ಪ್ರತಿಭಾ ಕಾರಂಜಿ ತಾಲ್ಲೂಕು ಮಟ್ಟಕ್ಕೆ ಆಯ್ಕೆಗೆ ಹರ್ಷ

ಜೇವರ್ಗಿ :ಸೆ.23 : ತಾಲ್ಲೂಕಿನ ಹಿಪ್ಪರಗಾ ಎಸ್.ಎನ್. ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲಿಕೋತ್ಸವ ಕಾರ್ಯಕ್ರಮ ಮುತ್ತಖೋಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸ್ಪರ್ಧೆಗಳಲ್ಲಿ ಸೊನ್ನ ಗ್ರಾಮದ ಶ್ರೀ ಭೀಮರಾಯ ಕೊಂಗಂಡಿ ಅನುಧಾನಿತ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಸಾಧನೆ ಮಾಡಿದ್ದಾರೆ.

ನಾಲ್ಕನೇ ತರಗತಿ ವಿದ್ಯಾರ್ಥಿ ಕು.ಶ್ರೇಯಸ ತಂದೆ ಮಲ್ಲಿಕಾರ್ಜುನ ಚಿತ್ರಕಲೆ ಮತ್ತು ಕ್ಲೇ ಮಾಡಲಿಂಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ. ಎರಡನೇ ತರಗತಿ ವಿದ್ಯಾರ್ಥಿನಿ ಕು.ಕಾವೇರಿ ಸಿದ್ದಣ್ಣ ಛದ್ಮ ವೇಷ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ.
ಏಳನೇ ತರಗತಿಯ ವಿದ್ಯಾರ್ಥಿ ಕು. ಶರಣಬಸಪ್ಪ ಆನಂದ ಚಿತ್ರಕಲೆಯಲ್ಲಿ ಪ್ರಥಮ ಸ್ಥಾನ.ಹಾಗೂ ನಾಲ್ಕನೇ ತರಗತಿಯ ವಿದ್ಯಾರ್ಥಿನಿ ಕು. ಪ್ರಿಯದರ್ಶಿನಿ ಯಲ್ಲಪ್ಪ ಅಭಿನಯ ಗೀತೆಯಲ್ಲಿ ದ್ವೀತಿಯ ಸ್ಥಾನ ಪಡೆದು ಜೇವರ್ಗಿ ತಾಲ್ಲೂಕು ಮಟ್ಟಕ್ಕೆ ಆಯ್ಕೆ ಆಗಿದ್ದಕ್ಕೆ ಸಂಸ್ಥೆಯ ಅಧ್ಯಕ್ಷರಾದ ಡಾ.ಶ್ರೀ ಶಿವಾನಂದ ಮಹಾಸ್ವಾಮೀಜಿ, ಮುಖ್ಯಗುರು ಸರಸ್ವತಿ ಮಲ್ಲಿಕಾರ್ಜುನ ಬಿರಾದಾರ, ಸಂಸ್ಥೆಯ ಕಾರ್ಯದರ್ಶಿ ಮಲ್ಲಿಕಾರ್ಜುನ ಕಮಲಾಪುರ, ಸೋಮಶೇಖರ ಕಕ್ಕಳಮೇಲಿ, ಮಲ್ಲಿಕಾರ್ಜುನರೆಡ್ಡಿ,
ಮಲ್ಲಿಕಾರ್ಜುನ ಸುಬೇದಾರ, ದೇವಿಂದ್ರಪ್ಪ ಪಾಟೀಲ, ಶಂಕರ ರಾಥೋಡ, ಪುರಂದರ ನಾಯಕ, ಕಮಲಾ ಬಜೇಂತ್ರಿ, ಮಂಜುಳಾ ಬಸರಕೋಡ, ದೈಹಿಕ ಶಿಕ್ಷಕ ಮಲ್ಲಣಗೌಡ ಬಿರಾದಾರ ಹರ್ಷ ವ್ಯಕ್ತಪಡಿಸಿದ್ದಾರೆ.