ಪ್ರತಿಭೆಗೆ ತಕ್ಕಂತೆ ಸೋಲು ಗೆಲುವು ಆದರೆ ಕ್ರೀಡೆಯಲ್ಲಿ ಭಾಗವಹಿಸುವುದು ಅತಿ ಮುಖ್ಯ : ಸಹಾಯಕ ಆಯುಕ್ತ ಆಶಪ್ಪ ಪೂಜಾರಿ

ಸೇಡಂ, ಫೆ,15: ಪ್ರಚಲಿತ ಜಗತ್ತಿನಲ್ಲಿ ಕ್ರಿಕೆಟ್ ಗೆ ಹೆಚ್ಚಿನ ಮಹತ್ವದ ಜೊತೆಗೆ ಭಾರತದಲ್ಲಿಯೂ ಕ್ರಿಕೆಟ್ಗೆ ಹೆಚ್ಚಿನ ಕ್ರೀಡಾಪಟುಗಳು ಕ್ರೀಡಾಭಿಮಾನಿಗಳು ಹೆಚ್ಚಳವಿದ್ದು ಅದರಂತೆ ತಾಲೂಕಿನಲ್ಲಿ ಯುವ ಕ್ರೀಡಾಪಟುಗಳಿಗೆ ಪೆÇ್ರೀತ್ಸಾಹಿಸುವಂತಹ ಯುವಕ ಅಬ್ದುಲ್ ಹಫೀಜ್ ರಂಜೋಳ ಅವರ ಕಾರ್ಯ ಮಹತ್ವಪೂರ್ಣವಾಗಿದೆ, ಈ ಕ್ರಿಕೆಟ್ ನಲ್ಲಿ ಪ್ರತಿಭೆಗೆ ತಕ್ಕಂತೆ ಸೋಲು ಗೆಲುವು ಆದರೆ ಕ್ರೀಡೆಯಲ್ಲಿ ಭಾಗವಹಿಸುವುದು ಅತಿ ಮುಖ್ಯವಾಗಿದೆ ಎಂದು ಸಹಾಯಕ ಉಪ ವಿಭಾಗ ಆಯುಕ್ತರಾದ ಆಶಪ್ಪ ಪೂಜಾರಿ ಹೇಳಿದರು. ಇಲ್ಲಿನ ತಾಲೂಕಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಆರ್ ಆರ್ ಚಾಂಪಿಯನ್ಸ್ ಟ್ರೋಫಿ ಸಿಜನ್ 1 ಕ್ರಿಕೇಟ್ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.ಈ ವೇಳೆಯಲ್ಲಿ ಪಿಎಸ್ ಐ ತಿರುಮಲೇಶ್ವರ,ಪುರಸಭೆ ಮುಖ್ಯಾಧಿಕಾರಿ ಬಿ.ಪ್ರಹ್ಲಾದ್, ಅಬ್ದುಲ್ ರಶೀದ್ ರಂಜೋಳ,ಅಬ್ದುಲ್ ಹಫೀಜ್ ರಂಜೋಳ, ಜಗನ್ನಾಥ್ ಚಿಂತಪಳ್ಳಿ, ಹಾಜಿ ನಾಡೇಪಲ್ಲಿ, ವೀರೇಶ ಹೂಗಾರ, ಕರವೇ ಅಧ್ಯಕ್ಷ ರಾಮಚಂದ್ರ ಗುತ್ತೇದಾರ್, ದೇವು ದೋರೆ, ನಾಗನಾಥ ಎಳ್ಳಿ, ಸೇರಿದಂತೆ ಹಲವು ಕ್ರೀಡಾ ಪಟುಗಳು ಇದ್ದರು.

ಕ್ರಿಕೇಟ್ ಆಡುವ ಪ್ರತಿಭೆಗಳು ಸೇಡಂ ಹೆಚ್ಚಿಗೆ ಇರುವುದರಿಂದ ಅವರ ಪ್ರತಿಭೆಯನ್ನು ಗುರುತಿಸಿ ಮೇಲೇತರಕ್ಕೆ ಕರೆದು ಕೊಂಡು ಹೋಗುವ ಸಣ್ಣ ಪ್ರಯತ್ನ ಮಾಡುತ್ತಿರುವೆ. ಇದರ ಸದುಪಯೋಗ ಯುವ ಕ್ರಿಕೆಟ್ ಪ್ರತಿಭೆಗಳು ಪಡೆದುಕೊಳ್ಳಬೇಕು.
ಅಬ್ದುಲ್ ಹಫೀಜ್ ಆರ್ ರಂಜೋಳ ಯುವ ಉದ್ದಿಮೆದಾರರು ಸೇಡಂ