ಪ್ರತಿಯೊಂದು ಮನೆಗೆ ಒಂದು ಉದ್ಯೋಗ : ಡಾ.ಎಸ್. ಎಸ್.ಪಾಟೀಲ್

ರಾಯಚೂರು,ಏ.೨೬-
ಮಲಿಯಾಬಾದ್ ಗ್ರಾಮದಲ್ಲಿ ಬಿ.ಜೆ.ಪಿ ಅಭ್ಯರ್ಥಿ ಶಿವರಾಜ ಪಾಟೀಲರಿಂದ ನಗರದಲ್ಲಿ ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ,
ಜಿಲ್ಲೆಯಲ್ಲಿ ಟೆಕ್ಸ್ ಟೈಲ್ ಪಾರ್ಕ್ ನಿರ್ಮಾಣ ಮಾಡಲಾಗುತ್ತಿದ್ದು, ಗ್ರಾಮದ ಪ್ರತಿಯೊಂದು ಮನೆಗೆ ಒಂದು ಉದ್ಯೋಗ ಸಿಗುತ್ತದೆ ಎಂದು ಬಿ.ಜೆ.ಪಿ ಅಭ್ಯರ್ಥಿ ಡಾ.ಎಸ್. ಎಸ್. ಪಾಟೀಲ್ ಅವರು ಹೇಳಿದರು.
ಅವರಿಂದು ರಾಯಚೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೊಸ ಮಲಿಯಾಬಾದ್ ಗ್ರಾಮದಲ್ಲಿ ಮತಯಾಚನೆ ಕಾರ್ಯ ಕೈಗೊಂಡು ಮಾತನಾಡಿದರು.
೧೪ಹಳ್ಳಿಗಳಲ್ಲಿ ಕೆರೆ ತುಂಬುವ ಯೋಜನೆಯಡಿ ಕೆರಗಳನ್ನು ತುಂಬಿಸಲಾಗುವುದು ನಂತರ ಗ್ರಾಮದ ಯಾವುದೇ ಬೋರ್ ವೆಲ್ ಗಳು ಬತ್ತಿಹೋಗದಂತೆ ಅಭಿವೃದ್ಧಿ ಪಡಿಸಲಾಗುವುದು ಎಂದರು.
ಈ ಹಿಂದೆ ಗ್ರಾಮದಲ್ಲಿ ಬೋರ್ ವೆಲ್ ಗಳು, ಸಿಸಿ ರಸ್ತೆ, ಮುಖ್ಯ ರಸ್ತೆಗಳು, ಹಾಗೂ ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯಗಳನ್ನು ಮಾಡಲಾಗಿದ್ದು, ೭೦ ವರ್ಷಗಳಲ್ಲಿ ಆಗದ ಅಭಿವೃದ್ಧಿಯನ್ನು ಕೇವಲ ೧೦ ವರ್ಷಗಳಲ್ಲಿ ಜನರಿಗೆ ನೀಡಲಾಗಿದೆ ಎಂದರು.
ಈ ಸಂಸರ್ಭದಲ್ಲಿ ಆರ್.ಡಿ.ಎ ಅಧ್ಯಕ್ಷ ತಿಮ್ಮಪ್ಪ ನಾಡಗೌಡ, ಬಿ.ಜೆ.ಪಿ ಮುಖಂಡರಾದ ಪರಶುರಾಮ್ ಗೌಡ,ಶ್ರೀರಾಮ ನಾಯಕ, ಭೀಮಯ್ಯ, ಬುಗುಲಯ್ಯ, ನರಸಿಂಹಲು, ಮಲ್ಲಿಕಾರ್ಜುನ,ಮಹಾದೇವ, ಮಾರೆಪ್ಪ ನಾಯಕ ಸೇರಿದಂತೆ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.