ಪ್ರತಿಭಾ ಪುರಸ್ಕಾರ

(ಸಂಜೆವಾಣಿ ನ್ಯೂಸ್)
ಧಾರವಾಡ,ಜು31: ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಧಾರವಾಡ ತಾಲೂಕ ಘಟಕದ ವತಿಯಿಂದ ಎಸ್‍ಎಸ್‍ಎಲ್‍ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ, ಲಿಂಗಧಾರಣೆ, ಸಹಜ ಶಿವಯೋಗ ಕಾರ್ಯಕ್ರಮ ಲಿಂಗಾಯತ ಭವನದಲ್ಲಿ ನೆರವೇರಿತು.
ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಮುಖ್ಯಮಂತ್ರಿ, ವಿಧಾನಪರಿಷತ್ ಸದಸ್ಯ ಜಗದೀಶ ಶೆಟ್ಟರವರು ಸಮಾಜದ ಸಂಘಟನೆಗೆ ಹೆಚ್ಚು ಒತ್ತು ನೀಡಬೇಕು. ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಮಾಡುವಂತಾಗಬೇಕು. 12ನೇ ಶತಮಾನದಲ್ಲಿ ಎಲ್ಲ ವರ್ಗದ ಜನರನ್ನು ಒಂದುಗೂಡಿಸುವ ಕೆಲಸವನ್ನು ಬಸವಣ್ಣನವರ ಮಾಡಿದ್ದಾರೆ. ಅವರು ಹಾಕಿಕೊಟ್ಟ ಹಾದಿಯಲ್ಲಿ ಎಲ್ಲರೂ ನಡೆಯೋಣ ಎಂದು ಆಶಯ ವ್ಯಕ್ತಪಡಿಸಿದರು.
ಬೆಳಿಗ್ಗೆ ಸಮಾಜದ ಬಸವಂತಪ್ಪ ತೋಟದ ಲಿಂಗಧಾರಣೆ, ಸಹಜ ಶಿವಯೋಗ ಕಾರ್ಯಕ್ರಮ ನಡೆಸಿಕೊಟ್ಟರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದಂತಹ ಸಾಧಕರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ತಾಲೂಕಾ ಘಟಕದ ಅಧ್ಯಕ್ಷ ಅರುಣಕುಮಾರ ಶೀಲವಂತ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ವೀರಣ್ಣ ಮತ್ತಿಕಟ್ಟಿ, ಮಾಜಿ ಶಾಸಕಿ ಸೀಮಾ ಮಸೂತಿ, ಶರಣಪ್ಪ ಮತ್ತಿಕಟ್ಟಿ, ಮೃತುಂಜಯ್ ಕರಡಿಗುಡ್ಡ, ಮಹೇಶ್ ಬಿಳಿಹಾಲ್,ರವಿ ಕಪಲಿ,ಕುಂಬಾರಿ, ಗಾಂಜಿ,ಸಂತೋಷ್ ಪಟ್ಟಣಶೆಟ್ಟಿ,ಸಂಜೀವ್ ತುರಮರಿ,ಮಾಂತೇಶ ಗುಂಜೇಟ್ಟಿ,ಶೇಖರ ಕವಳಿ, ವ್ವಿ.ಸಿ. ಸವಡಿ, ಡಾ. ಸುಧೀರ ಜಂಬಗಿ, ವೀರಣ್ಣ ಮಳಗಿ, ವಿಜಯಲಕ್ಷ್ಮೀ ಕಲ್ಯಾಣಶೆಟ್ಟರ್, ಸೇರಿದಂತೆ ಬಸವರಾಜೇಶ್ವರಿ ಕೆಂಗಲ್ ಕಾರ್ಯಕ್ರಮ ನಿರೂಪಿಸಿದರು.