ಪ್ರತಿಭಾ ಪುರಸ್ಕಾರ, ಸನ್ಮಾನ

ಲಕ್ಷ್ಮೇಶ್ವರ,ಜೂ3: ಕರ್ನಾಟಕ ಪ್ರದೇಶ ಕುರುಬರ ಸಂಘದ ತಾಲ್ಲೂಕು ಘಟಕದ ವತಿಯಿಂದ ಭಾನುವಾರ ಹಾಲುಮತ ಸಮಾಜದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭ ಪಟ್ಟಣದ ಚೆನ್ನಮ್ಮನ ವನದಲ್ಲಿ ಜರುಗಿತು.
ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಕಾರ್ಯಕ್ರಮ ಉದ್ಘಾಟಿಸಿ ಹಾಲುಮತ ಸಮಾಜ ಒಗ್ಗಟ್ಟಿನಿಂದ ಇರಬೇಕು. ಇಂದು ಕುರುಬರ ಸಂಘದ ವತಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮ ಅರ್ಥಪೂರ್ಣವಾಗಿದೆ. ಪ್ರತಿಭೆಗಳನ್ನು ಗುರುತಿಸಿ ಪೆÇ್ರತ್ಸಾಹಿಸಿದ್ದು ಶ್ಲಾಘನೀಯ. ಸಂಘಟನೆಯೊಂದಿಗೆ ರಚನಾತ್ಮಕ ಕೆಲಸಗಳನ್ನು ಮಾಡಬೇಕು. ಇಂದಿನದು ಸ್ಪರ್ಧಾತ್ಮಕ ಜಗತ್ತು. ಪ್ರತಿಯೊಂದು ಕ್ಷೇತ್ರದಲ್ಲೂ ಸ್ಪರ್ಧೆ ಇದೆ. ಅದನ್ನು ಶಿಕ್ಷಣದಿಂದ ಮಾತ್ರ ಎದುರಿಸಲು ಸಾಧ್ಯ ಎಂಬುದನ್ನು ಮರೆಯಬಾರದು. ಮಹಿಳೆಯಿಂದ ಮಾತ್ರ ಸಮಾಜ ಸುಧಾರಣೆ ಸಾಧ್ಯ. ಅವರ ಜವಾಬ್ದಾರಿ ಬಹಳ ದೊಡ್ಡದು. ಮಕ್ಕಳಿಗೆ ವಿದ್ಯೆಯೊಂದಿಗೆ ಸಂಸ್ಕಾರ ನೀಡಬೇಕು. ಬಡ ಮಕ್ಕಳ ಶಿಕ್ಷಣಕ್ಕೆ ಸಮಾಜ ಸ್ಪಂದಿಸಬೇಕು' ಎಂದು ಹೇಳಿದರು. ಸಾನ್ನಿಧ್ಯ ವಹಿಸಿದ್ದ ಧಾರವಾಡದ ಮನ್ಸೂರಿನ ರೇವಣಸಿದ್ಧೇಶ್ವರ ಮಠದ ಬಸವರಾಜ ದೇವರು ಮಾತನಾಡಿಇಂದು ಶಿಕ್ಷಣಕ್ಕೆ ಬಹಳಷ್ಟು ಬೆಲೆ ಇದೆ. ಕಾರಣ ಹಾಲುಮತ ಸಮಾಜದವರು ಮಕ್ಕಳನ್ನು ಕುರಿ ಕಾಯಲು ಬಿಡದೆ ಅವರಿಗೆ ವಿದ್ಯೆ ಕೊಡಿಸಬೇಕು. ಜೀವನದಲ್ಲಿ ಎಷ್ಟೇ ಕಷ್ಟ ಎದುರಾದರೂ ಪಾಲಕರು ಸಹಿಸಿಕೊಂಡು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು. ವಿದ್ಯೆ ಇದ್ದವನಿಗೆ ಮಾತ್ರ ಈ ಜಗತ್ತಿನಲ್ಲಿ ಬೆಲೆ ಎಂಬುದನ್ನು ಮರೆಯಬಾರದು’ ಎಂದರು.
ಕರ್ನಾಟಕ ಪ್ರದೇಶ ಕುರುಬರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶೇಕಣ್ಣ ಕಾಳೆ ಅಧ್ಯಕ್ಷತೆ ವಹಿಸಿದ್ದರು. ಹುಲ್ಲೂರು ಅಮೋಘಿಮಠದ ಶ್ರೀಗಳು, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ವಿ.ಜಿ. ಪಡಿಗೇರಿ ಮಾತನಾಡಿದರು. ಪ್ರೊ.ಮಂಜುನಾಥ ಕೊಕ್ಕರಗುಂದಿ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಗಂಗಮ್ಮ ಗದ್ದಿ, ಶಿವಣ್ಣ ಕುರಿ, ನಿಂಗನಗೌಡ ಹೊಸಗೌಡ್ರ, ಯಲ್ಲಮ್ಮ ದುರ್ಗಣ್ಣವರ, ಭಾಗ್ಯಶ್ರೀ ಬಾಬಣ್ಣ, ಅಮರಪ್ಪ ಗುಡಗುಂಟಿ, ಛಾಯಪ್ಪ ಬಸಾಪುರ, ವೀರೇಂದ್ರಗೌಡ ಪಾಟೀಲ, ಮುದಕಣ್ಣ ಗದ್ದಿ, ಕವಿತಾ ಶೆರಸೂರಿ, ಗಂಗಮ್ಮ ಗದ್ದಿ, ಫಕ್ಕೀರೇಶ ಮ್ಯಾಟಣ್ಣವರ, ಎಚ್.ಎನ್. ಕೆರೂರ, ನೀಲಪ್ಪ ಶೆರಸೂರಿ, ಹರೀಶ ಲಕ್ಷ್ಮೇಶ್ವರ, ಬಸಣ್ಣ ಹೊಳಲಾಪುರ, ಹಾಲಪ್ಪ ಹಳ್ಳಿಕೇರಿ, ತಿಪ್ಪಣ್ಣ ಸಂಶಿ, ಬಿ.ಎನ್. ಸಂಶಿ, ಗವಿಸಿದ್ದಯ್ಯ ಹಳ್ಳಿಕೇರಿ, ಮಂಜುನಾಥ ಘಂಟಿ ಸೇರಿದಂತೆ ಮತ್ತಿತರರು ಇದ್ದರು.
ಪಲ್ಲವಿ ಚಾಕಲಬ್ಬಿ ಭರತ ನಾಟ್ಯ. ಪ್ರದರ್ಶಿಸಿದರು. ಯಲ್ಲಪ್ಪ ಸೂರಣಗಿ ಸ್ವಾಗತಿಸಿದರು. ಸುಭಾಷ ತಾಯಗೊಂಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಎನ್.ಎನ್. ಸಾವಿರಕುರಿ ನಿರೂಪಿಸಿದರು. ಬಸವರಾಜ ಯರಗುಪ್ಪಿ ವಂದಿಸಿದರು.