
ಧಾರವಾಡ,ಆ22 :ಪ್ರತಿಯೊಬ್ಬರಲ್ಲೂ ಪ್ರತಿಭೆಇರುತ್ತದೆ. ಆ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಪ್ರಾಮಾಣಿಕತೆಯಿಂದಆಗಬೇಕಾಗಿದೆ.ಇತ್ತೀಚೆಗೆ ಪ್ರತಿಭಾ ಪುರಸ್ಕಾರಗಳು ಅರ್ಥ ಕಳೆದುಕೊಳ್ಳುತ್ತಿವೆ ಎಂದುಧಾರವಾಡ ಕೆ.ಇ.ಬೋರ್ಡ್ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಮೋಹನ ಎ. ಸಿದ್ಧಾಂತಿ ಹೇಳಿದರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘವು ಸಂಜಯ ಮತ್ತು ಪ್ರಿಯಾಆರ್. ಹೊರಡಿ ಹಾಗೂ ದಿ. ಪ್ರೊ.ಆರ್.ವಿ. ಹೊರಡಿದತ್ತಿ ಅಂಗವಾಗಿ ಆಯೋಜಿಸಿದ್ದ `ಪ್ರತಿಭಾ ಪುರಸ್ಕಾರ’ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಸಹಾಯ ಮಾಡಿದರೆಅದು ಮತ್ತೊಬ್ಬರಿಗೆಗೊತ್ತಾಗಬಾರದು.ಆ ರೀತಿ ಹೊರಡಿಅವರಗುಣವಾಗಿತ್ತು. ಹೊರಡಿಯವರು ಒಳ್ಳೆಯ ವಾಗ್ಮಿಗಳಾಗಿದ್ದರು. ನೇರ ಮತ್ತು ದಿಟ್ಟ ವ್ಯಕ್ತಿ.ಸಾಹಿತಿಗಳಾಗಿದ್ದರು.ಅವರ ಅನೇಕ ಲೇಖನಗಳು ಈಗ ಪ್ರಕಟಗೊಳ್ಳುತ್ತಿವೆ ಎಂದರು.
ಈಗಿನ ಮಕ್ಕಳು ಬಹಳ ಜಾಣರು.ಅವರಿಂದ ಶಿಕ್ಷಕರು ಕಲಿಯಬೇಕಾದ್ದು ಬಹಳ ಇದೆ.ಗುರಿಯನ್ನಿಟ್ಟುಕೊಂಡವರುಎಂದೂ ಹಿಂದೆ ನೋಡಬಾರದು, ಅವರ ಗಮನ ಗುರಿಯತ್ತಇಟ್ಟುಕೊಂಡು ಸಾಗಬೇಕು.ಬದುಕಿಗೆ ಮೂರೇ ದಿನ ಇಂದು-ನೆನ್ನೆ-ನಾಳೆ, ನಾವು ಕಲಿತಿದ್ದನ್ನುಇನ್ನೊಬ್ಬರಿಗೆ ಕಲಿಸಬೇಕು. ವಿದ್ಯೆ ನಿರಂತರವಾಗಿ ಹರಿಯಬೇಕು.
