ಪ್ರತಿಭೆಗೆ ಅಂಕ ಒಂದೇ ಮಾನದಂಡವಲ್ಲ

ಔರಾದ : ನ.19:ವಿದ್ಯಾರ್ಥಿಗಳ ಪ್ರತಿಭೆಗೆ ಅಂಕ ಒಂದೇ ಮಾನದಂಡ ಅಲ್ಲ ಅವರಲ್ಲಿರುವ ಸವಾರ್ಂಗೀಣ ಬೆಳವಣಿಗೆ ಆದಾಗ ಮಾತ್ರ ಯಶಸ್ಸು ಗಳಿಸಲು ಸಾಧ್ಯ ಎಂದು ಮುತ್ತೂಟ್ ಫೀನ್ ಕಾರ್ಪ ವಲಯ ಅಧಿಕಾರಿ ಬಿ.ಎನ್ ಪಾಟೀಲ ಅವರು ಹೇಳಿದರು.

ತಾಲೂಕಿನ ಬೆಳಕುಣಿ ಚೌದ್ರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮುತ್ತೂಟ್ ಫೀನ್ ಕಾರ್ಪ ವತಿಯಿಂದ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಕ್ಕಳಲ್ಲಿ ವಿವಿಧ ರೀತಿಯ ಪ್ರತಿಭೆ ಅಡಗಿರುತ್ತದೆ, ಅದನ್ನು ಪೆÇೀಷಕರು, ಶಿಕ್ಷಕರು ಗುರುತಿಸಿ ಅದಕ್ಕೆ ಪೂರಕವಾಗಿ ಸಹಕಾರ ನೀಡಿದಾಗ ಮಕ್ಕಳು ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯಗುರು ನವನಾಥ, ಮುತ್ತಾರ್, ಎಸ್ಡಿಎಂಸಿ ಅಧ್ಯಕ್ಷ ಸುಭಾಷ, ಮುತ್ತೂಟ ಫೀನ್ ಕಾರ್ಪ ವ್ಯವಸ್ಥಾಪಕ ರಾಜುಗೊಂಡ, ಸುಭಾಷ, ನಾಸಿರ, ಸಾಗರ ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.