ಪ್ರತಿಭಾ ಪ್ರಥಮ ಸ್ಥಾನ

ಬಾದಾಮಿ,ಡಿ23: ಶ್ರೀ ವೀರಪುಲಕೇಶಿ ವಿದ್ಯಾವರ್ಧಕ ಸಂಸ್ಥೆಯ ಎಸ್.ಬಿ. ಮಮದಾಪೂರ ಕಲಾ, ವಾಣಿಜ್ಯ, ವಿಜ್ಞಾನ ಪದವಿ ಮಾಹಾವಿದ್ಯಾಲಯದ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿನಿ ಪ್ರತಿಭಾ ಚನ್ನಪಗೌಡ ಇವರು ಈಚೆಗೆ ಕೆ.ಎಲ್.ಇ ಸಂಸ್ಥೆಯ ಶ್ರೀ ಜಿ.ಐ. ಬಾಗೇವಾಡಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯ ನಿಪ್ಪಾಣಿಯಲ್ಲಿ ಗಣಿತ ಶಾಸ್ತ್ರದ ವಿಭಾಗದ ವತಿಯಿಂದ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯ ಅಡಿಯಲ್ಲಿ ಇಂಟರ್ ಕಾಲೇಜ ನ್ಯಾಷಿನಲ್ ಮೇಥೆಮೆಟಿಕ್ಸ್ ಡೆ. ದ.ಪವರ್ ಪಾಯಿಂಟ್ ಪ್ರೇಸ್‍ನೇಶನ್ ಸ್ಫರ್ದೆಯಲ್ಲಿ ಪ್ರಥಮ ಸ್ಥಾನ ಪಡೆದು ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾಳೆ.
ಈ ವಿದ್ಯಾರ್ಥಿನಿ ಸಾಧನೆಗೆ ಸಂಸ್ಥೆಯ ಚೇರಮನ್ನ ಎ.ಸಿ. ಪಟ್ಟಣದ, ಗೌರವ ಕಾರ್ಯದರ್ಶಿ ಜೆ.ಎಸ್. ಮಮದಾಪೂರ, ಪ್ರಾಚಾರ್ಯ ರವೀಂದ್ರ ಮೂಲಿಮನಿ, ಮಾರ್ಗದರ್ಶಕÀ ಎಸ್.ಚ್. ಸಂಕನಗೌಡರ, ಎಸ್.ಎಸ್. ಮೂಲಿಮನಿ ಮತ್ತು ಮಹಾವಿದ್ಯಾಲಯದ ಎಲ್ಲ ಪ್ರಾಧ್ಯಾಪಕರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.