ಪ್ರತಿಭೆಗಳಿಗೆ ಪ್ರೋತ್ಸಾಹಿಸಿ ಸಾಧನೆಗೆ ಅವಕಾಶ ನೀಡಿ: ದೇವರಮನಿ

ಶಹಾಬಾದ:ಜ.3: ಇಂದಿನ ಆಧುನಿಕ ಯುಗದಲ್ಲಿ ಅಂಕಗಳು ಮಹತ್ವ ಪಡೆದುಕೊಂಡಿದ್ದು, ಹೆಚ್ಚು ಅಂಕಪಡೆದ ವಿಧ್ಯಾರ್ಥಿಗಳಿಗೆ ಪ್ರೋತ್ಸಾಹಿಸಿ ಬೆನ್ನು ತಟ್ಟಿ ಆತ್ಮಸ್ಥೈರ್ಯ ತುಂಬಿ ಸಾಧನೆಗೆ ಅವಕಾಶ ನೀಡಿಬೇಕು ಎಂದು ಹೈದ್ರಾಬಾದ-ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಶಿವಾನಂದ ದೇವರಮನಿ ಹೇಳಿದರು.

ನಗರದ ಎಸ್.ಎಸ್ ಮರಗೋಳ ಕಾಲೇಜು ವತಿಯಿಂದ ಎಸ್‍ಎಸ್‍ಎಲ್‍ಸಿ, ಪಿಯುಸಿ, ಹಾಗೂ ಪದವೀಯಲ್ಲಿ ಅತೀ ಹೆಚ್ಚು ಅಂಕ ಪಡೆದುಕೊಂಡು ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭದಲ್ಲಿ ಉದ್ಘಾಟಕರಾಗಿ ಅವರು ಮಾತನಾಡಿದರು.

ಎಚ್‍ಕೆಇ ಕೌನ್ಸಿಲಿಂಗ್ ಸದಸ್ಯರಾದ ಸತೀಶ್ಚಂದ್ರ ಹಡಗಲಿಮಠ ಮಾತನಾಡಿ, ತಂದೆ-ತಾಯಿ ನೀಡಿರುವ ಅವಕಾಶವನ್ನು ಅಧ್ಯಯನಕ್ಕೆ ಒಳಸಿಕೊಳ್ಳಿ, ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ. ಗುರು ಹಿರಿಯರನ್ನು ಗೌರವಿಸುವ ಪ್ರವೃತ್ತಿ ಬೆಳೆಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಪ್ರಾಚಾರ್ಯ ಅನೀಲಕುಮಾರ ಕೊಪ್ಪಳಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶೀವಲಾಲ ಹತ್ತಿ, ಎಆರ್ ಕೊಪಳಕರ್, ಅನೀಲಕುಮಾರ ಮರಗೋಳ, ಮಲ್ಲಿಕಾರ್ಜುನ ಇಂಗಳೇಶ್ವರ, ಚಂದ್ರಕಾಂತ.ಎಸ್ ವೇದಿಕೆಯಲ್ಲಿದ್ದರು. ವಿವಿಧ ಶಾಲೆಯ ಮುಖ್ಯಸ್ಥರು, ಶಿಕ್ಷಕರು, ಪ್ರಾಧ್ಯಪಕರು, ವಿಧ್ಯಾರ್ಥಿಗಳ ಪೋಷಕರು ಹಾಜರಿದ್ದರು. ಗುರುಲಿಂಗಪ್ಪ ಕಾರ್ಯಕ್ರಮ ನಿರೂಪಿಸಿದರು.

ಸನ್ಮಾನಿತ ವಿದ್ಯಾರ್ಥಿಗಳು: ರಾಹುಲ ರಾಘವೇಂದ್ರ, ಅನುಸುಬಾಯಿ ಮರಲಿಂಗಪ್ಪ, ರೋಮೇಶಾನಬಿಲ್ಲಾ ಸಿರಾಜುದ್ದೀನ್, ಕಬೀರಶೇಖ ಮಹಿಬೂಬಶೇಖ, ಜಹೀರಪಾಶಾ ಶಬ್ಬೀರಮಿಯ್ಯಾ, ಸುಮಯ್ಯಾಬೇಗಂ ಮಹ್ಮದ ಉಸ್ಮಾನಬೇಗ ಸೇರಿದಂತೆ ವಿವಿಧ ಶಾಲಾ, ಕಾಲೇಜುಗಳ ವಿಧ್ಯಾರ್ಥಿಗಳಿಗೆ ಸನ್ಮಾನಿಸಲಾಯಿತ್ತು.