ಪ್ರತಿಭೆಗೆ ಪೆÇ್ರೀತ್ಸಾಹಿಸುವ ಕಾರ್ಯ ಮಹತ್ವದ್ದು : ಹೋತಪೇಟ ಶಿವಲಿಂಗ ಶ್ರೀಗಳು

ಶಹಾಪುರ:ಫೆ.24:ಸಾಂಸ್ಕøತಿಕ ಕಾರ್ಯಕ್ರಮಗಳು ಆಧುನಿಕ ಯುಗದಲ್ಲಿ ಮಕ್ಕಳು, ಯುವಕರು, ಹಿರಿಯರನ್ನು ಮನರಂಜಿಸುವ ಮಾಧ್ಯಮವಾಗಿವೆ. ಅಲ್ಲದೆ ಹಲವಾರು ಪ್ರತಿಭೆಗಳನ್ನು ಗುರುತಿಸಿ, ಪೆÇ್ರೀತ್ಸಾಹಿಸಲು ಸಾಧ್ಯವಾಗಿದೆ. ಆ ದೃಷ್ಟಿಯಿಂದ ಗ್ರಾಮೀಣ ಪ್ರತಿಭೆಯನ್ನು ಹೊರತರಲು ಶಿವರಾತ್ರಿಯ ನಿಮಿತ್ಯ ಅದ್ದೂರಿ ಕಾರ್ಯಕ್ರಮ ಏರ್ಪಡಿಸುವ ಸಂಸ್ಥೆಯ ಕಾರ್ಯ ಮಹತ್ವದ್ದು ಎಂದು ಹೋತಪೇತ ಕೈಲಾಸ ಆಶ್ರಮದ ಪರಮ ಪೂಜ್ಯ ಶ್ರೀ ಶಿವಲಿಂಗ ಮಹಾಸ್ವಾಮಿಗಳು ಹೇಳಿದರು.

ಸಮೀಪದ ಭೀಮರಾಯನಗುಡಿಯ ಓಂ ಕಲ್ಯಾಣ ಮಂಟಪ (ಕಮ್ಯುನಿಟಿ ಹಾಲ್) ಆವರಣದಲ್ಲಿ ಸೋಮವಾರ ವೀರ ಕೇಸರಿ ಕಲಾ, ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮತ್ತು ನಮ್ಮ ಕರ್ನಾಟಕ ಸೇನೆ ವತಿಯಿಂದ ಏರ್ಪಡಿಸಿದ್ದ 12 ನೇ ವರ್ಷದ ಜಾನಪದ ಜಾಗರಣೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಇಂತಹ ಕಾರ್ಯಕ್ರಮಗಳಲ್ಲಿ ಪೂಜ್ಯಶ್ರೀಗಳು ನುಡಿಯುವ ಹಿತ ಮಾನವೀಯ ಮೌಲ್ಯಗಳನ್ನು ಸಾರುವ ಉಪನ್ಯಾಸ ಆಲಿಸಿ ಜೀವನದಲ್ಲಿ ಅನುಸರಿಸಿ ಆರೋಗ್ಯ ಸಮಾಜ ಸೃಷ್ಟಿಸಬೇಕು ಎಂದು ತಿಳಿಸಿದರು.

ನಂತರ ಕಾರ್ಯಕ್ರಮದ ಆಯೋಜಕರಾದ ಭೀಮಣ್ಣ ಶಾಖಾಪುರ ಮಾತನಾಡಿ, ಗ್ರಾಮೀಣ ಸೊಬಗನ್ನು ಬಿಂಬಿಸುವ ಜಾನಪದ ಕಲೆಗಳಿಗೆ ಹೆಚ್ವಿನ ಪೆÇ್ರೀತ್ಸಾಹ ನೀಡಬೇಕು. ಹಾಗೂ ದೇಶದ ಪ್ರತೀಕವನ್ನು ಮೆರೆಯುವ ಆಚಾರ, ವಿಚಾರ, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ಕಾರ್ಯ ಎಲ್ಲರಿಂದ ಆಗಬೇಕು ಎಂದು ನುಡಿದರು.

ಗೋರಗುಂಡಗಿ ಪುಣ್ಯಕೋಟಿ ಆಶ್ರಮದ ಪರಮ ಪೂಜ್ಯ ಶ್ರೀ ವರಲಿಂಗೇಶ್ವ ಸಾಮೀಜಿ, ಶಹಾಪುರದ ಬಾರಾಜ್ಯೋತಿಲಿರ್ಂಗ ಟ್ರಸ್ಟ್ ಅಧ್ಯಕ್ಷರಾದ ಪರಮ ಪೂಜ್ಯ ಶ್ರೀ ವಿಶ್ವರಾಧ್ಯ ಸಾಮೀಜಿ, ಸುಕ್ಷೇತ್ರ ಮಹಲರೋಜಾದ ಪರಮ ಪೂಜ್ಯ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿಗಳು ದಿವ್ಯ ಸಾನಿಧ್ಯ ವಹಿಸಿದ್ದರು.

ಇದೇ ಸಂದರ್ಭದಲ್ಲಿ ನಮ್ಮ ಕರ್ನಾಟಕ ಸೇನೆ ಸಂಘಟನೆಯ ರಾಜ್ಯಾಧ್ಯಕ್ಷರಾದ ಬಸವರಾಜ ಪಡುಕೋಟೆ, ಕೃ.ಭಾ.ಜ.ನಿ.ನಿ ಭೀಮರಾಯನಗುಡಿಯ ಮುಖ್ಯ ಅಭಿಯಂತರರಾದ ಪ್ರೇಮ್ ಸಿಂಗ್, ಆಡಳಿತಾಧಿಕಾರಿ ಅಶೋಕ್ ವಾಸನದ್, ಓಂ ಪ್ರಕಾಶ್ ಕರಣಗಿ, ಶಿವಕುಮಾರ್, ಗೋಪಿಚಂದ್ ಚವ್ಹಾಣ್, ಸಿದ್ದು ಪಟ್ಟೆದಾರ್ ಸೇರಿದಂತೆ ಇತರರು ಇದ್ದರು.