
ಕಲಬುರಗಿ,ನ.15-ನಗರದ ಕನ್ನಡ ಭವನದಲ್ಲಿ ಸಂಜೀವಿನಿ ಅಭಿವೃದ್ಧಿ ಸೇವಾ ಸಂಸ್ಥೆ ವತಿಯಿಂದ ಕನ್ನಡ ರಾಜ್ಯೋತ್ಸವದ ನಿಮಿತ್ಯವಾಗಿ ಕನ್ನಡ ಶಾಲೆಯ 10ನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಆಯೋಜಿಸಲಾಗಿತ್ತು.
ಮಾಜಿ ಸಂಸದ ಬಸವರಾಜ್ ಪಾಟೀಲ್ ಸೇಡಂ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂಸ್ಥೆಯ ಅಧ್ಯಕ್ಷÀ ಸುಂದರ ನವದಗಿ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ ಧ್ಯೇಯೋದ್ದೇದ್ದೇಶಗಳನ್ನು ವಿವರಿಸಿದರು. ಹರ್ಷನಂದ ಗುತ್ತೇದಾರ, ನೀಲಕಂಠರಾವ್ ಮೂಲಗೆ, ಗಿರಿರಾಜ್ ಎಸ್. ಯೇಳಮೇಲಿ, ವಿಜಯ್ ಮಾರ್ ತೆಗಲತಿಪ್ಪಿ, ಪ್ರಕಾಶ್ ಮಾಲಿಪಾಟೀಲ್, ರವಿ ದೆಗೌನ್ ಉಪಸ್ಥಿತರಿದ್ದರು.
ಆರ್.ಜೆ.ಮಂಜು ಕಾರ್ಯಕ್ರಮ ನಿರೂಪಿಸಿದರು.