ಪ್ರತಿಭೆಗಳನ್ನ ಗುರುತಿಸಿ ಪ್ರೋತ್ಸಾಹಿಸಬೇಕು : ಡಾ. ಶಿವಾನಂದ ಮಹಾಸ್ವಾಮಿ

ಜೇವರ್ಗಿ :ನ.27 : ಜನರಲ್ಲಿರುವ ಪ್ರತಿಭೆಗಳನ್ನ ಗುರುತಿಸುವುದು ಬಹಳ ಮುಖ್ಯವಾಗಿದೆ. ಪ್ರತಿಭೆಗಳು ಕೆಲವೊಮ್ಮೆ ತೆರೆಮರೆಯಲ್ಲಿಯೇ ಇರುತ್ತವೆ, ಅಂತಹ ಪ್ರತಿಭೇಗಳನ್ನ ಗುರುತಿಸಿ ಪ್ರೋತ್ಸಾಹೀಸಬೇಕೆಂದು ಸೊನ್ನ ಮಠದ ಡಾ. ಶಿವಾನಂದ ಮಹಾಸ್ವಾಮಿಗಳು ಅಭಿಮತಪಟ್ಟರು.

ಪಟ್ಟಣದ ಹಳೆ ತಹಸೀಲ್ ಆವರಣದಲ್ಲಿ ಶನಿವಾರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಜೇವರ್ಗಿ ತಾಲೂಕ ತತ್ವಪದಕಾರರ ಸಮ್ಮೇಳನ ಕಾರ್ಯಕ್ರಮವನ್ನು ಸೊನ್ನ ಮಠದ ಡಾ. ಶಿವಾನಂದ ಮಹಾಸ್ವಾಮಿಗಳು ಉದ್ಘಾಟಿಸಿ ಮಾತನಾಡಿದರು.

ತಾಲೂಕ ತತ್ವಪದಕಾರರ ಸಮ್ಮೇಳನವು ಬೇರೆ ತಾಲೂಕಿನ ಜನರಿಗೆ ಒಂದು ಉತ್ತಮ ಸಂದೇಶವನ್ನು ನೀಡಿದೆ. ತಾಲೂಕಿನಲ್ಲಿ ಅನೇಕ ತತ್ವಪದಕಾರರು ತಮ್ಮ ಪ್ರತಿಭೇಯನ್ನ ತೋರಿಸಲು ದೊಡ್ಡ ವೇಧಿಕೆಗಳ ಸಿಕ್ಕಿರಲಿಲ್ಲ. ಅಂತಹ ಪ್ರತಿಭೇಗಳನ್ನ ಇಂದು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಗುರುತಿಸಿ ಅವರಿಗೆ ಸನ್ಮಾನವನ್ನು ಮಾಡುತ್ತಿರುವುದು ಶ್ಲಾಘನಿಯ. ಇನ್ನು ಅನೇಕ ತತ್ವಪದಕಾರರು ತಮ್ಮ ಪ್ರತಿಭೆಗಳನ್ನ ಜನರ ಮುಂದೆ ತೋರಿಸಲು ಇನ್ನು ಅನೇಕ ವೇದಿಕೆಗಳು ಸಿದ್ದವಾಗಬೇಕು. ಮುಗ್ದ ಜನರಲ್ಲಿ ಹಲವು ಪ್ರತಿಭೇಗಳಿದ್ದರು ಕೂಡ ಅವರಿಗೆ ಅದು ತಿಳಿದಿರುವುದಿಲ್ಲ, ಅಂತಹ ಪ್ರತಿಭೆಗಳನ್ನ ಗುರುತಿಸಿ ಪ್ರೋತ್ಸಾಹಿಸಬೇಕೇಂದು ಅಭಿಮತಪಟ್ಟರು.

