ಪ್ರತಿಯೊಂದು ಮಗುವಿಗೂ ಕುಟುಂಬ ವಾತಾವರಣದಲ್ಲಿ ಬೆಳೆಯುವ ಹಕ್ಕಿದೆ: ಡಾ. ಸಂತೋಷ ಪಾಟೀಲ್

ಕಲಬುರಗಿ:ಸೆ.23: ತಾಲ್ಲೂಕಿನ ಫರಹತಾಬಾದ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡಾನ್ ಬೊಸ್ಕೋ ಪ್ಯಾರ್ ಸಂಸ್ಥೆ, ಪೋಷಕತ್ವ ಯೋಜನೆ ಹಾಗೂ ಪ್ರಾಥಮಿಕ ಆರೋಗ್ಯಕೇಂದ್ರ ಇವರುಗಳ ಸಂಯುಕ್ತ ಆಶ್ರಯದಲ್ಲಿ ಆಶಾ ಕಾರ್ಯಕರ್ತೆಯರಿಗೆ ದತ್ತು ಕಾಯ್ದೆ ಮತ್ತು ಪೋಷಕತ್ವ ಯೋಜನೆಯ ಕುರಿತು ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯತು. ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ಶ್ರೀ ಸಂತೋಷ ಪಾಟೀಲ್ ವೈಧ್ಯಾಧಿಕಾರಿಗಳು ಪ್ರಾಥಮಿಕ ಆರೊಗ್ಯ ಕೇಂದ್ರ ಫರಹತಾಬಾದ ಇವರು ವಹಿಸಿಕೊಂಡಿದರು, ಕಾರ್ಯಕ್ರಮದ ಮುಖ್ಯತಿಥಿಗಳಾಗಿ ಶ್ರೀಮತಿ ಶರಣಮ್ಮ ಪಾಟೀಲ್ ತಾಲ್ಲೂಕ ಆರೋಗ್ಯಾ ಶಿಕ್ಷಣಾಧೀಕಾರಿಗಳು,ಕಲಬುರತಗಿ, ಶ್ರೀಮತಿ ಅನುಸುಯಾ ಗೊಳಾ, ತಾಲ್ಲೂಕ ಆರೋಗ್ಯ ಹಿರಿಯ ಪ್ರಾಥಮಿಕ ಸುರಕ್ಷಣಾಧಿಕಾರಿಗಳು, ಶ್ರೀಮತಿ ಕವಿತಾರಾಣಿ ಎಮ್.ಡಿ. ಆಶಾಕಾರ್ಯಕರ್ತೆಯರ ತಾಲೂಕ ಮಟ್ಟದ ಮೇಲ್ವಿಚಾರಕರು, ಕಲಬುರಗಿ, ಶ್ರೀಮತಿ ಗಂಗುಬಾಯಿ ಬಿ.ಎಹ್.ಇ.ಓ.ಫರಹತಾಬಾದ, ಹಾಗೂ ಶ್ರೀಮತಿ ಪ್ರೇಮಲತಾ ಪ್ರಾಥಮಿಕ ಆರೋಗ್ಯ ಕೇಂದ್ರದ ಸುರಕ್ಷಣಾಧಿಕಾರಿಗಳು, ಫರಹತಾಬಾದ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶ್ರೀ ರಾಜಕುಮಾರ ದೇವರಮನಿ ಜಿಲ್ಲಾ ಸಂಯೋಜಕರು ಇವರು ಮಾತನಾಡಿ ದತ್ತು ಕಾಯ್ದೆ ಹಾಗೂ ಪೋಷಕತ್ವ ಯೋಜನೆ ಕುರಿತು ಮಾಹಿತಿಯನ್ನು ನೀಡಿದರು. ಪಾಲಕರ/ಪೋಷಕರು ಮಕ್ಕಳನ್ನು ದತ್ತು ಪಡೆಯಲು ಬಯಸುವವರು ಆನ್‍ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಅಥವಾ ದತ್ತು ಕೇಂದ್ರಕ್ಕೆ ಬೇಟಿ ನೀಡುವ ಮೂಲಕ ಅರ್ಜಿಸಲ್ಲಿಸಬಹುದಾಗಿದೆ, ಪೋಷಕತ್ವ ಎಂದರೆ ಕಾನೂನಿನ ಪ್ರಕಾರ ಅನಾಥರು ಎಂದು ಪರಿಗಣಿಸಿದ ಮಕ್ಕಳು ಹಾಗೂ ಪರಿವಾರದ ಆರೈಕೆಯಿಂದ ವಂಚಿತರಾದ ಮಕ್ಕಳಿಗೆ ತಾತ್ಕಾಲಿಕ ಪರಿವಾರದ ಮೂಲಕ ಸಿಗುವ ಕಾಳಜಿಯನ್ನು ಪೋಷಕತ್ವ ಎಂದು ಅರ್ಥೈಸಿಕೊಳ್ಳಬಹುದು. ಈ ಪರ್ಯಯ ವ್ಯವಸ್ಥೆಯು ಮಕ್ಕಳ ಕಲ್ಯಾಣ ಸಮಿತಿಯಿಂದ ಆಯ್ಕೆ ಮಾಡಿದ, ಅರ್ಹತೆ ಹೊಂದಿರುವ, ಅಂಗೀಕಾರ ಪಡೆದಿರುವ ಹಾಗೂ ಮಕ್ಕಳ ರಕ್ಷಣೆಯನ್ನು ಮೇಲ್ವಚರಣೆಗೊಳಪಡುವ ವ್ವವಸ್ಥೆಯಾಗಿದೆ. ಮಕ್ಕಳ ಕಲ್ಯಾಣ ಸಮಿತಿಯವತಿಯಿಂದ ದತ್ತು ಮುಕ್ತ ಆದೇಶ ಪಡೆದ 6 ರಿಂದ 8 ವರ್ಷದೊಳಗಿನ ದತ್ತು ಪಡೆಂಯುವ ಮಕ್ಕಳಿಗೆ 2 ವರ್ಷಗಳ ವರ್ಷಗಳ ಅವಧಿಯೊಳಗೆ ಒಂದು ಕುಟುಂಬವು ದತ್ತು ಪಡೆಯದೇ ಇದ್ದಲಿ ಅಂತಹ ಮಕ್ಕಳು ಪೋಷಕತ್ವ ಯೋಜನೆಯಡಿಯಲ್ಲಿ ನೀಡಲು ಅರ್ಹತೆಯನ್ನು ಹೊಂದಿರುತ್ತಾರೆ, ಪೋಷಕತ್ವದ ಉದ್ದೇಶವು ಸರಿಯಾದ ಪಾಲನೆ ಮತ್ತು ಪೋಷಣೆಯನ್ನು ಒಂದು ಪರಿವಾರದ ವ್ಯವಸ್ಥೆಯಲ್ಲಿ ಕಲ್ಪಿಸುವುದು. ಇದ್ದರಿಂದ ಮಕ್ಕಳು ಮಾನಸಿಕ ಹಾಗೂ ದೈಹಿಕವಾಗಿ ಅಭಿವೃಧ್ದಿಯಾಗಲು ಸಾಧ್ಯವಾಗುತ್ತದೆ. ಪೋಷಕತ್ವ ಯೋಜನೆಯಡಿ ಕುಟುಂಬಕ್ಕೆ ನೀಡಲ್ಪಟ್ಟ ಮಕ್ಕಳು ಕನಿಷ್ಟ 5 ವರ್ಷಗಳಿದ್ದಲ್ಲಿ ಅಂತಹ ಮಕ್ಕಳನ್ನು ದತ್ತು ಕೋರಿ ಪೋಷಕತ್ವ ಕುಟುಂಬಗಳು ಅರ್ಜಿಸಲ್ಲಿಸಬಹುದಾಗಿದೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಪ್ರತಿ ಜಿಲ್ಲೆಯಲ್ಲಿ ಪೋಷಕತ್ವ ಯೋಜನೆಯನ್ನು ಅನುಷ್ಟಾನಗೊಳಿಸುವ ನೋಡಲ್ ಪ್ರಾಧಿಕಾರವಾಗಿ ನಿರ್ವಹಿಸುತ್ತಿದೆ ಆದ್ದರಿಂದ ಇನ್ನೂ ಹೆಚ್ಚಿನ ಮಾಹಿತಿಗಾಗಿ ಪೋಷಕರು ಜಿಲ್ಲಾ ಮಕ್ಕಳ ರಕ್ಷಣ ಘಟಕ ಕಲಬುರಗಿಗೆ ಬೇಟಿ ನೀಡಬಹುದು ಎಂದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಶ್ರೀ ಸಂತೋಷ ಪಾಟೀಲ್ ವೈಧ್ಯಾಧಿಕಾರಿಗಳು ಅವರು ಎಲ್ಲಾ ಮಕ್ಕಳಿಗೂ ಪಾಲಕರ/ಪೋಷಕರ ಲಾಲನೆ ಪಾಲನೆಯಲ್ಲಿಬೆಳೆಯುವ, ರಕ್ಷಣೆ ಪಡೆಯುವ ಹಕ್ಕಿದೆ, ಕುಟುಂಬದಿಂದ ವಂಚಿತರಾದ ಮಕ್ಕಳು ಪರ್ಯಯಾ ಕುಟುಂಬ ವವ್ಯಸ್ಥೆಯ ಅಥವಾ ಪೋಷಕರನ್ನು ಪಡೆಯುವ ಹಕ್ಕಿದೆ, ಸೂಕ್ತ ಜೀವನಮಟ್ಟ ಪಡೆಯುವ ಹಕ್ಕಿದೆ, ಆದ್ದರಿಂದ ಎಲ್ಲಾ ಆಶಾ ಕಾರ್ಯಕರ್ತೆಯರು ತಮ್ಮ-ತಮ್ಮ ಕಾರ್ಯಕ್ಷೇತ್ರದಲ್ಲಿ ಪಾಲಕರಿಗೆ-ಪೋಷಕರಿಗೆ ಈ ವಿಷಯದ ಕುರಿತು ಅವರಿಗೆ ಮಾಹಿತಿಯನ್ನು ನಿಡುವ ಮೂಲಕ ಪೋಷಕತ್ವ ಯೋಜನೆಯಡಿಯಲ್ಲಿ ಮಕ್ಕಳನ್ನು ಪಡೆದುಕೊಳಲು ಮಕ್ಕಳ ಪಾಲನೆ-ಪೋಷಣೆ ಮಾಡಲು ಮುಂದೆ ಬರುವ ಪೊಷಕರನ್ನು ಗುರುತಿಸುವ ಮೂಲಕ ಮಕ್ಕಳಿಗೆ ಒಂದು ಕುಟುಂದ ವಾತವರಣವನ್ನು ಕಲ್ಪಿಸಿಕೊಡಬಹುದಾಗಿದೆ ಎಂದರು.