ಪ್ರತಿಮೆ ಮೂಲಕ ಮಾದಪ್ಪನ ಹಿರಿಮೆ-ಗರಿಮೆ ಹೆಚ್ಚಳ: ಬೊಮ್ಮಾಯಿ

ಹನೂರು: ಮಾ.19:- 108 ಪ್ರತಿಮೆ ಮೂಲಕ ಮಲೆಮಹದೇಶ್ವರ ಬೆಟ್ಟ ಹಾಗೂ ಮಲೆಮಹದೇಶ್ವರನ ಹಿರಿಮೆ-ಗರಿಮೆ ಹೆಚ್ಚಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
.ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ 108 ಅಡಿಯ ಮಲೆ ಮಹದೇಶ್ವರನ ಪ್ರತಿಮೆ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿ, ಬೆಟ್ಟದಲ್ಲಿನ ಯಾವುದೇ ಮೂಲೆಯಲ್ಲಿ ನಿಂತು ನೂಡಿದರು ಮಹದೇಶ್ವರನ ದರ್ಶನ ಆಗಲಿದೆ ಎಂದರು.
ಪ್ರತಿಮೆಯಲ್ಲಿ ಜೀವಕಳೆ ಇದ್ದು ತಿಂಗಳಲ್ಲಿ ಎರಡನೇ ಬಾರಿ ಮಹದೇಶ್ವರನ ದರ್ಶನ ಸೌಭಾಗ್ಯ ಸಿಕ್ಕಿದ್ದು ಕರ್ನಾಟಕದ ಜನರ ಬದುಕು ಬಂಗಾರವಾಗಲಿ, ಬಡವರ ಬದುಕು ಹಸನಾಗಲಿ ಎಂದು ದೇವರಲ್ಲಿ ಕೇಳಿಕೊಂಡಿದ್ದೇನೆ ಎಂದು ಹೇಳಿದರು.
ಶ್ರೀಕ್ಷೇತ್ರದ ಅಭಿವೃದ್ಧಿಗೆ ಪ್ರಾಧಿಕಾರ ರಚನೆ ಆಗಿದ್ದು ಭಕ್ತರಿಗೆ ಸಮರ್ಪಕ ಸೌಕರ್ಯ ಒದಗಿಸಲಾಗುತ್ತಿದೆ, ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿಗಾಗಿ ಸರ್ಕಾರ ಕ್ರಮ ಕೈಗೊಂಡಿದ್ದು ಕೆಲವೇ ದಿನಗಳಲ್ಲಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡುತ್ತೇನೆ ಎಂದು ಹೇಳಿದರು.
ಉಸ್ತುವಾರಿ ಸಚಿವ ಸೋಮಣ್ಣ, ಸಹಕಾರ ಸಚಿಚ ಸೋಮಶೇಖರ್, ಸುತ್ತೂರು ಶ್ರೀ ಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳಿದ್ದರು.
ಸಿಎಂ ಸಚಿವ ಗುಸುಗುಸು ಜೋರು: ಭಿನ್ನಮತ ಶಮನಗೊಂಡಿರುವ ಹಿನ್ನೆಲೆಯಲ್ಲಿ ಸಚಿವ ಸೋಮಣ್ಣ ಕಾರ್ಯಕ್ರಮದ ಆರಂಭದಿಂದಲೂ ಸಿಎಂ ಬೊಮ್ಮಾಯಿ ಜೊತೆ ನಿರಂತರ ಪಿಸು ಆಡುತ್ತಿದುದು ಕಂಡು ಬಂದಿತು. ವೇದಿಕೆಯಲ್ಲಿ ಕುಳಿತು ಇಬ್ವರು ಗಹನವಾದ ಚರ್ಚೆಯಲ್ಲಿ ಮುಳುಗಿದ್ದರು.