ನಂತರ ಯಡ್ರಾಮಿ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಮಾತನಾಡಿ ನಾವು ಅನೇಕ ನದಿಗಳ ಮೇಲೆ ಹಾಡುಗಳನ್ನ ಕೆಳಿದ್ದೆವೆ ಮತ್ತು ಹಾಡಿದ್ದೆವೆ. ನಮ್ಮದೆ ತಾಲೂಕಿನಲ್ಲಿ ಹರಿಯುವಂತ ಭೀಮಾ ನದಿಯಬಗ್ಗೆ ಇಲ್ಲಿಯವರೆಗೆ ಯಾವುದೆ ರೀತಿಯ ಪದಗಳನ್ನ ರಚಿಸಿ ಹಾಡಿಲ್ಲ. ಮುಂದಿನ ದಿನಗಳಲ್ಲಿ ಭೀಮಾ ನದಿಯ ಮೇಲೆ ಕವನಗಳನ್ನ ರಚಿಸಿ ಹಾಡುಗಳನ್ನ ಹಾಡಬೇಕು. ನಮ್ಮ ಕಲ್ಯಾಣ ಕರ್ನಾಟಕದಲ್ಲಿ ಅನೇಕ ಗ್ರಾಮಗಳ ಜೀವನಾಡಿಯಾಗಿರುವ ಈ ಭೀಮಾ ನದಿಯನ್ನ ನಾವುಗಳು ಸಂರಕ್ಷಿಸಬೇಕು ಎಂದರು.

ಈ ಸಂದರ್ಭದಲ್ಲಿ ಬಸವಪಟ್ಟಣದ ಮರೆಪ್ಪ ಮುತ್ಯಾ, ಶಾಸಕ ಕೆ ಕೆ ಆರ್ ಡಿ ಬಿ ಅಧ್ಯಕ್ಷರಾದ ಡಾ. ಅಜಯಸಿಂಗ್, ಸಾಹಿತಿಗಳಾದ ಮಲ್ಲಿಕಾರ್ಜುನ ಕಡಕೋಳ, ಸಮ್ಮೇಳನಾಧ್ಯಕ್ಷರಾದ ಜೇವರ್ಗಿ ರಾಜಣ್ಣ, ಧರ್ಮಣ್ಣ ದೊಡ್ಮನಿ, ಷಣ್ಮುಖಪ್ಪ ಸಾಹು ಗೀಗಿ, ಹಳ್ಳೆಪ್ಪಾಚಾರ್ಯ ಜೋಶಿ, ಚನ್ನಮಲ್ಲಯ್ಯ ಹಿರೇಮಠ, ಎಸ್ ಕೆ ಬಿರಾದಾರ, ಮರೆಪ್ಪ ಬಡಿಗೇರ, ಶಾಂತಪ್ಪ ಕೂಡಲಗಿ, ರೇವಣಸಿದ್ದಪ್ಪ ಸಂಕಾಲಿ, ರುಕುಂಪಟೇಲ್ ಇಜೇರಿ, ಈರಪ್ಪ ಹವಲ್ದಾರ, ವಸಂತರಾವ ನರಿಬೊಳ, ನಾಗರಾಜ ಗುತ್ತೆದಾರ, ಸಿದ್ರಾಮ ಕಟ್ಟಿ, ಕಲ್ಯಾಣಕುಮಾರ ಸಂಗಾವಿ, ಶ್ರೀಹರಿ ಕರಕಿಹಳ್ಳಿ, ಸುನಂದಾ ಕಲ್ಲಾ, ರವಿ ಕುಳಗೇರಿ, ರಾಜು ಮುದ್ದಡಗಿ, ರವಿಚಂದ್ರ ಗುತ್ತೆದಾರ, ಡಾ. ಧರ್ಮಣ್ಣ ಬಡಿಗೇರ, ಎಸ್ ಟಿ ಬಿರಾದಾರ, ಶಾಂತಲಿಂಗ ಪಾಟೀಲ್ ಕೋಳಕೂರ ಸೇರಿದಂತೆ ಅನೇಕರಿದ್ದರು.