ಪ್ರತಿಭೋತ್ಸವ ಪ್ರಶಸ್ತಿ ಪ್ರದಾನ

ಕಲಬುರಗಿ:ಜೂ.3: ನಗರದ ಗೋಲ್ಡ್ ಹಬ್‍ನಲ್ಲಿ ಕರ್ನಾಟಕ ಆರ್ಯ ವೈಶ್ಯ ಮಹಾಸಭಾ (ಆರ್) ಜಿಲ್ಲಾ ಸಮಿತಿ ವತಿಯಿಂದ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಆರ್ಯ ವೈಶ್ಯ ಸಮಾಜದ ಅಧ್ಯಕ್ಷ ರಾಘವೇಂದ್ರ ಮೈಲಾಪೂರ, ಶ್ರೀ ದಾಮೋಧರ ರಘೋಜಿ ಮೆಮೋರಿಯಲ್ ಸಿ.ಬಿ.ಎಸ್.ಇ ಶಾಲೆಯ ಅಧ್ಯಕ್ಷ ರಾಮಚಂದ್ರ ಡಿ.ರಘೋಜಿ, ಕೆಎವಿಎಂಎಸ್ ವಲಯ ಕಾರ್ಯದರ್ಶಿ ವೀರೇಶ ವಾಗಂಗೇರಿ, ದತ್ತಾತ್ರೇಯ ಐನಾಪುರ, ಮಲ್ಲಿಕಾರ್ಜುನ ಗಂಗಾ, ರವೀಂದ್ರ ಮಾದಮಶೆಟ್ಟಿ, ಪ್ರಶಾಂತ್ ಅತನೂರ, ಅಶೋಕ್ ಬಾವಗಿ, ವೇಣುಗೋಪಾಲ್ ಮಾದಮಶೆಟ್ಟಿ, ಶ್ರೀನಿವಾಸ್ ಮೈಲಾಪುರ, ಸತ್ಯನಾರಾಯಣ ವನಮಾಲಿ, ಶಿವಕುಮಾರ್ ಕೌಕುಂಟ್ಲ, ರಮೇಶ್ ಕಂದೂರ, ಶ್ರೀಕಾಂತ್ ಐನಾಪುರ, ಶ್ರೀದೇವಿ ಎಂ. ಗಂಗಾ, ಶೈಲಜಾ ಎಸ್. ಮದರಗಾಂವ, ಮೀರಾ ಆರ್. ರಘೋಜಿ, ಸುರೇಖಾ ಎಸ್.ವಾಗಂಗೇರಿ, ಗೀತಾ ಆರ್. ಗಾಂಪಾ ಸೇರಿದಂತೆ ಇತರರು ಇದ್ದರು.