ಪ್ರತಿಭೆಗಳಿಗೆ ಗೌರವಿಸದ ಪ್ರತಿನಿಧಿಗಳಿಗೆ ಗೇಟ್ ಪಾಸ್ ನೀಡಿ: ಆನಂದವಾಡೆ

Oplus_1179648

ಬೀದರ್:ಮೇ.24: ಪದವಿಧರರು ದೇಶದ ನಿಜವಾದ ಪ್ರತಿಭೆಗಳು. ಅವರಿಗೆ ಮನ್ನಣೆ ನೀಡದ ಜನ ಪ್ರತಿನಿಧಿಗಳಿಗೆ ಗೆಟ್ ಪಾಸ್ ನೀಡಬೇಕಿದೆ ಎಂದು ಈಶಾನ್ಯ ಪದವಿಧರ ಮತಕ್ಷೇತ್ರದ ಸ್ವತಂತ್ರ ಅಭ್ಯರ್ಥಿಗಳು ಹಾಗೂ ನ್ಯಾಯವಾದಿ ಅನಿಮೇಶ ಆನಂದವಾಡೆ ತಿಳಿಸಿದರು.
ಗುರುವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಭಾಲ್ಕಿ ತಾಲುಕಿನ ವಿಧ್ಯಾರ್ಥಿ “ವೇದಾಂತ ಪ್ರಭು ಆನಂದವಾಡೆ” ಇವನು 2022 ರಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಅಭೂತಪೂರ್ವ ಸಾಧನೆ ಮಾಡಿ ಅಮೇರಿಕಾದ ಯುನೇಸ್ಕೋದಿಂದ ಪ್ರದಾನ ಮಾಡಲಾಗುವ “ಯಂಗ್ ಅರ್ಥ್ ಚಾಂಪಿಯನ್ ಪ್ರಶಸ್ತಿ” ಯನ್ನು ಗೆದ್ದಿರುತ್ತಾನೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿ ಹೆಚ್ಚಿಸಿದ ಪ್ರತಿಭೆಗೆ ಅಂದಿನ ಬಿಜೆಪಿ ಸರ್ಕಾರ ಪ್ರೋತ್ಸಾಹ ಕೂಡ ಮಾಡಿರುವುದಿಲ್ಲ. ಅಂಥ ಪಕ್ಷದ ಅಭ್ಯರ್ಥಿಗಳಿಗೆ ಮತ ಚಲಾಯಿಸಕೂಡದೆಂದು ಕಿವಿ ಮಾತು ಹೇಳಿದರು.
ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಅಮರನಾಥ ಪಾಟೀಲರು ಡಿಗ್ರೀನೇ ಹೋಂದಿರುವುದಿಲ್ಲಾ, ಚುನಾವಣೆಗಾಗಿ ಸಲ್ಲಿಸಿರುವ ಶಪಥ ಪತ್ರದಲ್ಲಿ ಸುಳ್ಳು ಮಾಹಿತಿ ಸಲ್ಲಿಸಿದ್ದಾರೆ ಎಂಬ ಸುದ್ದಿ ಸೊಸಿಯಲ್ ಮಿಡಿಯಾಗಳಲ್ಲಿ ಹರಡುತ್ತಿದೆ, ಪದವಿ ಹೊಂದಿಲ್ಲದವರಿಗೆ ಪದವಿಧರರು ಮತ ಚಲಾಯಿಸಿದರೆ ನಮ್ಮ ಮತಕ್ಕೆ ಬೆಲೆ ಇರುವುದಿಲ್ಲವೆಂದು ತಿಳಿಸಿದರು.
