ಪ್ರತಿಮೆಗೆ ಅವಮಾನ:ಗಡಿಪಾರಿಗೆ ಆಗ್ರಹ

ಕಲಬುರಗಿ,ಜ.25: ರಾಷ್ಟ್ರೀಯ ಮಹಾನ್ ನಾಯಕ,ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಅವಮಾನ ಮಾಡಿದ ವ್ಯಕ್ತಿಗಳನ್ನು ದೇಶದಿಂದ ಗಡಿಪಾರು ಮಾಡುವಂತೆ ಬಿಜೆಪಿ ಯುವ ಮುಖಂಡ ಮಾರುತಿ ಎಂ. ಕಮ್ಮಾರ ಆಗ್ರಹಿಸಿದ್ದಾರೆ.
ಪ್ರತಿಮೆಗೆ ಅವಮಾನ ಮಾಡಿದ ವ್ಯಕ್ತಿಗಳು ಯಾವುದೇ ಪಕ್ಷ ಮತ್ತು ಯಾವುದೇ ಜಾತಿಯ ವ್ಯಕ್ತಿ ಇದ್ದರೂ ಅದು ಖಂಡನೀಯ ಎಂದು ಮಾರುತಿ ಎಂ. ಕಮ್ಮಾರ ಕಟುವಾಗಿ ಟೀಕಿಸಿದ್ದಾರೆ