ಪ್ರತಿಯೊಂದು ಮನೆ ಮೇಲೆ ಹಾರಲಿ ತ್ರಿವರ್ಣ ಧ್ವಜ

ಹರಿಹರ ಆ 4; ದೇಶಕ್ಕೆ ಸ್ವಾತಂತ್ರ್ಯ ಬಂದು75 ವರ್ಷ ತುಂಬಿದ್ದು, ಅಮೃತ ಮಹೋತ್ಸವವನ್ನು ದೊಡ್ಡದಾಗಿ ಸಂಭ್ರಮಿಸಲು  ಪ್ರತೀ ಮನೆ ಮೇಲೆ ತ್ರಿವರ್ಣ ಧ್ವಜ ಹಾರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ  ನಿರ್ಧಾರ ಮಾಡಲಾಗಿದ್ದು ಹಿನ್ನೆಲೆಯಲ್ಲಿ ನಗರ ಸಭಾ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ನಮ್ಮ ಅಧಿಕಾರಿಗಳ ತಂಡ ಮನೆಮನೆಗೆ ಭೇಟಿನೀಡಿ ರಾಷ್ಟ್ರ ಧ್ವಜವನ್ನು ಹಾರಿಸಲು ಚಾಲನೆ ನೀಡಲಾಯಿತು ಎಂದು ನಗರಸಭೆ ಪೌರಾಯುಕ್ತ ಬಸರಾಜ್ ಐಗೂರ್ ಹೇಳಿದರುಕೇಂದ್ರ ಸರ್ಕಾರ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ‘ಹರ್ ಘರ್ ತಿರಂಗಾ’ ಘೋಷ ವಾಕ್ಯದೊಂದಿಗೆ ಈ ಕಾರ್ಯಕ್ರಮ ನಡೆಸುತ್ತಿದೆ ರಾಷ್ಟ್ರದೆಲ್ಲೆಡೆಯಂತೆ, ರಾಜ್ಯದಲ್ಲಿಯೂ ಆಗಸ್ಟ್ 13 ರಿಂದ 15 ರವರೆಗೆ ಹರ್ ಘರ್ ತಿರಂಗಾ ಅಂದರೆ ಮನೆ ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಅಭಿಯಾನವನ್ನು ಆಯೋಜಿಸಲಾಗಿದೆ. ಭಾರತ ಸ್ವಾತ್ರಂತ್ಯ ಅಮೃತ ಮಹೋತ್ಸವದ ಸಂಸ್ಮರಣೆಯಲ್ಲಿ ಈ ಅವಧಿಯಲ್ಲಿ ಹಗಲು ರಾತ್ರಿ ಎನ್ನದೆ ಮೂರು ದಿನಗಳ ಕಾಲ ಇಡೀ ರಾಷ್ಟ್ರದಲ್ಲಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಲು ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಸೂಚಿಸಿದೆ. ಅದರಂತೆ ಈ ಅಭಿಯಾನಕ್ಕೆ ಕರ್ನಾಟದಲ್ಲೂ ಪೂರ್ಣ ಪ್ರಮಾಣದ ಸ್ಪಂದನೆ ದೊರೆಯಬೇಕೆಂಬುದು ರಾಜ್ಯ ಸರ್ಕಾರದ ಸದಾಶಯವಾಗಿದೆ. ಸರ್ಕಾರದ ಆದೇಶದಂತೆ ನಗರಸಭಾ ಅಧ್ಯಕ್ಷರು ಉಪಾಧ್ಯಕ್ಷರ  31 ಸದಸ್ಯರುಗಳ   ವಿಶ್ವಾಸ ತೆಗೆದುಕೊಂಡು ಪ್ರತಿ ಮನೆ ಮನೆಗಳಿಗೆ ತೆರಳಿ ತ್ರಿವರ್ಣ ರಾಷ್ಟ್ರಧ್ವಜವನ್ನು  ಆರಿಸಲು ಮನವಿಯನ್ನೂ ಮಾಡಲಾಗಿದೆ ಎಂದರು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಆಗಸ್ಟ್ 13 ರಿಂದ 15 ರವರೆಗೆ ದೇಶದ ‍ಪ್ರತಿಯೊಬ್ಬರೂ ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸುವ ಮೂಲಕ ದೇಶ ಭಕ್ತಿಯನ್ನು ಮೆರೆಯೋಣ ಎಂದರುನಗರಸಭೆ ಅಧ್ಯಕ್ಷೆ ಶಾಹಿನಾ ಬಾನು ದಾದಾಪೀರ್ ಭಾನುವಳ್ಳಿ. ಉಪಾಧ್ಯಕ್ಷ ವಾಮನಮೂರ್ತಿ. ನಗರಸಭಾ ಸದಸ್ಯ ಅಶ್ವಿನಿ ಕೃಷ್ಣ. ಕಂದಾಯ ಅಧಿಕಾರಿ ಮಂಜುನಾಥ್. ಮಾಲತೇಶ್ ಭಂಡಾರಿ. ನಗರಸಭಾ ಅಧಿಕಾರಿ ಸಿಬ್ಬಂದಿ ವರ್ಗ ಸ್ಥಳೀಯ ನಿವಾಸಿಗಳು ಸಿದ್ದರು 

Attachments area