ತಮ್ಮ ಪರಿಚಯ ಬಿಚ್ಚಿಟ್ಟ ನ್ಯಾಯವಾದಿ ಆನಂದವಾಡೆ ಅವರು, ತಾನು ಸುಮಾರು 23 ವರ್ಷಗಳೀಂದ ವಕೀಲಿ ವೃತ್ತಿ ಮಾಡುತ್ತಾ ಜನಸಾಮಾನ್ಯರಿಗೆ ನ್ಯಾಯ ದೊರಕಿಸಿಕೊಡುತ್ತಾ ಬಂದಿರುತ್ತೇನೆ, ಈಗಲೂ ಸಹ ಜನಸಾಮಾನ್ಯರಿಗೆ “ಕಾನೂನು ಅರೀವೂ ಮೂಡಿಸುವುದಕ್ಕೋಸ್ಕರ “ಉಚಿತ ಕಾನೂನು ಸಲಹಾ ಕೇಂದ್ರ ನಡೆಸಿ ಜನಸಾಮಾನ್ಯರಿಗೆ ಉಚಿತ ಕಾನೂನು ಸಲಹೆ ನೀಡುವುದರಲ್ಲಿ ತೊಡಗಿರುತ್ತೇನೆ ಎಂದರು.
ಪದವಿಧರ ಮತಬಾಂಧವರೇ ನಾನೂ ಒಬ್ಬ ಪಧವಿಧರ, ಪದವಿಧರರ ಸಮಸ್ಯೆಗಳನ್ನು ಪದವಿಧರರಿಗೆ ಮಾತ್ರ ಗೋತ್ತು, ನಾನು ಈ ಒಂದು ಪದವಿಧರ ನಿರುದ್ಯೋಗೀಗಳ ಸಮಸ್ಯೆಗಳಗೆ ಸ್ಪಂದಿಸಿ ಅವುಗಳ ಬಗ್ಗೆ ಸದನದಲ್ಲಿ ಧ್ವನಿ ಎತ್ತಿ ಸರಕಾರದೊಂದಿಗೆ ಹೊರಾಡಿ ಪದವಿಧರ ನಿರುದ್ಯೋಗೀಗಳ ಸಮಸ್ಯೆಗಳನ್ನು ಪರಿಹರಿಸಬೇಕೇಂಬ ಉದ್ದೇಶವನ್ನಿಟ್ಟುಕೊಂಡು ನಾನು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಮೊದಲ ಪ್ರಾಶಸ್ತ್ಯದ ಮತ ಚಲಾಯಿಸಿ ನನ್ನನ್ನು ಗೆಲ್ಲಿಸಿ ತರಬೇಕೆಂದು ಮತದಾರರಲ್ಲಿ ಮನವಿ ಮಾಡಿದರು.
ಈಗಾಗಲೇ ತಾನು ಬೀದರ್ ಹಾಗೂ ಕಲಬುರಗಿ ಜಿಲ್ಲೆಗಳ ಎಲ್ಲ ತಾಲೂಕುಗಳಿಗೆ ಭೇಟಿ ನೀಡಿ ಪದವಿಧರರಲ್ಲಿಗೆ ತಲುಪಿ ಅವರ ಕಷ್ಟ, ಸುಖಗಳು ಕೇಳುವಂಥ ಔದಾರ್ಯ ತೋರಿಸಿರುವೆ. ನಾಳೆಯಿಂದ ಕಲ್ಯಾಣ ಕರ್ನಟಕದ ಉಳಿದ ಜಿಲ್ಲೆಗಳಾದ ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಿಗೆ ಪ್ರವಾಸ ಮಾಡಿ ಪದವಿಧರರರ ಸುಖ, ದುಖಗಳನ್ನು ಹಾಗೂ ಅವರ ದುಖ ದುಮ್ಮಾನುಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಕಾರ್ಯ ಮಾಡುವುದಾಗಿ ಆನಂದವಾಡೆ ಭರವಸೆ ನೀಡಿದರು.
ನ್ಯಾಯವಾದಿಗಳಾದ ಶ್ರೀಶೈಲ ಪಾಟೀಲ ಹಾಗೂ ಶಿವಕುಮಾರ ಕೇರೂರ್ ಪತ್ರಿಕಾಗೋಷ್ಟಿಯಲ್ಲಿದ್ದರು.