ಪ್ರತಿಭಾ ಕಾರಂಜಿ :  ತಾಲ್ಲೂಕು ಮಟ್ಟಕ್ಕೆ ಆಯ್ಕೆ

ಚಿತ್ರದುರ್ಗ.ಸೆ.೨೧; ಚಿತ್ರದುರ್ಗ ತಾಲ್ಲೂಕು ತುರುವನೂರು ಹೋಬಳಿ ಹಂತದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಲ್ಲಿ ತುರುವನೂರು ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗದ) ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಯನ್ನು ಪಡೆದಿದ್ದಾರೆ.  ಇಂಗ್ಲಿμï ಭಾಷಣದಲ್ಲಿ ಎ.ಸಿ.ಹರ್ಷಿತ, ಭರತನಾಟ್ಯದಲ್ಲಿ ರಕ್ಷಿತ ಗೌಡ, ಚಿತ್ರಕಲೆಯಲ್ಲಿ ಅಜಯ್.ಎಸ್.ಜಂಗ್ಲಿ, ಧಾರ್ಮಿಕ ಪಠಣ ಅರೇಬಿಕ್‍ನಲ್ಲಿ ಸಾನಿಯಾ.ಎಸ್.ಅಂಜುಮ್, ಜಾನಪದ ನೃತ್ಯ ಸ್ಪರ್ಧೆಯಲ್ಲಿ ಅಭಿμÉೀಕ್ ಮತ್ತು ತಂಡ, ರಂಗೋಲಿ ಸ್ಪರ್ಧೆಯಲ್ಲಿ ಎಂ.ಮೋನಿಕ ಪ್ರಥಮ ಸ್ಥಾನ ಪಡೆದು ತಾಲ್ಲೂಕು ಹಂತಕ್ಕೆ ಆಯ್ಕೆಯಾಗಿದ್ದಾರೆ.ಸ್ಪರ್ಧೆಯಲ್ಲಿ ಭಾಗವಹಿಸಿ ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಶಾಲೆಯ ಉಪ ಪ್ರಾಂಶುಪಾಲರಾದ ಕಿರಣ್ಮಯಿ ಆರ್.ಬಂಡಿಗಡಿ, ಎಸ್‍ಡಿಎಂಸಿ ಅಧ್ಯಕ್ಷರದ ರಾಮ್ ಮೋಹನ್ ಅಭಿನಂದಿಸಿದ್ದಾರೆ.