
(ಸಂಜೆವಾಣಿ ನ್ಯೂಸ್)
ಹುಬ್ಬಳ್ಳಿ,ಆ17: ನಗರದ ಹೂಗಾರ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ನಿಯಮಿತದ 9 ನೇ ವಾರ್ಷಿಕ ಸರ್ವ ಸಾಧಾರಣ ಸಭೆ ಸೆಪ್ಟೆಂಬರ್ 9 ರಂದು ಎಂಪ್ಲೈಯ್ಸ್ ಹಾಲ್‍ನಲ್ಲಿ ನಡೆಯಲಿದ್ದು, ಅಂದಿನ ಸಭೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಹೂಗಾರ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ಹುಬ್ಬಳ್ಳಿ ಅಧ್ಯಕ್ಷರಾದ ಲೋಚನೇಶ್ ಹೂಗಾರ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2022-23 ಬೇ ಸಾಲಿನಲ್ಲಿ ನಡೆದ ಎಸ್.ಎಸ್.ಎಲ್.ಸಿ, ಪಿಯುಸಿ, ಡಿಪೆÇ್ಲೀಮಾ, ಐ.ಟಿ.ಐ ಹಾಗೂ ಯಾವುದೇ ಪದವಿ ಪರೀಕ್ಷೆಯಲ್ಲಿ ಶೇ.85 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಉತ್ತೀರ್ಣರಾದ ಧಾರವಾಡ ಜಿಲ್ಲಾ ವ್ಯಾಪ್ತಿಯ ಹೂಗಾರ ಸಮಾಜದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳು ಅಗಸ್ಟ್ 31 ರೊಳಗಾಗಿ ಕಚೇರಿಗೆ ಸಂಪರ್ಕಿಸಿ ಸೂಕ್ತ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಲು ತಿಳಿಸಿದರು.
ಹೂಗಾರ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ನಿಯಮಿತ ಪ್ರಾರಂಭದಿಂದಲೂ ಇಲ್ಲಿಯವರೆಗೆ ಲಾಭದಲ್ಲಿಯೇ ಬರುತ್ತಿದ್ದು, 1266 ಸದಸ್ಯರನ್ನು ಒಳಗೊಂಡಿದೆ. ಇನ್ನೂ ಸಹಕಾರಿ ನಿಯಮಿತ ಒಟ್ಟು 32,22,500.00 ರೂ ಶೇರು ಬಂಡವಾಳ ಹೊಂದಿದೆ. 17,54,896.50 ನಿಧಿಗಳು, 1,68,82,789.00 ಠೇವಣಿಗಳು, 92,18,060.50 ಹೂಡಿಕೆಗಳನ್ನು ಹೊಂದಿದೆ. 2022-23 ಸಾಲಿನಲ್ಲಿ 9,31,375.00 ಲಾಭಾಂಶವನ್ನು ಹೊಂದಿದ್ದು, ಸದಸ್ಯರಿಗೆ ಶೇ.6 ರಷ್ಟು ಡಿವಿಡೆಂಡ್ ನೀಡುತ್ತಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗಿರಿಜಾ ಹೂಗಾರ, ಮಲ್ಲಿಕಾರ್ಜುನ ಹೂಗಾರ, ದೇವೇಂದ್ರ ಹೂಗಾರ, ಬಸವರಾಜ್ ಹೂಗಾರ, ಸುರೇಶ ಹೂಗಾರ ಉಪಸ್ಥಿತರಿದ್ದರು.