ಪ್ರತಿಭೆ ಯಾರ ಸ್ವತ್ತೂ ಅಲ್ಲ: ವಿಜಯಪ್ರಕಾಶ್

ಮೈಸೂರು:ಏ:17: ಮನುಷ್ಯರಲ್ಲಿ ಪ್ರತಿಭೆ ಎಂಬುದು ಒಬ್ಬರಿಗಿಂತ ಮತ್ತೊಬ್ಬರಲ್ಲಿ ಭಿನ್ನವಾಗಿದ್ದ, ಹಾಗಾಗಿ ಅದು ಸ್ವಾಭಾವಿಕ ಎಂದು ಖ್ಯಾತ ಚಲನಚಿತ್ರ ಹಿನ್ನಲೆ ಗಾಯಕ ವಿಜಯಪ್ರಕಾಶ್ ಅಭಿಪ್ರಾಯ ಪಟ್ಟರು.
ನಗರದ ಬನ್ನಿ ಮಂಟಪ ಬಡಾವಣೆಯಲ್ಲಿರುವ ಸಂತ ಫಿಲೋಮಿನಾ ಕಾಲೇಜು ಮೈದಾನದಲ್ಲಿ ಮೆಟ್ರೋಕಾರ್ಸ್, ಎಂಹೆಚ್‍ಎ ಸ್ಮಾರ್ಟ್ ಸಲ್ಯೂಷನ್ಸ್ ಗೇರ್ ಹಾಗೂ ಸಂತ ಫಿಲೋಮಿನಾ ಕಾಲೇಜುಗಳು ಸಂಯುಕ್ತವಾಗಿ ಆಯೋಜಿಸಿದ್ದ ಈಡನ್ ಕ್ರಿಕೆಟ್ ಲೀಗ್ 2021ಅನ್ನು ಉದ್ಘಾಟಿಸಿ ಮಾತನಾಡಿ, ಮನುಷ್ಯರಲ್ಲಿ ಕೆಲವರಿಗೆ ಕ್ರೀಡೆ, ಓದು, ಸಂಗೀತ, ಅನ್ವೇಷಣೆ, ಕರಕುಶಲತೆ ಹಾಗೂ ಇನ್ನಿತರೆ ಪ್ರತಿಭೆಗಳು ಕಂಡು ಬಂದು ಅವುಗಳಲ್ಲಿ ಉತ್ತುಂಗಕ್ಕೇರಿರುವ ವ್ಯಕ್ತಿಗಳನ್ನು ಕಾಣಬಹುದಾಗಿದೆ. ಇದಕ್ಕೆ ಪ್ರಮುಖ ಕಾರಣ ಅವರು ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ಹೋರಾಟ ನಡೆಸಿದ್ದಾರೆ ಎಂಬುದನ್ನು ಮರೆಯುವಂತ್ತಿಲ್ಲ ಎಂದು ಹೇಳಿದರು.
ಕ್ರಿಕೆಟ್ ಹಾಗೂ ಸಂಗೀತಗಳೆರಡರ ನಡುವೆ ಇರುವ ಅಂತರ ಏನು ಎಂಬ ಪ್ರಶ್ನೆಗೆ ಕ್ರಿಕೆಟ್ ಆಡುವವರು ಬಿಸಿಲಿನಲ್ಲಿ ಆಟ ಆಡುವುದರ ಮೂಲಕ ಜನತೆಯನ್ನು ಮನರಂಜಿಸಿದರೆ ಗಾಯಕರಾದ ನಾವು ಹವಾ ನಿಯಂತ್ರಿಕೆ ಕೊಠಡಿಯಲ್ಲಿ ಕುಳಿತು ಹಾಡನ್ನು ಹಾಡುವುದರ ಮೂಲಕ ಜನತೆಯನ್ನು ರಂಜಿಸುತ್ತೇವೆ. ಇದನ್ನು ಸಾಧಿಸಲು ಅಪಾರ ಶ್ರಮ ಪಡಬೇಕಿದೆ ಎಂಬುದನ್ನು ಅಲ್ಲಗಳೆಯಲಾಗದು. ಇದೇ ಇವೆರಡರ ನಡುವಿನ ಅಂತರ ಎಂದು ಜಯಪ್ರಕಾಶ್ ಉತ್ತರಿಸಿದರು. ಯಾವುದೇ ಸ್ಪರ್ಧೆಗಳಲ್ಲಿ ಸೋಲು-ಗೆಲುವು ಮುಖ್ಯವಲ್ಲ, ಸ್ಪರ್ಧೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ಮುಖ್ಯ. ಇಂದಿನಿಂದಲೇ ರಾಷ್ಟ್ರ ತಂಡಕ್ಕೆ ಆಯ್ಕೆಯಾಗುವ ಗುರಿಯನ್ನಿಟ್ಟುಕೊಂಡು ಈ ಆಟವನ್ನು ಸತತವಾಗಿ ಅಭ್ಯಾಸ ಮಾಡುವಂತೆ ಕ್ರೀಡಾ ಪಟುಗಳಿಗೆ ಕಿವಿ ಮಾತು ಹೇಳಿದರು.
ಜಯಪ್ರಕಾಶ್‍ರವರು ರಾಜಕುಮಾರ ಸಿನಿಮಾದ ಬೊಂಬೆ ಹೇಳುತೈತೆ ಗೀತೆಯನ್ನ ಹಾಡಿದರು. ಎಂಐಟಿ ಮೈಸೂರು ಇಸಿಎಲ್ ವತಿಯಿಂದ ನೀಡಿದ É 40,000 ರೂ.ಗಳ ಚೆಕ್‍ನ್ನು ಯೂತ್ ಫಾರ್ ಸೇವಾ ಸಂಸ್ಥೆಗೆ ಹಸ್ತಾಂತರಿಸಿದರು.