ಸೋಮಣ್ಣ ಕುಟುಂಬದೊಟ್ಟಿಗೆ ಫೆÇೀಟೋ:
ಕಾರ್ಯಕ್ರಮದಲ್ಲಿ ಸಚಿವ ಸೋಮಣ್ಣ ಪತ್ನಿ ಹಾಗೂ ಕುಟುಂಬಸ್ಥರು ಭಾಗಿಯಾಗಿದ್ದರು. ಕಾರ್ಯಕ್ರಮ ಮುಗಿದ ಬಳಿಕ ಸಿಎಂ ಅವರೊಟ್ಟಿಗೆ ಸೋಮಣ್ಣ ಕುಟುಂಬ ಫೆÇೀಟೊ ಕ್ಲಿಕ್ಕಿಸಿಕೊಂಡರು. ಬೊಮ್ಮಾಯಿ ಹಸನ್ಮುಖಿಯಾಗಿ ಫೆÇೀಟೋಗೆ ಫೆÇೀಸ್ ಕೊಟ್ಟರು
ಮಾದಪ್ಪನ ಬೆಳ್ಳಿ ರಥ ಲೋಕಾರ್ಪಣೆ:
ಪ್ರಸಿದ್ಧ ಯಾತ್ರಾಸ್ಥಳವಾದ ಹನೂರು ತಾಲೂಕಿನ ಮಲೆಮಹದೇಶ್ಚರ ಬೆಟ್ಟದ ದೇವಾಲಯದಲ್ಲಿ ಇಂದು ಬೆಳ್ಳಿ ರಥ ಲೋಕಾರ್ಪಣೆ ಮಾಡಲಾಯಿತು.
ಪ್ರಾಧಿಕಾರದ ವತಿಯಿಂದ ನಿರ್ಮಾಣ ಮಾಡಲಾಗಿರುವ ಬೆಳ್ಳಿ ರಥ ಇದಾಗಿದ್ದು ಚಿನ್ನದ ರಥ ಈಗಾಗಲೇ ಶ್ರೀಕ್ಷೇತ್ರದಲ್ಲಿದ್ದು ಮೂರುವರೇ ಕೋಟಿ ರೂ. ವೆಚ್ಚದಲ್ಲಿ 560 ಕೆಜಿ ಬೆಳ್ಳಿಯಿಂದ ಈ ರಥ ನಿರ್ಮಾಣ ಮಾಡಲಾಗಿದೆ.
ಯಡಿಯೂರಪ್ಪ ಗೈರು: ಇನ್ನು, ಮಲೆಮಹದೇಶ್ವರ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮ ಬಿಜೆಪಿ ಒಗ್ಗಟ್ಟಿನ ಶೋ ಆಗಲಿದೆ ಎಂಬುದು ಸುಳ್ಳಾಗಿ ಕೇವಲ ಸಿಎಂ, ಸೋಮಣ್ಣ ಸಮ್ಮಿಲನದ ಕಾರ್ಯಕ್ರಮವಾಯಿತು.
ಬಿಎಸ್ವೈ ಹಾಗೂ ಸೋಮಣ್ಣ ನಡುವೆ ಇದೆ ಎನ್ನಲಾದ ಮುಸುಕಿನ ಗುದ್ದಾಟಕ್ಕೆ ಮಾದಪ್ಪನ ಬೆಟ್ಟದಲ್ಲಿ ಮುಕ್ತಾಯಗೊಳ್ಳುತ್ತದೇ ಎಂದೇ ಭಾವಿಸಲಾಗಿತ್ತು. ಆದರೆ, ಪೂರ್ವ ನಿಗದಿಯಂತೆ ಕಾರ್ಯಕ್ರಮಕ್ಕೆ ಯಡಿಯೂರಪ್ಪ ಗೈರಾಗಿದ್ದಾರೆ.
ಚಿಕ್ಕಮಗಳೂರಿನಲ್ಲಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗಿಯಾಗಬೇಕಿದ್ದರಿಂದ ಇಂದಿನ ಕಾರ್ಯಕ್ರಮಕ್ಕೆ ಬಿಎಸ್ ವೈ ಗೈರಾಗಿದ್ದಾರೆ ಎಂದು ಸಿಎಂ ಬೊಮ್ಮಾಯಿ ಸಮಜಾಯಿಷಿ ಕೊಟ್ಟಿದ್ದಾರೆ.