ಪ್ರತಿಭಾ ಪುರಸ್ಕಾರ ಪಡೆದ ರಾಜಾ ಅನಿಕೇತನ

ಅರಕೇರಾ.ನ.೧-ಕನಾರ್ಟಕ ಸರಕಾರ ಜಿಲ್ಲಾಡಳಿತ ಜಿಲ್ಲಾ ಪಂಚಾಯತ ಹಾಗೂ ಸಮಾಜಕಲ್ಯಾಣ ಇಲಾಖೆ ಆಶ್ರಯದಲ್ಲಿ ಕಾರವಾರ ನಗರದ ಜಿಲ್ಲಾಧಿಕಾರಿ ಕಛೇರಿಯಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪ್ರಸಕ್ತ ವರ್ಷಜಿಲ್ಲಿಗೆ ಎಸ್ ಎಸ್ ಎಲ್ ಸಿ.ಯಲ್ಲಿ ಪರಿಶಿಷ್ಠ ಪಂಗಡದಲ್ಲಿ ಪ್ರಥಮಸ್ಥಾನ ಗಳಿಸಿದ ದೇವದುರ್ಗ ತಾಲೂಕಿನ ಅರಕೇರಾ ಗ್ರಾಮದ ರಾಜಾ ಆನಿಕೇತನನಾಯಕದೊರೆ ಈತನಿಗೆ ಸರಕಾರ ಈವರ್ಷದಿಂದ ನೀಡುತ್ತಿರುವ ಹಲಗಲಿ ಬೇಡರ ಬಂಡಾಯದಲ್ಲಿ ಹುತಾತ್ಮರಾದ ಜಡಗ ಮತ್ತು ಬಾಲ ಇವರ ಹೆಸರಿನಲ್ಲಿ ಕೊಡುತ್ತಿರುವ ಪ್ರತಿಭಾ ಪುರಸ್ಕಾರವನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಕುಮಟಾದ ಸಿ.,ವಿ.ಎಸ್.ಕೆ ಪ್ರೌಢಶಾಲೆಯಲ್ಲಿ ಅಭ್ಯಾಸಮಾಡಿದ ಅರಕೇರಾದ ರಾಜಾ ಅನಿಕೇತನನಾಯಕದೊರೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ.೯೭.೪೪ ಪಡೆದು ಉತ್ತಮಸಾಧನೆ ಮಾಡಿದ್ದು ಈತನು ಅರಕೇರಾ ಗ್ರಾಮದ ಚಂದ್ರಶೇಖರನಾಯಕದೊರೆ ಮುಖ್ಯೋಪಾದಯ್ಯರು ಭದ್ರಕಾಳಿ ಪ್ರೌಢಶಾಲೆ ಗೋಕರ್ಣ ಹಾಗೂ ಕುಮಾಟ ತಾಲೂಕಿನ ತಾ.ಪಂ.ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯ ನೀಲಾಬಿಂಕಾನಾಯಕದೊರೆ ಇವರ ಸುಪುತ್ರ ರಾಜಾಅನಿಕೇತನ ದೊರೆ ಇವರಿಗೆ ಸಮಾರಂಭದಲ್ಲಿ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ.ಬಿಸಿಎಂ ಅಧಿಕಾರಿ ಬಸವರಾಜಬಡಿಗೇರಾ ಜಿಲ್ಲಾ ಸಮಾಜಕಲ್ಯಾಣ ಇಲಾಖೆ ಅಧಿಕಾರಿ ಪುರುಷೋತ್ತಮ್ ಡಿಡಿಪಿಯು ಎಸ್ ಎಂ.ಬಗಲಿ ತಾಲೂಕಾ ಪಂಚಾಯತಸದಸ್ಯ ಮಹೇಶಗಜಾನನಶೆಟ್ಟಿ ಗೋಕರ್ಣ ಭದ್ರಕಾಳಿ ಪದವಿಪೂರ್ವಕಾಲೇಜಿನ ಪ್ರಾಂಶುಪಾಲ ಎಸ್ ಸಿ.ನಾಯಕ ಉಪನ್ಯಾಸಕ ರಾಜಶೇಖರಬಾಗೇವಾಡಿ ಜಿಲ್ಲಾ ಪರಿಶಿಷ್ಠಪಂಗಡದ ನೌಕರರ ಸಂಘದ ಅಧ್ಯಕ್ಷಗಣೇಶ ಬಿಷ್ಯಣ್ಣವರ್ ಮುತಾದವರು ಥಾದವರು ಉಪಸ್ಥಿತರಿದ್ದರು.