ಅಧ್ಯಕ್ಷತೆ ವಹಿಸಿ, ಕರ್ನಾಟಕ ಕಲಾ ಮಹಾವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ವ್ಹಿ.ಸಿ. ಸವಡಿ ಮಾತನಾಡಿ, ಹೊರಡಿಅವರು ಪಾಪು ಅವರ ಬಗ್ಗೆ ಅಪಾರಅಭಿಮಾನ ಹೊಂದಿದ್ದರು ಮತ್ತು ಒಳ್ಳೆಯ ಶಿಕ್ಷಕರಾಗಿದ್ದರು. ಹೊರಡಿಯವರ ಮತ್ತು ಮಕ್ಕಳ ಹೆಸರಿನಲ್ಲಿ ಪ್ರತಿಭಾ ಪುರಸ್ಕಾರ ನೀಡಿಕರ್ನಾಟಕ ವಿದ್ಯಾವರ್ಧಕ ಸಂಘವು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯಎಂದು, ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಕÀರ್ನಾಟಕ ವಿಜ್ಞಾನ ಮಹಾವಿದ್ಯಾಲಯದಲ್ಲಿ 2022-23ನೇ ಸಾಲಿನ ಪಿಯುಸಿ 2ನೇ ವರ್ಷದಲ್ಲಿಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಕು.ಕೃತಿಕಾಎಸ್. ಸೂರ್ಯವಂಶಿ ಮತ್ತು ಕು.ಸಿದ್ಧಲಿಂಗೇಶ ಮಹಾದೇವಪ್ಪ ಬೆಂಚಿಹಳ್ಳಿ ಅವರಿಗೆ ಸಂಜಯ ಮತ್ತು ಪ್ರಿಯಾಆರ್. ಹೊರಡಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರೆ, ಕರ್ನಾಟಕ ಕಲಾ ಮಹಾವಿದ್ಯಾಲಯದಲ್ಲಿ 2022-23ನೇ ಸಾಲಿನ ರಾಜ್ಯಶಾಸ್ತ್ರ ವಿಷಯದಲ್ಲಿ ಬಿ.ಎ. ದ್ವಿತೀಯ ವರ್ಷದಲ್ಲಿಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಕು. ಸಂಗಮೇಶ ಬಸವರಾಜ ಪಠಾಣಿ ಮತ್ತು ಕು.ಶ್ರೀದೇವಿ ಯಲ್ಲಪ್ಪ ವನಹಳ್ಳಿ ಅವರಿಗೆ ದಿ.ಪ್ರೊ.ಆರ್.ವಿ. ಹೊರಡಿ ಪ್ರತಿಭಾ ಪುರಸ್ಕಾರ ನೀಡಿಗೌರವಿಸಲಾಯಿತು. ಪ್ರತಿಭಾ ಪುರಸ್ಕಾರ ಸ್ವೀಕರಿಸಿದ ವಿದ್ಯಾರ್ಥಿಗಳು ಪ್ರತಿಕ್ರಿಯಿಸಿ ಸಂಘವು ನಮ್ಮ ಪ್ರತಿಭೆಯನ್ನು ಗುರುತಿಸಿ ಈ ಪುರಸ್ಕಾರ ನೀಡಿದ್ದುತುಂಬಾ ಸಂತಸತಂದಿದೆಎಂದು ಸಂಘಕ್ಕೆ ಕೃತಜ್ಞತೆ ಸಲ್ಲಿಸಿದರು.
ಗುರು ಹಿರೇಮಠ ಸ್ವಾಗತಿಸಿದರು.ಶಂಕರ ಕುಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವೇಶ್ವರಿ ಹಿರೇಮಠ ಸ್ವಾಗತಿಸಿದರು.ಡಾ. ಧನವಂತ ಹಾಜವಗೋಳ ವಂದಿಸಿದರು.
ಕಾರ್ಯಕ್ರಮದಲ್ಲಿ ಶಶಿಧರ ತೋಡಕರ, ಉಮೇಶ ಮೆಣಸಗಿ, ಎನ್.ಆರ್. ಬಾಳಿಕಾಯಿ, ಶಿವಾನಂದ ಭಾವಿಕಟ್ಟಿ, ವೆಂಕಟೇಶ ಮಾಚಕನೂರ, ಸತೀಶತುರಮರಿ, ಮುಕ್ತಾ ಸವದಿ, ಹಂಪಿಹೊಳಿ, ಕೆ.ಎಂ.ಅಂಗಡಿ, ಓ. ಕೊಟ್ರೇಶ, ಶಾಂತವೀರ ಬೆಟಗೇರಿ, ಶಿರಹಟ್ಟಿ, ಎಮ್.ಎಸ್. ಹಂದಿಗೋಳ, ಸಂಜಯ ಶಿರಹಟ್ಟಿ, ಮಹಾಂತೇಶ ನರೇಗಲ್, ಎಸ್.ಕೆ.ಕುಂದರಗಿ ಸೇರಿದಂತೆ ಮುಂತಾದವರಿದ್ದರು.