ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಕುಂದಗೋಳ,ಸೆ 4: ತಾಲೂಕು ಕರ್ನಾಟಕ ಗಾಣಿಗ ಸಂಘ ಹಾಗೂ ಸಂಕ್ಲಿಪುರ ಗಾಣಿಗ ಸಂಘದ ಸಂಯುಕ್ತ ಆಶ್ರಯದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯ 50 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ, ಶಾಲು ಹೊದಿಸಿ ಪ್ರಶಸ್ತಿ ಫಲಕ ಮತ್ತು ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಅರ್ಥಿಕ ನೆರವು ನೀಡಿ ಪುರಸ್ಕರಿಸಲಾಯಿತು. ಹೂವಿನ ಶಿಗ್ಲಿಯ ವಿರಕ್ತಮಠದ ಚನ್ನವೀರ ಮಹಾಸ್ವಾಮಿಗಳು ಕಾರ್ಯಕ್ರಮ ಉದ್ಘಾಟಿಸಿದರು. ಸಾನಿಧ್ಯ ವಹಿಸಿದ್ದ ಮುಕ್ತಿಮಂದಿರದ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಹಮ್ಮಿಕೊಂಡಿದ್ದು ಸಂತಸ ತಂದಿದೆ. ಅದೇ ರೀತಿಯಲ್ಲಿ ಗಾಣಿಗ ಸಮಾಜ ಜನರು ಒಗ್ಗಟ್ಟಿನಿಂದ ಇದೆ ರೀತಿ ಸಹಭಾಹ್ವೆ ಮಾಡಲಿ. ಒಬ್ಬರಿಗೊಬ್ಬರು ಪರಸ್ಪರ ಸಹಾಯ, ಸ್ನೇಹ ಸಂಬಂಧ ಹೊಂದಿರಲಿ. ಪ್ರತಿಯೊಬ್ಬರೂ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುವಂತಾಗಲಿ ಎಂದರು.
ಪ್ರಾಸ್ತಾವಿಕವಾಗಿ ಸಮಾಜದ ಮುಖಂಡ ಫಕ್ಕಿರೇಶ ಜುಂಜೂರಿ ಮಾತನಾಡಿ ನಮ್ಮ ಸಮಾಜದ ಜನರ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸುವ ಮತ್ತು ಪೆÇ್ರೀತ್ಸಾಹಿಸುವ ದೃಷ್ಟಿಯಿಂದ ಪ್ರತಿಭಾ ಪುರಸ್ಕಾರ ಹಮ್ಮಿಕೊಂಡಿದ್ದೇವೆ. ಇದು ಪ್ರತಿವರ್ಷ ನಡೆಯುವಂತಾಗಲಿ. ನಮ್ಮ ಸಮಾಜದ ಜನರು ಒಗ್ಗೂಡಬೇಕೆಂದ ಅವರು ಸಂಕ್ಲಿಪುರ ಗಾಣಿಗ ಸಂಘ ನಡೆದ ಬಂದ ಹಾದಿ ಬಗ್ಗೆ ವಿಸ್ತ್ರತವಾಗಿ ತಿಳಿಸಿದರು. ಸಮಾಜದ ಸರ್ವ ಬಾಂಧವರು ಸದಾ ಒಗ್ಗಟಾಗಿರಿ ಎಂದು ಕರೆ ನೀಡಿದರು.
ಕುಂದಗೋಳ ತಾಲೂಕು ಗಾಣಿಗ ಸಂಘದ ಅಧ್ಯಕ್ಷ ಈರಪ್ಪ ಶೆರೇವಾಡ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಶಾಸಕಿ ಕುಸುಮಾವತಿ ಶಿವಳ್ಳಿ, ಧಾರವಾಡ ಅಸಿಸ್ಟೆಂಟ್ ಕಮಿಷನರ್ ಅಶೋಕ ತೇಲಿ, ಮಾಜಿ ಶಾಸಕ ಶಿವರಾಜ ಸಜ್ಜನ, ಅ.ಭಾ.ಗಾ ಸಂಘದ ಗೌರವಾಧ್ಯಕ್ಷ ಡಾ.ಶೇಖರ ಸಜ್ಜನರ, ಪ್ರದಾನ ಕಾರ್ಯದರ್ಶಿ ಪಿ.ಎಂ.ತಟ್ಟಿಮನಿ, ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡ್ರ, ಎಂ.ಎಸ್.ಅಕ್ಕಿ, ಧಾರವಾಡ ಜಿಲ್ಲಾಧ್ಯಕ್ಷ ಬಸವರಾಜ ಕುಂದಗೋಳಮಠ, ಮುಖಂಡರಾದ ಜಗದೀಶ್ ಉಪ್ಪಿನ, ರುದ್ರಣ್ಣ ಗಾಣಿಗೇರ್, ಶಿವನಗೌಡ್ರ ಗುಂಜಾಳ, ಗಂಗಾಧರ ದರೇನವರ, ಚಂದ್ರಶೇಖರ ಬೀಸೆರೋಟ್ಟಿ, ರಾಮನಗೌಡ ಪಾಟೀಲ್, ಮಲ್ಲಿಕಾರ್ಜುನ ಸವದತ್ತಿ, ಪುಷ್ಪಾವತಿ ಕಂಬಳಿ, ಗ್ರಾಮದ ಗುರು ಹಿರಿಯರು, ಯುವಕರು, ಮಕ್ಕಳು ಸೇರಿದಂತೆ ಮುಂತಾದವರು ಇದ್ದರು.