ಸರ್ಕಾರದ ಆದೇಶಗಳಿಂದ ಮಾತ್ರ ಕನ್ನಡ ಉಳದು, ಬೆಳೆಯುವುದಿಲ್ಲ. ಪ್ರತಿಯೊಬ್ಬರು ಕನ್ನಡದಲ್ಲಿ ಮಾತನಾಡುವ, ಬರೆಯುವ, ಓದುವ, ವ್ಯವಹರಿಸುವಂತಹ ಕನ್ನಡತನ ಪ್ರವೃತ್ತಿ ಮೈಗೂಡಿಸಿಕೊಂಡು, ಕನ್ನಡ ಭಾಷೆ, ಸಾಹಿತ್ಯ, ನೆಲ, ಜಲ, ಸಂಸ್ಕøತಿ, ಭವ್ಯ ಪರಂಪರೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕಾದದ್ದು ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯವಾಗಿದೆಯೆಂದು ಪ್ರಾಂಶುಪಾಲ ಮೊಹ್ಮದ್ ಅಲ್ಲಾವುದ್ದೀನ ಸಾಗರ ಹೇಳಿದರು. ಡಾ.ಮಂಜುಳಾ ಪಾಟೀಲ ಹೇಳಿದರು.

ಅವರು ಜೇವರ್ಗಿಯ ಬಸವೇಶ್ವರ ಚೌಕ್ ಹತ್ತಿರವಿರುವ ‘ಸರ್ಕಾರಿ ಪಿಯು ಕಾಲೇಜು’, ‘ಸರ್ಕಾರಿ ಪ್ರೌಢಶಾಲೆ’, ‘ಸರ್ಕಾರಿ ಉರ್ದು ಪೌಢಶಾಲೆ’, ‘ಮೌಲಾನಾ ಆಜಾದ ಪ್ರೌಢಶಾಲೆ’ ಇವುಗಳ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ’65ನೇ ಕನ್ನಡ ರಾಜ್ಯೋತ್ಸವ’ದ ನಿಮಿತ್ಯ ಧ್ವಜಾರೋಹಣ ನೆರವೇರಿಸಿ ನಂತರ ಮಾತನಾಡುತ್ತಿದ್ದರು.

   ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ಚಂದ್ರಪ್ರಭಾ ಕಮಲಾಪುರಕರ್, ಶರಣಮ್ಮ ಭಾವಿಕಟ್ಟಿ, ರವೀಂದ್ರಕುಮಾರ ಬಟಗೇರಿ, ಎಚ್.ಬಿ.ಪಾಟೀಲ, ಪ್ರಕಾಶ ಎ.ಪಾಟೀಲ, ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಮಂಜುಳಾ ಪಾಟೀಲ, ಜಯಶ್ರೀ ಪಾಟೀಲ, ಸಹ ಶಿಕ್ಷಕರಾದ ಸೋಮಶೇಖರ ಪಾಟೀಲ, ಅನೀಲಕುಮಾರ ಸರಾಫ್, ಮಹೇಶ ಚಿಂಚೋಳಿ, ಶಾಂತಮ್ಮ, ದಯಾನಂದ ಹಿರೇಮಠ, ಭೀಮಣ್ಣ, ನೀಲಮ್ಮ, ರೇಣುಕಾ, ರಮೇಶ ಖಾನಾಪುರೆ, ಸುಪ್ರತಿ, ತನುಜಾರಾಣಿ ಸೇರಿದಂತೆ ಕಾಲೇಜಿ ಹಾಗೂ ಪ್ರೌಢಶಾಲೆಗಳ ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.